ಭದ್ರತೆಗಾಗಿ ನೀಡಿದ್ದ ಚೆಕ್ ದುರುಪಯೋಗ ಆರೋಪ…ಪಾಲಿಕೆ ಸೀನಿಯರ್ ಮೆಡಿಕಲ್ ಆಫೀಸರ್ ವಿರುದ್ದ ವಂಚನೆ ಪ್ರಕರಣ ದಾಖಲು…
- TV10 Kannada Exclusive
- May 15, 2024
- No Comment
- 348
ಮೈಸೂರು,ಮೇ15,Tv10 ಕನ್ನಡ
ವ್ಯವಹಾರದ ನಿಮಿತ್ತ ನೀಡಿದ್ದ ಮುಂಗಡ ಹಣಕ್ಕೆ ಭದ್ರತೆಗಾಗಿ ನೀಡಿದ್ದ ಚೆಕ್ ದುರುಪಯೋಗ ಪಡಿಸಿಕೊಂಡ ಆರೋಪದ ಹಿನ್ನಲೆ ಮೈಸೂರು ಮಹಾನಗರ ಪಾಲಿಕೆ ಸೀನಿಯರ್ ಮೆಡಿಕಲ್ ಆಫೀಸರ್ ವಿರುದ್ದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಮೈಸೂರಿನ ಸರಸ್ವತಿಪುರಂ ನಿವಾಸಿ ಮೀರಾ ಎಂಬುವರು ಆರೋಗ್ಯಾಧಿಕಾರಿ ಸೇರಿದಂತೆ ಇಬ್ಬರ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾರೆ.ಮೈಸೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯಾಧಿಕಾರಿ ವೆಂಕಟೇಶ್ ಹಾಗೂ ಹಾಸನ ನಿವಾಸಿ ಕೇಶವಮೂರ್ತಿ ಎಂಬುವರ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.ಭದ್ರತೆಗಾಗಿ ನೀಡಿದ್ದ ಚೆಕ್ ಮೇಲೆ 4.5 ಲಕ್ಷ ನಮೂದಿಸಿಕೊಂಡು ಬೌನ್ಸ್ ಮಾಡಿ ವಂಚಿಸಲು ಯತ್ನಿಸಿದ ಇಬ್ಬರ ವಿರುದ್ದ ಮೀರಾ ರವರು ನ್ಯಾಯಾಲಯದ ಮೊರೆ ಹೋಗಿದ್ದರು.ಮೈಸೂರಿನ ಜೆಎಂ ಎಫ್ ಸಿ ನ್ಯಾಯಾಲಯ ಇಬ್ಬರ ವಿರುದ್ದ ವಂಚನೆ ಪ್ರಕರಣ ದಾಖಲಿಸುವಂತೆ ಸರಸ್ವತಿಪುರಂ ಠಾಣಾ ಪೊಲೀಸರಿಗೆ ಆದೇಶಿಸಿದೆ.
ಸರಸ್ವತಿಪುರಂ ನಲ್ಲಿ ಮೀರಾ ರವರು ಅನ್ನಪೂರ್ಣ ಆಫ್ ಸೆಟ್ ಮುದ್ರಣಾಲಯ ಇಟ್ಟುಕೊಂಡು ವಹಿವಾಟು ನಡೆಸುತ್ತಿದ್ದಾರೆ.ಈ ವೇಳೆ ಮೀರಾರವರಿಗೆ ಆರೋಗ್ಯಾಧಿಕಾರಿ ವೆಂಕಟೇಶ್ ಪರಿಚಯವಾಗಿ ಕೆಲವು ಸ್ಟೇಷನರಿ ಪದಾರ್ಥಗಳನ್ನ ಸರಬರಾಜು ಮಾಡುವಂತೆ ಮನವಿ ಮಾಡಿದ್ದಾರೆ.2021 ರಿಂದ ಇಬ್ಬರ ನಡುವೆ ಸಾಕಷ್ಟು ವಹಿವಾಟು ನಡೆದಿದೆ.2018 ರಲ್ಲಿ ವೆಂಕಟೇಶ್ ರವರು ಕೆಲವು ರಿಜಿಸ್ಟರ್ ಗಳನ್ನ ಮುದ್ರಣ ಮಾಡಿಕೊಡುವಂತೆ ಮೀರಾ ರವರಿಗೆ ತಿಳಿಸಿದ್ದಾರೆ.ಇದಕ್ಕಾಗಿ ಮೀರಾರವರಿಗೆ ಮುಂಗಡ ಹಣವನ್ನೂ ಸಹ ನೀಡಿದ್ದಾರೆ.ಮುಂಗಡ ಹಣದ ಭದ್ರತೆಗಾಗಿ ಮೀರಾರವರು ಸಹಿ ಮಾಡಿದ ಚೆಕ್ ನೀಡಿದ್ದಾರೆ.ವಹಿವಾಟು ಮುಗಿದ ನಂತರ ಚೆಕ್ ವಾಪಸ್ ನೀಡುವಂತೆ ಮೀರಾ ರವರು ಕೇಳಿದಾಗ ವೆಂಕಟೇಶ್ ಇಲ್ಲಸಲ್ಲದ ನೆಪವೊಡ್ಡಿ ಕ್ಯಾತೆ ತೆಗೆದಿರುವುದಲ್ಲದೆ ಭದ್ರತೆಗಾಗಿ ನೀಡಿದ ಚೆಕ್ ದುರುಪಯೋಗ ಪಡಿಸಿದ್ದಾರೆ.ಹಾಸನದ ಕೇಶವಮೂರ್ತಿ ಎಂಬುವರಿಗೆ ಮೀರಾ ರವರ ಚೆಕ್ ನೀಡಿ 4.5 ಲಕ್ಷ ಬರೆದುಕೊಂಡು ಬೌನ್ಸ್ ಮಾಡಿಸಿದ್ದಾರೆ.ನನ್ನನ್ನು ವಂಚಿಸುವ ಉದ್ದೇಶದಿಂದ ಇಂತಹ ಸಂಚು ನಡೆಸಿರುವುದಾಗಿ ಮೀರಾ ರವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮೀರಾ ರವರಿಗೆ ವಂಚನೆ ಮಾಡುತ್ತಿರುವ ವಿಚಾರ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನಲೆ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ…