ಚಾಮುಂಡಿ ಬೆಟ್ಟ ಅನ್ನದಾಸೋಹ  ಭವನಕ್ಕೆ ಶುದ್ಧ ನೀರಿನ RO plant ಸಮರ್ಪಣೆ…

ಚಾಮುಂಡಿ ಬೆಟ್ಟ ಅನ್ನದಾಸೋಹ ಭವನಕ್ಕೆ ಶುದ್ಧ ನೀರಿನ RO plant ಸಮರ್ಪಣೆ…

ಮೈಸೂರು,ಜು25,Tv10 ಕನ್ನಡಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮತ್ತು ಪ್ರವಾಸಿಗರ ಅನೂಕಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನ ವಿ-ಗಾರ್ಡ್ ಕಂಪನಿ ವತಿಯಿಂದ ಅನ್ನದಾಸೋಹ ಭವನದಲ್ಲಿ ಸ್ಥಾಪಿಸಿ ಇಂದು ಹಸ್ತಾಂತರಿಸಲಾಯಿತು.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿಟಿ.ದೇವೆಗೌಡ ರವರು ಚಾಮುಂಡಿ ಬೆಟ್ಟಕ್ಕೆ ಮೂಲಭೂತ ಸೌಲಭ್ಯಗಳನ್ನ ಶಾಶ್ವತವಾಗಿ ಒದಗಿಸಲು ಸಿ.ಎಸ್. ಆರ್ ವಲಯ ಖಾಸಗಿ ಕಂಪನಿಗಳಿಗೆ ಮನವಿ ಮಾಡಿದ್ದರು, ಇದಕ್ಕೆ ಸ್ಪಂದಿಸಿದ ವಿ-ಗಾರ್ಡ್ ಕಂಪನಿ ಚಾಮುಂಡಿಬೆಟ್ಟಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತಾಧಿಗಳಿಗೆ ಸುಮಾರ 50ಸಾವಿರ ಮಂದಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಾಮರ್ಥ್ಯವುಳ್ಳ ವಿ-ಗಾರ್ಡ್ RO plant ಶುದ್ಧ ಕುಡಿಯುವ ನೀರಿನ ಘಟಕವನ್ನ ಸ್ಥಾಪಿಸಲಾಗಿದೆ. ವಿ- ಗಾರ್ಡ್ ಕಂಪನಿಯ ಉಪಾಧ್ಯಕ್ಷರಾದ ಸೂರ್ಯಪ್ರಸಾದ್ ವಿಜೆ, ಶಾಖೆ ವ್ಯವಸ್ಥಾಪಕ ಹರ್ಷೇಂದ್ರ ಪ್ರಸಾದ್ ರವರು ಯಂತ್ರವನ್ನ ಹಸ್ತಾಂತರಿಸಿದರು.
ಇದೇ ಸಂಧರ್ಭದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ. ಶಶಿಶೇಖರ ದೀಕ್ಷತ್ ರವರು ಕುಡಿಯುವ ನೀರಿನ ಘಟಕ ಯಂತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಮಾತನಾಡಿ ಮನುಷ್ಯನಿಗೆ ಶುದ್ಧವಾದ ನೀರು ಗಾಳಿ ಆಹಾರ ಬಹಳ ಮುಖ್ಯವಾದದು, ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳ ಮತ್ತು ಸಾರ್ವಜನಿಕರ ಅನೂಕೂಲಕ್ಕೆ ವಿವಿಧ ಮೂಲಭೂತ ಸೌಲಭ್ಯ ಸರ್ಕಾರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಒದಗಿಸಲು ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ, ಆದರೂ ಸಹ ಸಾಮಾಜಿಕ ಕಳಕಳಿಯುಳ್ಳ ಸಂಘ ಸಂಸ್ಥೆಗಳ ಸಾರ್ವಜನಿಕ ಸಹಭಾಗಿತ್ವ ಬಹಳ ಮುಖ್ಯವಾದುದು, ವಿ-ಗಾರ್ಡ್ ಕಂಪನಿ ವತಿಯಿಂದ ಚಾಮುಂಡಿ ಬೆಟ್ಟಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿರುವುದು ಶ್ಲಾಘನೀಯವಾದುದು ಇದರಿಂದ ಬೆಟ್ಟಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾಧಿಗಳಿಗೆ ಅನೂಕೂಲವಾಗುತ್ತದೆ ಮತ್ತು ಸಂಘಸಂಸ್ಥೆಗಳು ಇಂತಹ ಸೇವಾಮನೋಭಾವದ ಕೊಡುಗೆಗೆ ಮುಂದೆ ಬಂದಲ್ಲಿ ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಛೇರಿಯನ್ನ ಸಂಪರ್ಕಿಸಬೇಕಾಗಿ ತಿಳಿಸಿದರು, ಇದೇ ಸಂಧರ್ಭದಲ್ಲಿ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು,ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ ,ತನ್ವಿ ಟ್ರೇಡಿಂಗ್ ಕಾರ್ಪೋರೇಷನ್ ದೀಪಕ್ ಆರ್ ಹೆಬ್ಬಾಳ್, ಚಮನ್, ಪುರುಷೋತ್ತಮ್, ಅರಣ್ ಹಾಜರಿದ್ದರು…

Spread the love

Related post

ಆರೋಗ್ಯ ಮತ್ತು ಶಿಕ್ಷಣ ಮಕ್ಕಳ ಭವಿಷ್ಯದ ಎರಡು ಚಕ್ರಗಳು- ಸಿ.ಆರ್ ದಿನೇಶ್

ಆರೋಗ್ಯ ಮತ್ತು ಶಿಕ್ಷಣ ಮಕ್ಕಳ ಭವಿಷ್ಯದ ಎರಡು ಚಕ್ರಗಳು- ಸಿ.ಆರ್ ದಿನೇಶ್

ಆರೋಗ್ಯ ಮತ್ತು ಶಿಕ್ಷಣ ಮಕ್ಕಳ ಭವಿಷ್ಯದ ಎರಡು ಚಕ್ರಗಳು- ಸಿ.ಆರ್ ದಿನೇಶ್ “ಆರೋಗ್ಯ ಮತ್ತು ಶಿಕ್ಷಣವ ಮಕ್ಕಳ ಭವಿಷ್ಯದ ಎರಡು ಚಕ್ರಗಳು. ಪೌಷ್ಟಿಕ ಆಹಾರ ಹಾಗೂ ಗುಣಮಟ್ಟದ ಶಿಕ್ಷಣ…
ಮೈಸೂರಿನಲ್ಲಿ ಮೈ ಕೊರೆವ ಚಳಿ…ಹೊದಿಕೆ ವಿತರಿಸಿ ಸಾಮಾಜಿಕ ಕಳಕಳಿ…

ಮೈಸೂರಿನಲ್ಲಿ ಮೈ ಕೊರೆವ ಚಳಿ…ಹೊದಿಕೆ ವಿತರಿಸಿ ಸಾಮಾಜಿಕ ಕಳಕಳಿ…

ಮೈಸೂರಿನಲ್ಲಿ ಮೈ ಕೊರೆವ ಚಳಿ…ಹೊದಿಕೆ ವಿತರಿಸಿ ಸಾಮಾಜಿಕ ಕಳಕಳಿ… ಮೈಸೂರು,ಡಿ2,Tv10 ಕನ್ನಡ ಮೈಸೂರಿನಲ್ಲಿ ಮೈ ಕೊರೆಚ ಚಳಿ ಶುರುವಾಗಿದೆ.ರಸ್ತೆ ಬದಿ ಮಲಗುವ ನಿರಾಶ್ರಿತರು ಹೊದಿಕೆ ಇಲ್ಲದೆ ಪರದಾಡುತ್ತಿದ್ದಾರೆ.ನಿರಾಶ್ರಿತರಿಗೆ ಹೊದಿಕೆ…
ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಟ್ರ್ಯಾಪ್ಪಿರಿಯಾಪಟ್ಟಣ ಕಂದಾಯ ಇಲಾಖೆ ಸರ್ವೇಯರ್ ರವೀಂದ್ರ ಲೋಕಾಯುಕ್ತ ಬಲೆಗೆ

ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಟ್ರ್ಯಾಪ್ಪಿರಿಯಾಪಟ್ಟಣ ಕಂದಾಯ ಇಲಾಖೆ ಸರ್ವೇಯರ್ ರವೀಂದ್ರ ಲೋಕಾಯುಕ್ತ…

ಮೈಸೂರು ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಟ್ರ್ಯಾಪ್ಪಿರಿಯಾಪಟ್ಟಣ ಕಂದಾಯ ಇಲಾಖೆ ಸರ್ವೇಯರ್ ರವೀಂದ್ರ ಲೋಕಾಯುಕ್ತ ಬಲೆಗೆಪೋಡಿ ದುರಸ್ತಿ ಸಾಗುವಳಿ ಹೆಸರಿನಲ್ಲಿ ಲಂಚಜಮೀನು ರಸ್ತೆಗೆ ಹೋಗುತ್ತೇ ಅಂತಾ ಹೆದರಿಸಿ ಲಂಚಕ್ಕೆ‌ ಬೇಡಿಕೆ1…

Leave a Reply

Your email address will not be published. Required fields are marked *