Tv10 ಕನ್ನಡ ಇಂಪ್ಯಾಕ್ಟ್… ಬೇಲದಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದ ಸಂಪರ್ಕ ರಸ್ತೆ ದುರಸ್ಥಿ…
- TV10 Kannada Exclusive
- August 8, 2024
- No Comment
- 262
ಸರಗೂರು,ಆ8,Tv10 ಕನ್ನಡ
ಕೊನೆಗೂ ಸರಗೂರು ತಾಲೂಕು ಬೇಲದಕುಪ್ಪೆ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸುಸ್ಥಿತಿಗೆ ತಲುಪಿದೆ.Tv10 ಕನ್ನಡ ವಾಹಿನಿಯ ಸುದ್ದಿಗೆ ಎಚ್ಚೆತ್ತ ಜಿಲ್ಲಾಡಳಿತ ರಸ್ತೆಯನ್ನ ದುರಸ್ಥುಗೊಳಿಸಿದೆ.ಭಕ್ತರಿಗೆ ಸುಗಮವಾಗಿ ತೆರಳಲು ಅವಕಾಶ ಕಲ್ಪಿಸಿಕೊಡಲಾಗಿದೆ.ಇದು Tv10 ವರದಿಯ ಇಂಪ್ಯಾಕ್ಟ್.
ಭೀಮನ ಅಮಾವಾಸ್ಯೆಯಂದು ಸರಗೂರು ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಬೇಲದಕುಪ್ಪೆ ಶ್ರೀಮಹದೇಶ್ವರ
ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿದ್ದಾರೆ.ಅರಣ್ಯ ಪ್ರದೇಶವಾದ ಕಾರಣ ಖಾಸಗಿ ವಾಹನಗಳನ್ನ ನಿರ್ಭಂಧಿಸಿದ್ದು ಸರ್ಕಾರಿ ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗಿತ್ತು.ನಿರಂತರ ಮಳೆಯಿಂದಾಗ ಚೈನ್ ಗೇಟ್ ನಿಂದ ದೇವಾಲಯಕ್ಕೆ ತಲಪುವ ಸಂಪರ್ಕ ರಸ್ತೆ ಹದಗೆಟ್ಟಿದೆ.ಹೀಗಾಗಿ ಭೀಮನ ಅಮಾವಾಸ್ಯೆಯಂದು ಭಕ್ತರನ್ನ ಹೊತ್ತು ಸಾಗಿದ ಸರ್ಕಾರಿ ಬಸ್ ಚಕ್ರಗಳು ಮಣ್ಣಿನ ರಸ್ತೆಯಲ್ಲಿ ಸಿಲುಕಿದೆ.ಗುಂಡಿಯಲ್ಲಿ ಚಕ್ರಗಳು ಸಿಲುಕಿದ ಪರಿಣಾಮ ಭಕ್ತರ ಪರಪಾಟಲು ಅನುಭವಿಸಿದ್ದಾರೆ.ಬಸ್ ನ್ನ ತಳ್ಳಿ ಚಕ್ರಗಳನ್ನ ಗುಂಡಿಯಿಂದ ಬಿಡಿಸಿಕೊಂಡು ನಂತರ ದೇವಸ್ಥಾನಕ್ಕೆ ಪ್ರಯಾಣಿಸಿದ್ದಾರೆ.ರಸ್ತೆಯ ದುಃಸ್ಥಿತಿ ಬಗ್ಗೆ Tv10 ಕನ್ನಡ ವಾಹಿನಿಯಲ್ಲಿ ಸುದ್ದಿ ಪ್ರಸಾರ ಮಾಡಿ ಅಧಿಕಾರಿಗಳ ಕಣ್ಣು ತೆರೆಸಲಾಗಿತ್ತು.ಎಚ್ಚೆತ್ತ ಅಧಿಕಾರಿಗಳು ರಸ್ತೆಯ ಗುಂಡಿಗಳನ್ನ ಮುಚ್ಚಿ ಸುಸ್ಥಿತಿಗೆ ತಂದಿದ್ದಾರೆ.ಎಂದಿನಂತೆ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.ಈ ಹಿಂದಿನಂತೆ ಚೈನ್ ಗೇಟ್ ಬಳಿ ತಮ್ಮ ವಾಹನಗಳನ್ನ ನಿಲ್ಲಿಸಿ ಸರ್ಕಾರಿ ಬಸ್ ನಲ್ಲೇ ತೆರಳುವಂತೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ಭಕ್ತರಿಗೆ ಮನವಿ ಮಾಡಿದ್ದಾರೆ…