
ಜಗಳ ಬಿಡಿಸಲು ಬಂದ ಸರ್ಕಾರಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ…ಮಹಿಳೆ ವಿರುದ್ದ ಪ್ರಕರಣ ದಾಖಲು…
- TV10 Kannada Exclusive
- March 30, 2024
- No Comment
- 120
ಮೈಸೂರು,ಮಾ30,Tv10 ಕನ್ನಡ
ಬಸ್ ನಲ್ಲಿ ಇಬ್ಬರು ಮಹಿಳೆಯರ ಮಧ್ಯೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಕೆ.ಎಸ್.ಆರ್.ಟಿ.ಸಿ.ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆದಿದೆ.ಮಹಿಳೆ ಮೇಲೆ ಕಂಡಕ್ಟರ್ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೈಸೂರಿನಿಂದ ಮೇಲುಕೋಟೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ನಲ್ಲಿ ಜೆ.ಎಸ್.ಎಸ್.ಡೆಂಟಲ್ ಕಾಲೇಜು ಬಳಿ ಇಬ್ಬರು ಮಹಿಳೆಯರು ಜಗಳ ಆಡಿದ್ದಾರೆ.ಇಬ್ಬರನ್ನೂ ಸಮಾಧಾನಪಡಿಸಲು ಕಂಡಕ್ಟರ್ ಉದಯಕುಮಾರ್ ಯತ್ನಿಸಿದ್ದಾರೆ.ಈ ವೇಳೆ ಓರ್ವಮಹಿಳೆ ಉದಯಕುಮಾರ್ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನ ಕಿತ್ತುಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ಕಂಡಕ್ಟರ್ ನೆರವಿಗೆ ಬಂದ ಚಾಲಕ ಬಸವರಾಜ್ ಕೊಂಗಿ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ.ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಿದಾಗ ಮಹಿಳೆ ಇಳಿದು ಹೋಗಿದ್ದಾರೆ.ಹಲ್ಲೆ ನಡೆಸಿದ ಮಹಿಳೆ ಮಂಡಿಮೊಹಲ್ಲಾ ನಿವಾಸಿ ಕೌಸರ್ ಬಾನು ಎಂದು ತಿಳಿದುಬಂದಿದ್ದು ಆಕೆಯ ಮೇಲೆ ನಿರ್ವಾಹ ಉದಯಕುಮಾರ್ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…