ಎಸ್.ಐ.ಟಿ.ತೆನಿಖೆಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ…ಸಿಎಂ ಸಿದ್ದರಾಮಯ್ಯ…
- TV10 Kannada Exclusive
- May 10, 2024
- No Comment
- 95
ಮೈಸೂರು,ಮೇ10,Tv10 ಕನ್ನಡ
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಚಿಸಲಾಗಿರುವ ಎಸ್ಐಟಿ ಕಾನೂನಿನಂತೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ನಾನಾಗಲಿ ಡಿಕೆ ಶಿವಕುಮಾರ್ ಆಗಲಿ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಸಿಎಂ ಮಾತನಾಡಿದರು.
ನಾನಾಗಲಿ ಡಿಕೆ ಶಿವಕುಮಾರ್ ಆಗಲಿ ಎಸ್ಐಟಿ ನಡೆಸುತ್ತಿರುವ ತನಿಖೆಯಲ್ಲಿ ಮಧ್ಯಪ್ರವೇಶಿಸಿಲ್ಲ ಯಾವುದೇ ಕಾರಣಕ್ಕೂ ನಾವುಗಳು ಮಧ್ಯಪ್ರವೇಶಿಸುವುದಿಲ್ಲ. ಎಸ್ಐಟಿ ಸತ್ಯಾ ಸತ್ಯತೆಯನ್ನು ಹೊರತರಲಿ ಎಂಬ ಉದ್ದೇಶದಿಂದ ರಚಿಸಲಾಗಿದೆ. ಅದು ಕಾನೂನಿನಂತೆ ಕೆಲಸ ನಿರ್ವಹಿಸುತ್ತದೆ ಯಾರು ಸಹ ಇದರಲ್ಲಿ ಮಧ್ಯ ಪ್ರವೇಶಿಸಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಮಾಜಿ ಸಚಿವ ರೇವಣ್ಣ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ಆಗಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು. ಈಗಾಗಲೇ ಲಾಟರಿ ಕೇಸ್, ಜಾರ್ಜ್ ಕೇಸ್ ಇವುಗಳನ್ನು ಸಿಬಿಐಗೆ ವಹಿಸಲಾಗಿತ್ತು. ಆದರ ಫಲಿತಾಂಶ ಏನು ಎಂಬುದು ತಿಳಿದಿದೆ ಎಂದು ಹೇಳಿದ ಸಿಎಂ ನನಗೆ ಸಿಬಿಐ ಮೇಲೆ ನಂಬಿಕೆ ಇಲ್ಲ ಎಂದಲ್ಲ ನಮ್ಮ ರಾಜ್ಯದ ಪೊಲೀಸರೇ ಸಮರ್ಥರಾಗಿದ್ದಾರೆ ಹಾಗಾಗಿ ಎಸ್ಐಟಿಯನ್ನು ರಚಿಸಿದ್ದೇವೆ ಎಂದು ಸಿದ್ದರಾಮಯ್ಯನವರು ತಿಳಿಸಿದರು.ಪೆನ್ ಡ್ರೈವ್ ಗಳನ್ನ ಹೊರದೇಶಗಳಲ್ಲಿ ಮಾಡಿಸಲಾಗಿದೆ ಹಾಗಾಗಿ ರಾಜ್ಯದ ಎಸ್ಐಟಿ ಹೊರ ರಾಜ್ಯ ದೇಶಗಳಿಗೆ ಹೋಗಿ ತನಿಖೆ ನಡೆಸಲು ಅಸಾಧ್ಯ ಹಾಗಾಗಿ ಸಿಬಿಐಗೆ ವಹಿಸಿ ಎಂದು ವಿಪಕ್ಷಗಳು ಒತ್ತಾಯ ಮಾಡುತ್ತಿವೆ. ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಹಾಗಾಗಿ ಈ ಪ್ರಕರಣವನ್ನು ರಾಜ್ಯದ ಪೊಲೀಸರೇ ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಸಿಳಿದರು.
ಈ ಹಿಂದೆ ಬಿಜೆಪಿಯವರು ಒಂದು ಕೇಸನ್ನು ಸಿಬಿಐಗೆ ವಹಿಸಿಲ್ಲ. ಅವರು ಸಿಬಿಐಯನ್ನು ಕರೆಕ್ಷನ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅನ್ನುತ್ತಿದ್ದರು. ದೇವೇಗೌಡರು ಚೋರ್ ಬಚಾವೋ ಸಂಸ್ಥೆ ಎಂದು ಹೇಳುತ್ತಿದ್ದರು. ಈಗ ನೋಡಿದರೆ ಸಿಬಿಐಗೆ ಈ ಪ್ರಕರಣ ವಹಿಸಿ ಎನ್ನುತ್ತಿದ್ದಾರಲ್ಲ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.ಎಸ್ಐಟಿ ಮೇಲೆ ನನಗೆ ನಂಬಿಕೆ ಇದೆ ಎಂದ ಮುಖ್ಯಮಂತ್ರಿಗಳು ಎಸ್ಐಟಿ ಸರಿಯಾದ ಹಾದಿಯಲ್ಲಿ ತನಿಖೆ ನಡೆಸುತ್ತಿದೆ ಎಂದು ಹೇಳಿ ನಾನು ಯಾವತ್ತೂ ಪೊಲೀಸರಿಗೆ ಕಾನೂನು ವಿರುದ್ಧ ತನಿಖೆ ಮಾಡಿ ಎಂದು ಹೇಳುವುದಿಲ್ಲ ನಂಬಿಕೆ ಇರಬೇಕು ಎಂದು ಅವರು ಹೇಳಿದರು..