ಪತ್ನಿ ಆತ್ಮಹತ್ಯೆ…ಹೃದಯಾಘಾತದಿಂದ ಪತಿ ಸಾವು…ಸಾವಿನಲ್ಲೂ ಒಂದಾದ ದಂಪತಿ…
- TV10 Kannada Exclusive
- March 30, 2024
- No Comment
- 157
ಮೈಸೂರು,ಮಾ30,Tv10 ಕನ್ನಡ
ಆತ್ಮಹತ್ಯೆಗೆ ಶರಣಾದ ಪತ್ನಿಯ ಸಾವಿನ ಸುದ್ದಿ ಅರಿತ ಪತಿ ಶಾಕ್ ನಿಂದ ಹೃದಯಾಘಾತಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಂಪುರದಲ್ಲಿ ನಡೆದಿದೆ.ವಿಜಯಲಕ್ಷ್ಮಿ(52) ಆತ್ಮಹತ್ಯೆಗೆ ಶರಣಾದ ಪತ್ನಿ.ಶಾಕ್ ನಿಂದ ಹೃದಯಾಘಾತಕ್ಕೆ ಪತಿ ಮಂಜುನಾಥ್(58) ಸಾವು.
ವಿಜಯಲಕ್ಷ್ಮಿ ಅನಾರೋಗ್ಯದಿಂದ ಬಳಲುತ್ತಿದ್ದರು.ಚಿಕಿತ್ಸೆಯಿಂದ ಗುಣಮುಖರಾಗದ ಹಿನ್ನಲೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಪತ್ನಿಯ ಅಗಲಿಕೆ ಸುದ್ದಿ ಅರಿತ ಪತಿ ಮಂಜುನಾಥ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ.ಕೂಡಲೇ ಮಂಜುನಾಥ್ ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಸಹ ಮೃತಪಟ್ಟಿದ್ದಾರೆ.ಸಾವಿನಲ್ಲೂ ಸಹ ಪತ್ನಿಯ ಜೊತೆ ಪತಿ ಒಂದಾಗಿದ್ದಾರೆ.ಅಶೋಕಾಪುರಂ ನಲ್ಲಿರುವ ರೈಲ್ವೆ ವರ್ಕ್ ಷಾಪ್ ನಲ್ಲಿ ಮಂಜುನಾಥ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.ದಂಪತಿಗೆ ಇಬ್ಬರು ಮಕ್ಕಳಿದ್ದ ಮಗ ಅಮೆರಿಕದಲ್ಲಿ ನೆಲೆಸಿದ್ದಾರೆ.ಮಗಳು ಮೈಸೂರಿನಲ್ಲಿ ವಿಧ್ಯಾಭ್ಯಾಸ ಮುಂದೆವರೆಸಿದ್ದಾರೆ.ಈ ಸಂಭಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…