ವೆಲ್ಲೆಸ್ಲಿ ಸೇತುವೆ ತಡೆಗೋಡೆ ಕುಸಿತ…ಸಚಿವ ಚೆಲುವರಾಯಸ್ವಾಮಿ ಭೇಟಿ ಪರಿಶೀಲನೆ…
- TV10 Kannada Exclusive
- August 3, 2024
- No Comment
- 29
ಮಂಡ್ಯ,ಆ3,Tv10 ಕನ್ನಡಕಾವೇರಿ ನದಿ ಪ್ರವಾಹದಿಂದಾಗಿ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ಕುಸಿತಗೊಂಡಿದ್ದ ತಡೆಗೋಡೆ,ಹಾನಿಗೊಳಗಾದ ಡಾಂಬಾರ್ ರಸ್ತೆ ಪ್ರದೇಶಗಳನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಚಲುವರಾಯ ಸ್ವಾಮಿ ಹಾಗೂ ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ ಇತರ ಅಧಿಕಾರಿಗಳ ತಂಡ ವೀಕ್ಷಣೆ ಮಾಡಿದರು.ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಳಿ ನದಿಗೆ ಕಟ್ಟಲಾಗಿದ್ದ ಬಾರಿ ತಡೆಗೋಡೆ ಸಹ ನೀರಿನ ರಭಸಕ್ಕೆ ಕುಸಿದು ಕೊಚ್ಚಿ ಹೋಗಿತ್ತು ಇದರ ಜೊತೆ ಸಂಪರ್ಕ ಡಾಂಬಾರ್ ರಸ್ತೆ ಸಹಿತ ಮಣ್ಣು ಸಹಿತ ಕೊಚ್ಚಿ ಹೋಗಿ ಹಳ್ಳ ಬಿದ್ದು ಅಪಾರ ಹಾನಿಯಾಗಿದೆ.ಸಂಪರ್ಕಕಡಿತಗೊಂಡಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ್ ಮತ್ತು ಇತರ ಅಧಿಕಾರಿಗಳ ತಂಡ ಮೊದಲು ಒಮ್ಮೆ ಪರಿಶೀಲನೆ ನಡೆಸಿ ಜಿಲ್ಲೆಯ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದರು.200 ವರ್ಷಗಳ ಇತಿಹಾಸವಿರುವ ಲಾರ್ಡ್ ವೆಲ್ಲೆಸ್ಲಿ ಸೇತುವೆ ಮೇಲೆ ನಡೆದಾಡಿದ ಸಚಿವರು ಹಾನಿಯಾಗದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇದರ ಜೊತೆ ನದಿ ಪಕ್ಕದಲ್ಲೇ ಇದ್ದ ಉದ್ಯಾನವನವೂ ಸಹ ಕೊಚ್ಚಿ ಹೋಗಿ ಕಬ್ಬಿಣದ ತಂತಿ, ಬೇಲೆ ಸಹಿತ ಹಾನಿಗೊಳಗಾಗಿರುವುದನ್ನು ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಇಲಾಖೆಯೊಂದಿಗೆ ಸ್ಥಳದಲ್ಲಿ ಚರ್ಚೆ ನಡೆಸಿ, ಪ್ರವಾಹ ನಿಂತ ಮೇಲೆ ಹಾನಿಯಾಗಿರುವ ಸಂಪರ್ಕ ರಸ್ತೆ, ತಡೆಗೋಡೆ ಸೇರಿಂದತೆ ಉದ್ಯಾನವನ್ನು ಸರಿ ಪಡಿಸಿ, ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು.
ತಹಶೀಲ್ದಾರ್ ಪರಿಶುರಾಮ್ ಸತ್ತಿಗೇರಿ, ತಾ.ಪಂ ಇಒ ವೇಣು, ಲೋಕೋಪಯೋಗಿ ಇಲಾಖೆ, ಸೆಸ್ಕ್ ಇಲಾಖೆ, ಕಂದಾಯ ಇಲಾಖೆ, ನೀರಾವರಿ ಇಲಾಖೆಯ ಅಧಿಕಾರಿಗಳು ಜೊತೆಯಲ್ಲಿದ್ದರು…