ಕಪಿಲೆ ಅಬ್ಬರ…ಸುತ್ತೂರು ಸೇತುವೆ ಮುಳುಗಡೆ…ರಸ್ತೆ ಬಂದ್…ನಿರಾಶ್ರಿತರಿಗೆ ಆಹಾರ ಕೇಂದ್ರ…
- MysoreNews
- July 19, 2024
- No Comment
- 180
ನಂಜನಗೂಡು,ಜು19,Tv10 ಕನ್ನಡಕಪಿಲೆಯ ಅಬ್ಬರಕ್ಕೆ ನದಿ ಪಾತ್ರದ ಜನ ತತ್ತರಿಸಿದ್ದಾರೆ.ಪ್ರವಾಹದ ರಭಸಕ್ಕೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ.ಬಹುತೇಕ ಮನೆಗಳು ಜಲಾವೃತವಾಗಿವೆ.ಹಲವುಗ್ರಾಮಗಳ ರಸ್ತೆ ಜಲಾವೃತವಾಗಿದೆ.ನದಿ ಪಾತ್ರದಲ್ಲಿರುವ ಸೇತುವೆಗಳು ಮುಳುಗಡೆ ಆಗಿವೆ.ಸುತ್ತೂರು ಮುಖ್ಯರಸ್ತೆಯ ಸೇತುವೆ ಮುಳುಗಡೆಯಾದ ಕಾರಣ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.ಬ್ಯಾರಿಕೇಡ್ ಗಳನ್ನ ಅಳವಡಿಸಿ ಬದಲಿ ಪರ್ಯಾಯಮಾರ್ಗದಲ್ಲಿ ಸಾಗುವಂತೆ ವಾಹನ ಸವಾರರಿಗೆ ಸೂಚಿಸಲಾಗಿದೆ.ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸಾಕಷ್ಟು ಮಂದಿನಿರಾಶ್ರಿತರಾಗಿದ್ದಾರೆ.ತಾಲೂಕು ಆಡಳಿತದಿಂದ ಆಹಾರ ಕೇಂದ್ರಗಳನ್ನ ತೆರೆಯಲಾಗಿದ್ದು ನಿರಾಶ್ರಿತರು ಆಶ್ರಯ ಪಡೆದಿದ್ದಾರೆ.ಸಧ್ಯ ತಾಲೂಕು ಅಧಿಕಾರಿ ವರ್ಗ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ…