ವಿಚ್ಛೇದನ ಪಡೆದಿದ್ದರೂ ಅತ್ತೆ,ಗಂಡನಿಂದ ಕಿರುಕುಳ ಆರೋಪ…ಗೃಹಿಣಿ ಆತ್ಮಹತ್ಯೆ…

ವಿಚ್ಛೇದನ ಪಡೆದಿದ್ದರೂ ಅತ್ತೆ,ಗಂಡನಿಂದ ಕಿರುಕುಳ ಆರೋಪ…ಗೃಹಿಣಿ ಆತ್ಮಹತ್ಯೆ…

ಮೈಸೂರು,ಮಾ30,Tv10 ಕನ್ನಡ

ವಿಚ್ಛೇದನ ಪಡೆದಿದ್ದರೂ ಅತ್ತೆ ಹಾಗೂ ಗಂಡ ನೀಡಿದ ಮಾನಸಿಕ ಕಿರುಕುಳಕ್ಕೆ ಬೇಸತ್ತ ಗೃಹಿಣಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಜನತಾನಗರದಲ್ಲಿ ನಡೆದಿದೆ.ಲಕ್ಷ್ಮಿ(39) ಮೃತ ದುರ್ದೈವಿ.19 ವರ್ಷಗಳ ಹಿಂದೆ ನಾರಾಯಣ ಎಂಬಾತನನ್ನ ವಿವಾಹವಾಗಿದ್ದ ಲಕ್ಷ್ಮಿ ಎರಡು ಮಕ್ಕಳ ತಾಯಿ ಆಗಿದ್ದರು.ಕೌಟುಂಬಿಕ ಕಲಹ ಹಿನ್ನಲೆ ಇಬ್ಬರೂ ವಿಚ್ಛೇದನ ಪಡೆದಿದ್ದರು.ಹೀಗಿದ್ದರೂ ಇಬ್ಬರನ್ನ ಒಂದು ಮಾಡುವ ರಾಜಿ ಸಂಧಾನ ವಿಫಲವಾಗಿತ್ತು.ಮಕ್ಕಳು ಗಂಡನ ಜೊತೆ ಇದ್ದರು. ಜನತಾ ನಗರದ ಒಂದೇ ರಸ್ತೆಯಲ್ಲಿ ಲಕ್ಷ್ಮಿ ಪ್ರತ್ಯೇಕವಾಗಿ ವಾಸವಿದ್ದರು.ಮಕ್ಕಳು ತನ್ನಿಂದ ದೂರ ಇದ್ದರೆಂಬ ನೋವು ಲಕ್ಷ್ಮಿಯನ್ನ ಕಡುತ್ತಿತ್ತು.ಜೊತೆಗೆ ಅತ್ತೆ ದೇವಮ್ಮ ಹಾಗೂ ಗಂಡ ಚುಚ್ಚುಮಾತುಗಳನ್ನ ಆಡಿ ನಿಂದಿಸುತ್ತಿದ್ದರು.ಇದರಿಂದ ಮನನೊಂದ ಲಕ್ಷ್ಮಿ ನೇಣಿಗೆ ಶರಣಾಗಿದ್ದಾರೆ.ಅತ್ತೆ ಹಾಗೂ ಗಂಡನ ಕಿರುಕುಳದಿಂದಾಗಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸಹೋದರ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *