ಶ್ರಾವಣ ಶನಿವಾರ…ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಲಡ್ಡು ವಿತರಣೆ…
- TV10 Kannada Exclusive
- August 17, 2024
- No Comment
- 216
ಮೈಸೂರು,ಆ17,Tv10 ಕನ್ನಡ
ಶ್ರಾವಣ ಶನಿವಾರ ಅಂಗವಾಗಿ ಶ್ರೀನಿವಾಸ ಭಕ್ತ ಮಂಡಳಿ
ವತಿಯಿಂದ ಒಂಟಿಕೊಪ್ಪಲು ಶ್ರೀ ಲಕ್ಷ್ಮಿವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ 10ಸಾವಿರ ಲಾಡು ವಿತರಣೆ ಮಾಡಲಾಯಿತು. ಚಾಮರಾಜ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ರವರು ವಿತರಣೆಗೆ ಚಾಲನೆ ನೀಡಿದರು,ನಂತರ ಶಾಸಕರಾದ ಕೆ. ಹರೀಶ್ ಗೌಡ ರವರು ಮಾತನಾಡಿ ಮುಂದಿನ ದಿನದಲ್ಲಿ ಸಾಂಸ್ಕೃತಿಕ ಭರಟನಾಟ್ಯ, ಭಜನೆ, ಸಂಗೀತ ಕಾರ್ಯಕ್ರಮಗಳು, ಶ್ರೀನಿವಾಸ ಕಲ್ಯಾಣ, ತಿರುಪತಿ ಪ್ರವಾಸ ಹಮ್ಮಿಕೊಳ್ಳಲು ಶ್ರೀನಿವಾಸ ಭಕ್ತ ಮಂಡಳಿ ವತಿಯಿಂದ ಸಮಿತಿ ರಚಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದರು,ಇದೇ ಸಂಧರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಕೆ ಆರ್ ಮೋಹನ್ ಕುಮಾರ್, ಟ್ರಸ್ಟಿ ರಾಮಣ್ಣ, ಯುವ ಮುಖಂಡ ಎನ್.ಎಮ್ ನವೀನ್ ಕುಮಾರ್, ಉದ್ಯಮಿ ಸ್ವೀಟ್ ಮಹೇಶ್, ಮಹೇಶ್ ಶೆಣೈ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ರವಿ ಮಂಜೇಗೌಡನ ಕೊಪ್ಪಲು, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ವಿಕ್ರಮ್ ಅಯ್ಯಂಗಾರ್, ರಾಕೇಶ್, ಅಜಯ್ ಶಾಸ್ತ್ರಿ, ಜಿ ರಾಘವೇಂದ್ರ, ವಿನಯ್ ಕುಮಾರ್, ದುರ್ಗಾ ಪ್ರಸಾದ್, ಎಸ್ ಎನ್ ರಾಜೇಶ್, ಚೇತನ್ ಕಾಂತರಾಜು, ಬೈರತಿ ಲಿಂಗರಾಜು, ಸುಚಿಂದ್ರ ಹಾಗೂ ಇನ್ನಿತರರು ಹಾಜರಿದ್ದರು…