ಸಿಎ ನಿವೇಶನ ದುರ್ಬಳಕೆ ಆರೋಪ…ಸಂಸ್ಥೆ ಮಾಲೀಕರಿಗೆ ಮುಡಾ ನೋಟೀಸ್…
- TV10 Kannada Exclusive
- June 11, 2024
- No Comment
- 199
ಮೈಸೂರು,ಜೂ11,Tv10 ಕನ್ನಡ
ಕೃಷಿಕ್ ಸರ್ವೋದಯ ಫೌಂಡೇಷನ್ ತರಬೇತಿ ವಸತಿಯುಕ್ತ ಕೇಂದ್ರಕ್ಕೆ ನೀಡಲಾದ ಸಿಎ ನಿವೇಶನವನ್ನ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಹಿನ್ನಲೆ ಮುಡಾ ವಲಯ ಕಚೇರಿ 4 ರ ಅಧಿಕಾರಿಗಳು ಸಂಸ್ಥೆಯ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದ್ದಾರೆ.ಸೂಕ್ತ ದಾಖಲೆಗಳೊಂದಿಗೆ ಹಾಜರಾಗಿ ಸಮಜಾಯಿಷಿ ನೀಡುವಂತೆ ಸೂಚನೆ ನೀಡಿದ್ದಾರೆ.ಇಲ್ಲದಿದ್ದಲ್ಲಿ ಸಿಎ ನಿವೇಶನವನ್ನ ರದ್ದುಪಡಿಸಿ ಹಿಂದಕ್ಕೆ ಪಡೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವಿಜಯನಗರ 2 ನೇ ಹಂತ ಸಿಎ ನಿವೇಶನ ಸಂಖ್ಯೆ 25 ನ್ನು ಕೃಷಿಕ್ ಸರ್ವೋದಯ ಫೌಂಡೇಷನ್ ತರಬೇತಿಯುಕ್ತ ವಸತಿಕೇಂದ್ರ ಕ್ಕೆ ಮಂಜೂರು ಮಾಡಲಾಗಿದೆ.ಆದರೆ ಸದರಿ ನಿವೇಶನವನ್ನ ಇಬ್ಬಾಗ ಮಾಡಿ ಅನಧಿಕೃತವಾಗಿ ನೇಹಾ ಕ್ಯಾಂಟೀನ್ ರವರಿಗಾಗಿ ಕಟ್ಟಡ ನಿರ್ಮಿಸಿ ಬಾಡಿಗೆ ನೀಡಿರುವುದು ಕಂಡು ಬಂದಿದೆ.ಅಲ್ಲದೆ ಪಕ್ಕದಲ್ಲಿರುವ ಕೆರೆಯ ಬಫರ್ ಜೋನ್ ಜಾಗವನ್ನೂ ಸಹ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿದೆ.ಈ ಬಗ್ಗೆ ದಾಖಲೆಗಳು Tv10 ಕನ್ನಡ ವಾಹಿನಿಗೆ ತಲುಪಿದೆ.ಈ ಆರೋಪದ ಹಿನ್ನಲೆ ವಲಯ ಕಚೇರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಮೇಲ್ನೋಟಕ್ಕೆ ನಿಯಮಗಳನ್ನ ಉಲ್ಲಂಘಿಸಿರುವುದು ಸಾಬೀತಾದ ಹಿನ್ನಲೆ ಸಂಸ್ಥೆ ಮುಖ್ಯಸ್ಥರಿಗೆ ನೋಟೀಸ್ ಜಾರಿ ಮಾಡಿದ್ದಾರೆ.ಸೂಕ್ತ ದಾಖಲಾತಿಗಳ ಸಮೇತ ಹಾಜರಾಗಿ ಸಮಜಾಯಿಷಿ ನೀಡಬೇಕು ಹಾಗೂ ಬಫರ್ ಜಾಗದಲ್ಲಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಎಚ್ಚೆರಿಕೆ ನೀಡಿದ್ದಾರೆ.ಇಲ್ಲದಿದ್ದಲ್ಲಿ ಸಿಎ ನಿವೇಶನ ರದ್ದುಪಡಿಸಿ ಹಿಂಪಡೆಯುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ವಾರ್ನಿಂಗ್ ನೀಡಿದ್ದಾರೆ…