ಪತ್ನಿಯನ್ನು ಕೊಂದ ಪತಿಗೆ 7 ವರ್ಷ ಜೈಲು…ಮೈಸೂರು ನ್ಯಾಯಾಲಯದ ತೀರ್ಪು…

ಪತ್ನಿಯನ್ನು ಕೊಂದ ಪತಿಗೆ 7 ವರ್ಷ ಜೈಲು…ಮೈಸೂರು ನ್ಯಾಯಾಲಯದ ತೀರ್ಪು…

ಮೈಸೂರು,ಆ12,Tv10 ಕನ್ನಡಪತ್ನಿಯನ್ನ ಕೊಂದ ಪತಿರಾಯನಿಗೆ ಮೈಸೂರು ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಹಾಗೂ ಒಂದು ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.ಮೈಸೂರು 7 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ರಮೇಶ್ ತೀರ್ಪು ಪ್ರಕಟಿಸಿದ್ದಾರೆ.ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಿಮಂಟಪ ಬಡಾವಣೆಯ ನಿವಾಸಿ ರಾಜೇಶ್ ಜೈಲು ಶಿಕ್ಷೆಗೆ ಒಳಗಾದ ಹಂತಕ.27-08-2022 ರಲ್ಲಿ ಪತ್ನಿ ರಾಧಾಳನ್ನ ಭೀಕರವಾಗಿ ಕೊಂದಿದ್ದ.ಪತ್ನಿಯ ನಡುವಳಿಕೆ ಮೇಲೆ ಅನುಮಾನ ಪಡುತ್ತಿದ್ದ ರಾಜೇಶ್ ಆಗಾಗ ಗಲಾಟೆ ಮಾಡುತ್ತಿದ್ದ.ಕೆಲಸಕ್ಕೂ ತೆರಳದೆ ಕಿರುಕುಳ ನೀಡುತ್ತಿದ್ದ.ಹೊಸಬಟ್ಟೆ ಧರಿಸಿದರೆ ಶಂಕೆ ವ್ಯಕ್ತಪಡಿಸುತ್ತಿದ್ದ.ಈ ಹಿನ್ನಲೆ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಕೊಂದಿದ್ದ.ಎನ್.ಆರ್.ಠಾಣೆಯ ಅಂದಿನ ನಿರೀಕ್ಷಕರಾದ ಅಜರುದ್ದೀನ್ ಹಾಗೂ ಪಿಎಸ್ಸೈ ಜಯಕೀರ್ತಿ ರವರು ಸಾಕ್ಷಿಗಳನ್ನ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಸರ್ಕಾರದ ಪರ ಅಭಿಯೋಜಕರಾದ ಕೆ.ನಾಗರಾಜು ರವರು ವಾದ ಮಂಡಿಸಿದ್ದರು..

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *