ವಾರ್ಡ್ 50 ರಲ್ಲಿ ಶಾಸಕ ಶ್ರೀವತ್ಸ ಪಾದಯಾತ್ರೆ…
- Politics
- August 27, 2024
- No Comment
- 67
ಮೈಸೂರು,ಆ27,Tv10 ಕನ್ನಡ
ವಲಯ 1 ರ ವ್ಯಾಪ್ತಿಯ ನಗರಪಾಲಿಕೆ 50 ನೇ ವಾರ್ಡ್ ವ್ಯಾಪ್ತಿಯ ಸುಣ್ಣದಕೇರಿ ಹಾಗೂ ಬೆಸ್ತರಗೇರಿ ಭಾಗದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ಇಂದು ಪಾದಯಾತ್ರೆ ನಡೆಸಿ ಸ್ಥಳೀಯ ನಿವಾಸಿಗಳ ಸಮಸ್ಯೆ ಆಲಿಸಿ ಕೂಡಲೇ ಬಗೆಹರಿಸುವ ಭರವಸೆ ನೀಡಿದರು.
ಸುಣ್ಣದಕೇರಿಯ 4 ನೇ ಕ್ರಾಸ್‌ನಿಂದ 9 ನೇ ಕ್ರಾಸ್‌ವರೆಗೆ ಪಾದಯಾತ್ರೆ ನಡೆಸಿ ನಿವಾಸಿಗಳು ಕುಂದು-ಕೊರತೆ ಆಲಿಸಿದರು. ಈ ವೇಳೆ ಕಳೆದ 2_3 ದಿನಗಳಿಂದ ಸುಣ್ಣದಕೇರಿಗೆ ನೀರು ಸರಬರಾಜಿನಲ್ಲಿ ತೊಂದರೆಯಾಗಿದೆ. ಒಳಚರಂಡಿ ವ್ಯವಸ್ಥೆ ಸರಿಯಿಲ್ಲ.ಕೆಲ ರಸ್ತೆಗಳು ಹಾಳಾಗಿವೆ. ಪಾಲಿಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೂಡಲೇ ಕುಡಿಯುವ ನೀರು ಸರಬರಾಜು ಮಾಡಿ ಎಂದು ಮನವಿ ಮಾಡಿದರು.
ನಿವಾಸಿಗಳಿಗೆ ಮನವಿಗೆ ಸ್ಪಂದಿಸಿದ ಶಾಸಕರು, ನೀರು ಸರಬರಾಜಿನ ಪೈಪ್‌ಲೈನ್ ವಾಲ್ವ್ ಬ್ಲಾಕ್ ಆಗಿರುವುದರಿಂದ ಸರಬರಾಜಿನಲ್ಲಿ ತೊಂದರೆಯಾಗಿದೆ. ಕೂಡಲೇ ದುರಸ್ಥಿ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.ನಂತರ ಸುಣ್ಣದಕೇರಿ 7 ಮತ್ತು 9 ಕ್ರಾಸ್ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿ, ಕಾಂಕ್ರೀಟ್ ರಸ್ತೆ ಅಭಿವೃದ್ಧಿಯಲ್ಲಿ ಯಾವುದೇ ಲೋಪವಾಗಬಾರದು ಎಂದು ಗುತ್ತಿಗೆದಾರರಿಗೆ ಎಚ್ಚರಿಸಿದರು.
ಪಾಲಿಕೆ ಎಇಇ ಧನುಷ್, ಎಇ ಪ್ರಶಾಂತ್, ವಾಟರ್ ಇನ್ಸ್‌ಫೆಕ್ಟರ್ ಮಧು, ಬಿಜೆಪಿ ಮುಖಂಡರಾದ ಜೋಗಿ ಮಂಜು, ಕೃಷ್ಣನಾಯಕ, ಜೋಗಪ್ಪ, ರಾಕೇಶ್‌ಗೌಡ, ಲೋಕೇಶ್, ಜಯಸಿಂಹ, ಜಗದೀಶ್, ರಾಜೇಶ್, ಪ್ರದೀಪ್, ಕಿಶೋರ್,ಕೀರ್ತಿ, ಸ್ಥಳೀಯ ನಿವಾಸಿಗಳಾದ ದಾಸಪ್ಪ, ಅಶ್ವಥ್, ಮಹೇಶ್ ನಾಯಕ್ ಮತ್ತಿತರರು ಸಾಥ್ ನೀಡಿದರು…