ಕಾಮಗಾರಿ ಬಿಲ್ ಗಾಗಿ ಕೆರೆಯ ಹೆಸರನ್ನೇ ಬದಲಿಸಿದ ಪ್ರಕರಣ …ಮೂವರು ಅಧಿಕಾರಿಗಳಿಂದ ಬಿಲ್ ಹಣ ವಸೂಲಿ ಮಾಡುವಂತೆ ಓಂಬಡ್ಸ್ ಮನ್ ಆದೇಶ…
- TV10 Kannada Exclusive
- March 5, 2024
- No Comment
- 95
ಹುಣಸೂರು,ಮಾ5,Tv10 ಕನ್ನಡ
ಕಾಮಗಾರಿ ಬಿಲ್ ಪಾವತಿಗಾಗಿ ಕೆರೆಯ ಹೆಸರನ್ನೇ ಬದಲಿಸಿದ ಪ್ರಕರಣಕ್ಕೆ ಓಂಬಡ್ಸ್ ಮನ್ ಅಧಿಕಾರಿಗಳು ಚಾಟಿ ಬೀಸಿದ್ದಾರೆ.ಬಿಲ್ ಪಾವತಿಸಿದ ಅಧಿಕಾರಿಗಳಿಂದ ವಸೂಲಿ ಮಾಡುವಂತೆ ಓಂಬುಡ್ಸ್ ಮೆನ್ ನ ಮಹಾತ್ಮಗಾಂಧಿ ನರೇಗಾ ಯೋಜನೆ ಅಧಿಕಾರಿ ಡಾ.ರಮೇಶ್ ರವರು ಆದೇಶಿಸಿದ್ದಾರೆ. ಮೂವರು ಅಧಿಕಾರಿಗಳು 1.12,497/- ರೂಗಳನ್ನ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೂಲ ಖಾತೆಗೆ ಜಮಾ ಮಾಡಬೇಕಿದೆ.ಹುಲ್ಲುಕೆರೆ ಗ್ರಾಮ ಪಂಚಾಯ್ತಿ ಹಾಲಿ ಅಧ್ಯಕ್ಷ ಸತೀಶ್,ಪಾಂಚಾಯ್ತಿ ಅಭಿವೃದ್ದಿ ಅಧಿಕಾರಿ ರವಿ ಹಾಗೂ ತಾಂತ್ರಿಕ ಸಹಾಯಕ ಅಭಿಯಂತರ ನಂದ ಶ್ರೀನಿವಾಸ್ ರವರು ತಲಾ 37,499/ – ರೂ ಪಾವತಿಸಬೇಕಿದೆ.
ಹುಣಸೂರು ತಾಲೂಕು ಚಿಲ್ಕುಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.ಚಿಲ್ಕುಂದ ಗ್ರಾಮದ ತೊಂಡೆಕೆರೆ ಅಭಿವೃದ್ದಿಗಾಗಿ ಗುತ್ತಿಗೆದಾರನಿಗೆ ಕಾಮಗಾರಿ ಜವಾಬ್ದಾರಿ ನೀಡಲಾಗಿತ್ತು.ಆದರೆ ತೊಂಡೆಕೆರೆ ಬದಲು ಹುಲ್ಲುಕೆರೆಯಲ್ಲಿ ಕಾಮಗಾರಿ ನಡೆಸಿದ್ದಾರೆ.ಈ ವಿಚಾರ ಗ್ರಾಮದ ಮುಖಂಡ ಪ್ರೇಂಕುಮಾರ್ ಎಂಬುವರು ಬೆಳಕಿಗೆ ತಂದಿದ್ದರು.ತಮ್ಮ ತಪ್ಪನ್ನ ಮುಚ್ಚಿಕೊಳ್ಳಲು ಹುಲಿಕೆರೆಗೆ ತೊಂಡೆಕೆರೆ ಎಂಬ ನಾಮಫಲಕ ಅಳವಡಿಸಿದ್ದ ಅಧಿಕಾರಿಗಳು ಮತ್ತೊಂದು ಎಡವಟ್ಟು ಮಾಡಿದ್ದರು.ಸರ್ಕಾರಿ ದಾಖಲೆಗಳ ಪ್ರಕಾರ ಸಧ್ಯ ಅಳವಡಿಸಿರುವ ತೊಂಡೆಕೆರೆ ಪ್ರದೇಶ ಹುಲ್ಲುಕೆರೆ ಎಂದು ತೋರಿಸುತ್ತಿದೆ.ಸ್ಥಳೀಯರೂ ಸಹ ಹುಲ್ಲುಕೆರೆ ಎಂದೇ ಹೇಳುತ್ತಿದ್ದಾರೆ.ಕೇವಲ ಬಿಲ್ ಪಾವತಿಗಾಗಿ ಕೆರೆಯ ಹೆಸರನ್ನ ಬದಲಿಸಿರುವ ಭೂಪರಿಗೆ ಶಿಕ್ಷೆ ಆಗಬೇಕೆಂದು ಪ್ರೇಂಕುಮಾರ್ ರವರು ಮೈಸೂರಿನ ಜಿಲ್ಲಾ ಲಂಚಾಯತ್ ಕಚೇರಿಯಲ್ಲಿರುವ ಓಂಬುಡ್ಸ್ ಮನ್ ಗೆ ದೂರು ನೀಡಿದ್ದರು.ಈಗಾಗಲೇ ಈ ಅಕ್ರಮದ ಬಗ್ಗೆ ತನಿಖೆ ನಡೆಸುವುದಾಗಿ ತಾಲೂಕು ಇಓ ಮನು ರವರು ತಿಳಿಸಿದ್ದರು.ಸಧ್ಯ ಈ ಹಗರಣದ ಬಗ್ಗೆ ಫೆ21 ರಂದು ಓಂಬಡ್ಸ್ ಮನ್ ನಲ್ಲಿ ವಿಚಾರಣೆ ನಿಗದಿಯಾಗಿತ್ತು.ಕೇವಲ 1.12 ಲಕ್ಷ ಬಿಲ್ ಗಾಗಿ ಕೆರೆಯ ಹೆಸರನ್ನೇ ಬದಲಿಸಿದ ಭೂಪರ ಬಣ್ಣ ಬಯಲು ಮಾಡಲಾಗಿದೆ.ಮೂವರು ಅಧಿಕಾರಿಗಳಿಂದ ಹಣ ವಸೂಲಿ ಮಾಡುವಂತೆ ಆದೇಶಿಸಲಾಗಿದೆ…