ಗಜಪಡೆಗೆ ತೂಕ ಪರಿಶೀಲನೆ…ಕ್ಯಾಪ್ಟನ್ ಅಭಿಮನ್ಯು ತೂಕದಲ್ಲೂ ಲೀಡರ್…
- MysoreTV10 Kannada Exclusive
- August 24, 2024
- No Comment
- 98
ಮೈಸೂರು,ಆ24,Tv10 ಕನ್ನಡಮೈಸೂರು ನಾಡ ಹಬ್ಬ ದಸರಾ ಮಹೋತ್ಸವ 2024 ಹಿನ್ನಲೆ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಗೆ ತೂಕ ಪರಿಶೀಲನೆ ಕಾರ್ಯ ನೆರವೇರಿತು. ಆಗಸ್ಟ್ 21ರಂದುಕಾಡಿನಿಂದ ನಾಡಿಗೆ ಆಗಮಿಸಿರುವ
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳಿಗೆ ತೂಕ ಹಾಕಲಾಯಿತು.ನಗರದ ಧನ್ವಂತ್ರಿ ರಸ್ತೆಯಲ್ಲಿರೋ ಶ್ರೀನಿವಾಸ ವೇ ಬ್ರಿಡ್ಜ್‌ನಲ್ಲಿ ಆನೆಗಳ ತೂಕ ಪರಿಶೀಲನೆ ನಡೆಯಿತು.ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಆನೆಗಳ ತೂಕ ಹಾಕುವುದು ಒಂದು ಪ್ರಕ್ರಿಯೆ.ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ಪದಾರ್ಥ ನೀಡಲಾಗುತ್ತದೆ.
ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು ಆರಂಭಕ್ಕೆ ಮುನ್ನ ತಯಾರಿ ನೀಡಲಾಗುತ್ತದೆ.
ಬೆಳಗ್ಗೆ ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ಮಾಡಲಾಗುತ್ತದೆ.
ನಗರದ ವಾತಾವರಣಕ್ಕೆ ಹಾಗೂ ವಾಹನಗಳ ಓಡಾಟ ಮತ್ರು ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡಲಾಗುತ್ತದೆ.ಅಭಿಮನ್ಯು – 5560
ವರಲಕ್ಷ್ಮಿ – 3495
ಭೀಮ – 4925
ಏಕಲವ್ಯ – 4730
ಲಕ್ಷ್ಮಿ – 2480
ರೋಹಿತ್ – 3625
ಗೋಪಿ – 4970
ಕಂಜನ್ – 4515
ಧನಂಜಯ – 5155