ಶ್ರೀನಿವಾಸ್ ಪ್ರಸಾದ್ ನುಡಿನಮನ ಕಾರ್ಯಕ್ರಮ…ಸಿಎಂ ಸಿದ್ದು ಗುಣಗಾನ…
- TV10 Kannada Exclusive
- May 11, 2024
- No Comment
- 256
ಮೈಸೂರು,ಮೇ11,Tv10 ಕನ್ನಡ
ಶ್ರೀನಿವಾಸ್ ಪ್ರಸಾದ್ ನುಡಿ ನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅಗಲಿದ ಸ್ನೇಹಿತನ ಬಗ್ಗೆ ಗುಣಗಾನ ಮಾಡಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಸ್ವಾಭಿಮಾನಿ ಸಜ್ಜನ ರಾಜಕಾರಣಿ
ನಾನು ಪ್ರಸಾದ್ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು
ಆದರೆ ನನಗಿಂತ ಮುಂಚೆ ಚುನಾವಣಾ ರಾಜಕೀಯಕ್ಕೆ ಬಂದವರು.
ನಾನು ಅವರು ಒಟ್ಟಿಗೆ ಜನತಾ ಪಾರ್ಟಿಯಲ್ಲಿ ಇದ್ದೆವು.ಪ್ರಸಾದ್ ಮೊದಲಿನಿಂದ ಕಾಂಗ್ರೆಸ್‌ಗೆ ವಿರೋಧ ಇದ್ದರು.ಸ್ನೇಹಿತರ ಒತ್ತಾಸೆಯಿಂದ ಕಾಂಗ್ರೆಸ್ ಸೇರಿದ್ದರು.ನಾವು ಬೇರೆ ಪಕ್ಷದಲ್ಲಿದ್ದರು ಗೌರವ ಸ್ನೇಹ ಇತ್ತು.ಪಕ್ಷ ಭೇಧ ಮರೆತು ನಮ್ಮ ಸ್ನೇಹ ಒಡನಾಟ ಇತ್ತು.
ಪ್ರಸಾದ್ ಅವರಿಗೆ ಮನುಷ್ಯತ್ವದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು.
ಸಂವಿಧಾನದ ಬಗ್ಗೆ ಅದರ ಉಳಿವಿನ ಬಗ್ಗೆ ಅಪಾರವಾದ ನಂಬಿಕೆಯಿಟ್ಟಿದ್ದರು.
ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು ದ್ವೇಷ ಮಾಡಬಾರದು
ನಾವು ಪರಸ್ಪರ ಟೀಕೆ ಮಾಡುತ್ತಿದ್ದೆವು ಆದರೆ ಸ್ನೇಹಕ್ಕೆ ಯಾವತ್ತು ಧಕ್ಕೆಯಾಗಿರಲಿಲ್ಲ.
ನಾವು ಚುನಾವಣೆಗಾಗಿ ಪ್ರಸಾದ್ ಜೊತೆ ಮಾತನಾಡಲಿಲ್ಲ.
ರಾಜಕೀಯ ನಿವೃತ್ತಿ ಪಡೆದಿದ್ದ ಕಾರಣ ಮಾತನಾಡಿಸಿದೆವು.
ನಾನು ಭೇಟಿ ಬಗ್ಗೆ ನಿರ್ಧರಿಸಿರಲಿಲ್ಲ ಮಹದೇವಪ್ಪ ಹೇಳಿದ್ದಕ್ಕೆ ಭೇಟಿ ಮಾಡಿದ್ದೆ.
ನಮ್ಮ ಭೇಟಿ ಹಿಂದಿನಂತೆಯೇ ಪ್ರೀತಿ ವಿಶ್ವಾಸದಿಂದ ಇತ್ತು.
ನಾನು ರಾಜಕೀಯವಾಗಿ ಏನು ಮಾತನಾಡಲಿಲ್ಲ ಅವರು ಮಾತನಾಡಲಿಲ್ಲ.
ಕೊನೆಯಲ್ಲಿ ಅವರ ಸ್ವಾಭಿಮಾನಕ್ಕೆ ಧಕ್ಕೆ ಬಂದಂತೆ ಮಾತನಾಡುತ್ತಿದ್ದರು.
ಬಡವರಿಗೆ ದಲಿತರಿಗೆ ನೊಂದವರಿಗೆ ಸ್ವಾಭಿಮಾನ ಇರಲೇ ಬೇಕು ಇಲ್ಲವಾದರೆ ಗುಲಾಮಗಿರಿ ಬರುತ್ತದೆ.
ಪ್ರಸಾದ್‌ಗೆ ಗುಲಾಮಗಿರಿ ಕೀಳರಿಮೆಯಿರಲಿಲ್ಲ.
ಅಭಿಮಾನ ಗೌರವ ಸ್ನೇಹದಿಂದ ಮಾತನಾಡಿದ್ದರು.
ಆಸ್ಪತ್ರೆಗೂ ಭೇಟಿ ಕೊಟ್ಟಿದ್ದೆ ಪರಿಸ್ಥಿತಿ ಗಂಭೀರವಾಗಿತ್ತು.
ಬದುಕಿದ್ದಾಗ ಸಮಾಜಿಕ ನ್ಯಾಯದ ಪರ ಹೋರಾಟ ಮಾಡಿದ್ದಾರೆ.
ಹಳೆ ತಲೆ ಮಾರಿನ ರಾಜಕೀಯ ಕೊಂಡಿ ಕಳಚಿದೆ.ಅವರ ಬದುಕು ಯುವಕರಿಗೆ ಆದರ್ಶವಾಗಬೇಕು.
ನಾವು ಎಷ್ಟು ವರ್ಷ ಬದುಕುತ್ತೇವೆ ಅನ್ನೋದು ಮುಖ್ಯ ಅಲ್ಲ
ಎಷ್ಟು ಸಾರ್ಥಕಗೊಳಿಸಿ ಬದುಕುತ್ತೇವೆ ಅನ್ನೋದು ಮುಖ್ಯ ಎಂದು ಒಡನಾಟದ ಬಗ್ಗೆ ಮೆಲುಕು ಹಾಕಿದರು…