ಪ್ರಜ್ವಲ್ ರೇವಣ್ಣ ಪ್ರಕರಣ…ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಅಪಹರಣ…ಮಗನಿಂದ ದೂರು ದಾಖಲು…
- TV10 Kannada Exclusive
- May 3, 2024
- No Comment
- 220
ಕೆ.ಆರ್.ನಗರ,ಮೇ3,Tv10 ಕನ್ನಡ
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಮೈಸೂರಿಗೂ ವ್ಯಾಪಿಸಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಆರೋಪವಿರುವ ಮಹಿಳೆ ಅಪಹರಣವಾಗಿದೆ.ಸ್ವತಃ ಮಹಿಳೆಯ ಪುತ್ರ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಯಿ ಅಪಹರಣವಾಗಿದೆ ಎಂದು ಆರೋಪಿಸಿದ್ದಾರೆ.ಅಪಹರಣಕ್ಕೆ ಒಳಗಾದ ಮಹಿಳೆ ಮೈಸೂರಿನ ಹೆಬ್ಬಾಳ್ ಬಡಾವಣೆ ನಿವಾಸಿ ಎನ್ನಲಾಗಿದೆ.ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಫೋಟೋಗಳು ಬಹಿರಂಗ ಆದ
ಬಳಿಕ ನನ್ನ ತಾಯಿ ನಾಪತ್ತೆ ಆಗಿದ್ದಾರೆ ಎಂದು ಪುತ್ರ ದೂರಿದ್ದಾರೆ.
ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ ಸೂಚನೆ ಮೇರೆಗೆ ಸತೀಶ್ ಬಾಬು ಎಂಬುವರು ಕರದೊಯ್ದಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಆಧಾರದ ಮೇಲೆ ಪೊಲೀಸರು ಮಹಿಳೆಯ ಪತ್ತೆಗೆ ಮುಂದಾಗಿದ್ದಾರೆ…