ಮದುವೆ ಆಗುವಂತೆ ಒತ್ತಾಯಿಸಿ ಪ್ರೇಯಸಿಯನ್ನ ಕೊಂದ ಆರೋಪ ಸಾಬೀತು…ಹಂತಕನಿಗೆ ಜೀವಾವಧಿ ಶಿಕ್ಷೆ…

ಮದುವೆ ಆಗುವಂತೆ ಒತ್ತಾಯಿಸಿ ಪ್ರೇಯಸಿಯನ್ನ ಕೊಂದ ಆರೋಪ ಸಾಬೀತು…ಹಂತಕನಿಗೆ ಜೀವಾವಧಿ ಶಿಕ್ಷೆ…

ಮೈಸೂರು,ಮಾ22,Tv10 ಕನ್ನಡ

ಮದುವೆ ಆಗುವಂತೆ ಒತ್ತಾಯಿಸುತ್ತಿದ್ದ ಪ್ರೇಯಸಿಯ ಉಸಿರುಗಟ್ಟಿಸಿ ಕೊಲೆಗೈದ ಆರೋಪ ಸಾಬೀತಾದ ಹಿನ್ನಲೆ ಹಂತಕನಿಗೆ ಮೈಸೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿಯ ಹಾಡ್ಯಾ ಗ್ರಾಮದ ನಾಗೇಶ್ ಶಿಕ್ಷೆಗೆ ಒಳಗಾದ ಹಂತಕ.ಮೈಸೂರಿನ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಭಾಗ್ಯ ರವರು ತೀರ್ಪು ನೀಡಿದ್ದಾರೆ.2019 ರಲ್ಲಿ ಲಕ್ಷ್ಮಿ ಎಂಬಾಕೆಯನ್ನ ಕೊಲೆ ಮಾಡಿದ ಆರೋಪ ಹೊತ್ತಿದ್ದ ನಾಗೇಶ್ ಇದೀಗ ಆರೋಪ ಸಾಬೀತಾದ ಹಿನ್ನಲೆ ಶಿಕ್ಷೆಗೆ ಒಳಗಾಗಿದ್ದಾನೆ.ಪತಿಯನ್ನ ಕಳೆದುಕೊಂಡಿದ್ದ ಲಕ್ಷ್ಮಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದಾಗ ನಾಗೇಶ್ ಪರಿಚಯವಾಗಿದ್ದಾನೆ.ತಾಯಿ ಮನೆಯಲ್ಲಿ ವಾಸವಿದ್ದ ಲಕ್ಷ್ಮಿಯನ್ನ ಮದುವೆ ಆಗುವುದಾಗಿ ನಂಬಿಸಿ ಬೇರೆ ಮನೆ ಮಾಡಿ ಇರಿಸಿದ್ದ.ಮದುವೆ ಆಗುವಂತೆ ಲಕ್ಷ್ಮಿ ಆಗಾಗ ನಾಗೇಶ್ ಮೇಲೆ ಒತ್ತಡ ಹೇರುತ್ತಿದ್ದಳು.ಮದುವೆಯಿಂದ ತಪ್ಪಿಸಿಕೊಳ್ಳಲು ನಾಗೇಶ್ ಲಕ್ಷ್ಮಿಯನ್ನ ಉಸಿರುಗಟ್ಟಿಸಿ ಕೊಂದಿದ್ದ.ಹುಲ್ಲಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ವಿರುದ್ದ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ವಾದ ವಿವಾದಗಳ ನಂತೆ ನಾಗೇಶ್ ಮೇಲಿನ ಕೊಲೆ ಆರೋಪ ಸಾಬೀತಾಗಿದ್ದು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಟಿ.ಹೆಚ್.ಲೋಲಾಕ್ಷಿ ವಾದ ಮಂಡಿಸಿದ್ದಾರೆ…

Spread the love

Related post

ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ…

ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ…

ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ… ಮೈಸೂರು,ಅ16,Tv10 ಕನ್ನಡ ಮಾಧ್ಯಮದ ಗೆಳೆಯರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ ಕ್ಲಿಕ್ಕಿಸಿದ್ದಾರೆ.ಚಾಮುಂಡಿ ಬೆಟ್ಟಕ್ಕೆ ಭೇಟಿ‌ ನೀಡಿದ ವೇಳೆತಾವೇ ಮೊಬೈಲ್ ಪಡೆದು ಸೆಲ್ಫಿ…
ಉಪ ಪ್ರಾಂಶುಪಾಲರಾಗಿ ನೇಮಕ ಮಾಡುವ ಆಮಿಷ…7.45 ಲಕ್ಷ ವಂಚನೆ…ಸಿಎಆರ್ ಮುಖ್ಯಪೇದೆ,ಪತ್ನಿ ಸೇರಿದಂತೆ 7 ಮಂದಿ ವಿರುದ್ದ FIR…

ಉಪ ಪ್ರಾಂಶುಪಾಲರಾಗಿ ನೇಮಕ ಮಾಡುವ ಆಮಿಷ…7.45 ಲಕ್ಷ ವಂಚನೆ…ಸಿಎಆರ್ ಮುಖ್ಯಪೇದೆ,ಪತ್ನಿ ಸೇರಿದಂತೆ…

ಮೈಸೂರು,ಅ16,Tv10 ಕನ್ನಡ ಪಿಯು ಕಾಲೇಜಿಗೆ ಉಪ ಪ್ರಾಂಶುಪಾಲರಾಗಿ ಹಾಗೂ ಟ್ರಸ್ಟ್ ಗೆ ಟ್ರಸ್ಟಿಯಾಗಿ ನೇಮಕ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಸಿಎಆರ್ ಮುಖ್ಯಪೇದೆ ಹಾಗೂ ಪತ್ನಿ 7.45 ಲಕ್ಷ ವಂಚಿಸಿದ…
ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…

Leave a Reply

Your email address will not be published. Required fields are marked *