ಶವಾಗಾರದಲ್ಲಿ ಕೈಕೊಟ್ಟ ಶೀತಲ ಯಂತ್ರ…ಕೊಳೆತು ದುರ್ವಾಸನೆ ಬೀರುತ್ತಿರುವ ಮೃತದೇಹಗಳು…ಕ್ಯಾರೆ ಎನ್ನದ ಅಧಿಕಾರಿಗಳು…

ಶವಾಗಾರದಲ್ಲಿ ಕೈಕೊಟ್ಟ ಶೀತಲ ಯಂತ್ರ…ಕೊಳೆತು ದುರ್ವಾಸನೆ ಬೀರುತ್ತಿರುವ ಮೃತದೇಹಗಳು…ಕ್ಯಾರೆ ಎನ್ನದ ಅಧಿಕಾರಿಗಳು…

ಮೈಸೂರು,ಮೇ8,Tv10 ಕನ್ನಡ

ಮೈಸೂರಿನ ಶವಾಗಾರದಲ್ಲಿ ಶೀತಲ ಯಂತ್ರಗಳು ಕೆಟ್ಟು ನಿಂತಿವೆ.ಶವಪರೀಕ್ಷೆಗಾಗಿ ಬರುವ ಮೃತದೇಹಗಳು ಕೊಳೆತು ದುರ್ವಾಸನೆ ಬೀರುತ್ತಿವೆ.ಶೀತಲಯಂತ್ರಗಳನ್ನ ದುರಸ್ಥುಗೊಳಿಸುವಂತೆ ಶವಾಗಾರದ ಸಿಬ್ಬಂದಿಗಳು ಮುಖ್ಯಸ್ಥರಿಗೆ ಪತ್ರ ಬರೆದಿದ್ದರೂ ಅಧಿಕಾರಿಗಳು ಕ್ಯಾರೆ ಎಂದಿಲ್ಲವೆಂಬ ಆರೋಪ ಕೇಳಿಬಂದಿದೆ.ಶವಪರೀಕ್ಷೆ ನಂತರ ಮೃತದೇಹಗಳನ್ನ ಕೊಂಡೊಯ್ಯಲು ಬರುವ ಸಂಭಂದಿಕರು ಶವಾಗಾರದ ದುಃಸ್ಥಿತಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.ಶವಾಗಾರದ ಸಿಬ್ಬಂದಿಗಳು ದುರ್ವಾಸನೆಯನ್ನ ಸಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ರೋಗರುಜಿನಗಳು ಹರಡುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ಮೈಸೂರು ಮೆಡಿಕಲ್ ಕಾಲೇಜು ಆವರಣದಲ್ಲಿ ಶವಾಗಾರವಿದೆ.ಮೈಸೂರು,ಮಂಡ್ಯ,ಚಾಮರಾಜನಗರ,ಮಡಿಕೇರಿ ಸೇರಿದಂತೆ ಹಲವು ಸ್ಥಳಗಳಿಂದ ಶವಪರೀಕ್ಷೆಗಾಗಿ ಶವಾಗಾರಕ್ಕೆ ಮೃತದೇಹಗಳನ್ನ ತರಲಾಗುತ್ತದೆ.ಜೊತೆಗೆ ಅಪರಿಚಿತ ಶವಗಳನ್ನೂ ಸಹ ಇಲ್ಲಿ ಇರಿಸಲಾಗುತ್ತದೆ.ಕೆಲವೊಮ್ಮೆ ವಾರಸುದಾರರು ಇಲ್ಲದ ಕಾರಣ ಶವಪರೀಕ್ಷೆ ವಿಳಂಬವಾಗುತ್ತದೆ.ಇಂತಹ ಸಂಧರ್ಭದಲ್ಲಿ ಅನಿವಾರ್ಯವಾಗಿ ಮೃತದೇಹಗಳನ್ನ ಸಂರಕ್ಷಿಸಬೇಕಾಗುತ್ತದೆ.ಇದಕ್ಕಾಗಿ ಮೂರು ಶೀತಲ ಯಂತ್ರಗಳನ್ನ ಇಲ್ಲಿ ಅಳವಡಿಸಲಾಗಿದೆ.ಮೂರು ಶೀತಲ ಯಂತ್ರಗಳ ಪೈಕಿ ಎರಡು ಯಂತ್ರಗಳು ಕೆಟ್ಟು ನಿಂತು ತಿಂಗಳುಗಳೇ ಉರುಳಿದೆ.ಸಧ್ಯ ಕೇವಲ ಒಂದು ಯಂತ್ರ ಮಾತ್ರ ಕೆಲಸ ಮಾಡುತ್ತಿದೆ.ಒಂದು ಯಂತ್ರದಲ್ಲಿ 6 ಮೃತದೇಹಗಳನ್ನ ಇರಿಸಬಹುದಾಗಿದೆ.ಆದ್ರೆ ಮೃತದೇಹಗಳ ಸಂಖ್ಯೆ ಹೆಚ್ಚಾದಾಗ ಎರಡು ಯಂತ್ರಗಳು ಕೈಕೊಟ್ಟ ಕಾರಣ ಸಂರಕ್ಷಿಸಲು ಸಾಧ್ಯವಾಗುತ್ತಿಲ್ಲ.ಹೀಗಾಗಿ ಮೃತದೇಹಗಳ ನಿರ್ವಹಣೆ ಸಾಧ್ಯವಾಗದೆ ಕೊಳೆತು ದುರ್ವಾಸನೆ ಬೀರುವ ಹಂತ ತಲುಪುತ್ತಿದೆ.ಶವಾಗಾರದ ಸಿಬ್ಬಂದಿಗಳು ಈಗಾಗಲೇ ಜನವರಿ ತಿಂಗಳಲ್ಲಿ ಶೀತಲ ಯಂತ್ರಗಳನ್ನ ದುರಸ್ಥುಗೊಳಿಸುವಂತೆ ಪತ್ರ ಬರೆದಿದ್ದಾರೆ.ಟಪಾಲು ಸೆಕ್ಷನ್ ನಲ್ಲಿರುವ ಗಂಗಾಧರ್ ಎಂಬಾತ ಡೀನ್ ರವರಿಗೆ ತಲುಪಿಸದೆ ನಿರ್ಲಕ್ಷಿಸುತ್ತಿದ್ದಾನೆಂದು ಶವಾಗಾರದ ಸಿಬ್ಬಂದಿಯೊಬ್ಬರು ಆರೋಪಿಸಿದ್ದಾರೆ.ಮೃತದೇಹಗಳಿಗೂ ಒಂದು ಗೌರವ ಇದೆ.ಆದ್ರೆ ಇಲ್ಲಿ ಮೃತದೇಹಗಳನ್ನ ಕಸದ ರಾಶಿಯಂತೆ ಒಂದರ ಮೇಲೆ ಒಂದನ್ನ ಇರಿಸಿ ಅಗೌರವ ಸೂಚಿಸಲಾಗುತ್ತಿದೆ.ಒಂದೇ ಯಂತ್ರದಲ್ಲಿ ಕಸ ತುಂಬಿದಂತೆ ಮೃತದೇಹಗಳನ್ನ ಇರಿಸಲಾಗುತ್ತಿದೆ.ಕೆಟ್ಟುನಿಂತ ಶೀತಲ ಯಂತ್ರಗಳಿಂದಾಗಿ ಮೃತದೇಹಗಳನ್ನ ಸೂಕ್ತವಾಗಿ ನಿರ್ವಹಣೆ ಮಾಡಲು ಸಾಧ್ಯವಾಗದೆ ದುರ್ವಾಸನೆ ಬೀರುವ ಹಂತ ತಲುಪಿದೆ.ಶವಗಳಿಗೆ ಮುಕ್ತಿನೀಡಲು ಬರುವ ಸಂಭಂಧಿಕರು ಇಲ್ಲಿಗೆ ಬಂದು ದುರ್ವಾಸನೆಯಿಂದ ರೋಗಗಳನ್ನ ಅಂಟಿಸಿಕೊಂಡು ಹೋಗುವಂತಾಗುತ್ತಿದೆ.

ಕೂಡಲೇ ಸಂಭಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಗೆ ಪರಿಹಾರ ಒದಗಿಸದಿದ್ದಲ್ಲಿ ಶವಾಗಾರ ರೋಗದ ಬೀಡಾಗುವ ಸಾಧ್ಯತೆ ಇರುತ್ತದೆ.ಇನ್ನಾದರೂ ಡೀನ್ ದಾಕ್ಷಾಯಿಣಿ ರವರು ಇತ್ತ ಗಮನ ಹರಿಸುವರೇ…?

Spread the love

Related post

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ…ಓರ್ವನ ಬಂಧನ…ವಾಣಿಜ್ಯ ಹಾಗೂ ಗೃಹಬಳಕೆಯ 119 ಸಿಲಿಂಡರ್ ಸೀಜ್…

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ…ಓರ್ವನ ಬಂಧನ…ವಾಣಿಜ್ಯ ಹಾಗೂ…

ಮೈಸೂರು,ನ21,Tv10 ಕನ್ನಡ ಸಿಸಿಬಿ ಹಾಗೂ ಸರಸ್ವತಿಪುರಂ ಠಾಣೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ನಡೆಸುತ್ತಿದ್ದ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ ನಡೆಸಿ ಓರ್ವನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.…
ಲೋಕಾ ಬಲೆಗೆ ಬಿದ್ದ ಬಿಲ್ ಕಲೆಕ್ಟರ್…ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಲಾಕ್…

ಲೋಕಾ ಬಲೆಗೆ ಬಿದ್ದ ಬಿಲ್ ಕಲೆಕ್ಟರ್…ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಲಾಕ್…

ಮೈಸೂರು,ನ21,Tv10 ಕನ್ನಡ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿಲ್ ಕಲೆಕ್ಟರ್ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.ಮೈಸೂರಿನ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ.ಹೂಟಗಳ್ಳಿ ನಗರಸಭೆಯ ಬಿಲ್ ಕಲೆಕ್ಟರ್ ದಿನೇಶ್ ಲೋಕಾಯುಕ್ತ ಬಲೆಗೆ…
ಕಾಡು ತೊರೆದು ನಾಡಿಗೆ ಬಂದ್ರೂ ಮೂಲ ಆದಿವಾಸಿಗಳಿಗೆ ಸಿಗದ ಸರ್ಕಾರಿ ಸೌಲಭ್ಯ…21 ಕುಟುಂಬ ಹೈರಾಣು…

ಕಾಡು ತೊರೆದು ನಾಡಿಗೆ ಬಂದ್ರೂ ಮೂಲ ಆದಿವಾಸಿಗಳಿಗೆ ಸಿಗದ ಸರ್ಕಾರಿ ಸೌಲಭ್ಯ…21…

ನಂಜನಗೂಡು,ನ20,Tv10 ಕನ್ನಡ ಕಾಡುತೊರೆದು ನಾಡಿಗೆ ಬಂದು ನೆಲೆಸಿದರೂ ಮೂಲ ಆದಿವಾಸಿ ಜನರಿಗೆ ಬವಣೆ ತಪ್ಪಿಲ್ಲ.ಸರ್ಕಾರಿ ಸೌಲಭ್ಯಗಳಿಂದ ವಂಚಿತಾರದ ಸುಮಾರು 21 ಕುಟುಂಬ ಹೈರಾಣರಾಗಿದ್ದಾರೆ.ಪರಿಶಿಷ್ಟ ಪಂಗಡ ಅಧಿಕಾರಿಗಳ ನಿರ್ಲಕ್ಷತನಕ್ಕೆ ಇದೊಂದು…

Leave a Reply

Your email address will not be published. Required fields are marked *