ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ದಂಧೆ ಮೇಲೆ ವಿಜಯನಗರ ಠಾಣೆ ಪೊಲೀಸರ ದಾಳಿ…ರಾಜಾಸ್ಥಾನ್ ಮೂಲದ ನಾಲ್ವರ ಬಂಧನ…95 ಗ್ಯಾಸ್ ಸಿಲಿಂಡರ್ ವಶ…
- TV10 Kannada Exclusive
- March 20, 2024
- No Comment
- 206
ಮೈಸೂರು,ಮಾ20,Tv10 ಕನ್ನಡ
ಗೃಹಬಳಕೆ ಸಿಲಿಂಡರ್ ಗಳಿಂದ ವಾಣಿಜ್ಯ ಸಿಲಿಂಡರ್ ಗಳಿಗೆ ಅಕ್ರಮವಾಗಿ ರೀಫಿಲ್ಲಿಂಗ್ ಮಾಡುತ್ತಿದ್ದ ದಂಧೆ ಮೇಲೆ ವಿಜಯನಗರ ಠಾಣೆ ಪೊಲೀಸರು ದಾಳಿ ನಡೆಸಿ ರಾಜಾಸ್ಥಾನ್ ಮೂಲದ ನಾಲ್ವರನ್ನ ಬಂಧಿಸಿದ್ದಾರೆ.ಬಂಧಿತರಿಂದ ವಿವಿದ ಗ್ಯಾಸ್ ಕಂಪನಿಯ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ 95 ಸಿಲಿಂಡರ್ ಗಳನ್ನ ವಶಪಡಿಸಿಕೊಂಡಿದ್ದಾರೆ.ಅಲ್ಲದೆ ಗ್ಯಾಸ್ ರೀಫಿಲ್ಲಿಂಗ್ ಗಾಗಿ ಬಳಸುತ್ತಿದ್ದ 12 ರಾಡ್ ಗಳು ಮತ್ತು ಎರಡು ವಾಹನಗಳನ್ನೂ ಸಹ ವಶಕ್ಕೆ ಪಡೆದಿದ್ದಾರೆ.ರಾಜಾಸ್ಥಾನ್ ನ ಸುನಿಲ್ ಕುಮಾರ್,ದಿನೇಶ್,ಕೈಲಾಸ್,ಸುಭಾಷ್ ಭಿಷ್ಣೋಯಿ ಬಂಧಿತರು.ಮೈಸೂರಿನ ವಿಜಯನಗರ ನಾಲ್ಕನೇ ಹಂತದ ಖಾಲಿ ನಿವೇಶನವೊಂದರಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ನಾಲ್ವರು ದಂಧೆಕೋರರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ವಿಜಯನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.ಸಂಭಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ರೀಫಿಲ್ಲಿಂಗ್ ಮಾಡುತ್ತಿದ್ದುದು ದಾಳಿ ವೇಳೆ ಕಂಡು ಬಂದಿದೆ.ದಾಳಿ ನಡೆಸಿದ ವಿಜಯನಗರ ಠಾಣೆ ಪೊಲೀಸರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳನ್ನ ಕರೆಸಿ ಪರಿಶೀಲನೆ ನಡೆಸಿ ಅಕ್ರಮವನ್ನ ಧೃಢಪಡಿಸಿಕೊಂಡಿದ್ದಾರೆ.ಹೆಚ್.ಪಿ,ಭಾರತ್ ಹಾಗೂ ಇಂಡೇನ್ ಕಂಪನಿಯ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ 95 ಸಿಲಿಂಡರ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.ಲಿಕ್ವಿಫಾಡ್ ಪೆಟ್ರೋಲಿಯಂ ಗ್ಯಾಸ್ ಕಂಟ್ರೋಲರ್ ಆರ್ಡರ್ 2000 ಹಾಗೂ ಅಗತ್ಯ ವಸ್ತು ಕಾಯ್ದೆ 3&7 ಅನ್ವಯದಂತೆ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ…