ಸರ್ಕಾರಿ ಜಮೀನು ಒತ್ತುವರಿ ತೆರುವು…ತಾಲೂಕು ಆಡಳಿತದಿಂದ ಕಾರ್ಯಾಚರಣೆ…
- MysoreTV10 Kannada Exclusive
- July 26, 2024
- No Comment
- 204
ಮೈಸೂರು,ಜು26,Tv10ಕನ್ನಡ
ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡ ಖಾಸಗಿ ವ್ಯಕ್ತಿಗಳಿಗೆ ತಾಲೂಕು ಆಡಳಿತ ಚಾಟಿ ಬೀಸಿದೆ.ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾದ ರಸ್ತೆ ಹಾಗೂ ಕಟ್ಟಡಗಳನ್ನ ತೆರುವುಗೊಳಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಮೈಸೂರು ತಾಲೂಕು ವರುಣ ಹೋಬಳಿ ಚೋರನಹಳ್ಳಿ ಗ್ರಾಮದ ಸರ್ವೆ ನಂ.77,86,88,89 ಸರ್ಕಾರಿ(ಗೋಮಾಳ ಮತ್ತು ಹಳ್ಳ) ಜಮೀನಾಗಿದೆ.ಸದರಿ ಜಮೀನಿನಲ್ಲಿ ಬಿ.ವಿ.ಎಲ್.ಪ್ರೀಮಿಯೋ ಲೇಔಟ್ ನವರು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ರಸ್ತೆ ಹಾಗೂ ಕಟ್ಟಡ ನಿರ್ಮಿಸುತ್ತಿದ್ದರು.ಈ ಬಗ್ಗೆ ಬಂದ ದೂರಿನ ಅನ್ವಯ ತಹಸೀಲ್ದಾರ್ ಮಹೇಶ್ ಕುಮಾರ್ ದಾಖಲೆಗಳನ್ನ ಪರಿಶೀಲಿಸಿ ಒತ್ತುವರಿಯನ್ನ ಖಚಿತಪಡಿಸಿಕೊಂಡಿದ್ದಾರೆ.ಇಂದು ಬೆಳಿಗ್ಗೆ ಆಲನಹಳ್ಳಿ ಠಾಣೆ ಪೊಲೀಸರ ಭದ್ರತೆಯೊಂದಿಗೆ ಒತ್ತುವರಿಯನ್ನ ತೆರುವುಗೊಳಿಸಿದ್ದಾರೆ.ಕಾರ್ಯಾಚರಣೆಯಲ್ಲಿ ವರುಣಾ ಹೋಬಳಿ ಉಪತಹಸೀಲ್ದಾರ್ ಲತಾ ಶರಣಮ್ಮ,ರಾಜಸ್ವ ನಿರೀಕ್ಷಕರಾದ ಶಂಕರ್,ಗ್ರಾಮ ಆಡಳಿತ ಅಧಿಕಾರಿಗಳಾದ ಮುಖೇಶ್,ಹೇಮಂತ್ ಕುಮಾರ್,ಮಾರುತಿ ಹಾಗೂ ತಾಲೂಕು ಭೂಮಾಪಕ ಶಾನವಾಜ್ ಭಾಗಿಯಾಗಿದ್ದರು…