ಗೌರಿ ಹಬ್ಬ ಸಂಭ್ರಮ…ಪೌರಕಾರ್ಮಿಕರಿಗೆ ಬಾಗಿನ…
- MysoreTV10 Kannada Exclusive
- September 6, 2024
- No Comment
- 100
ಮೈಸೂರು,ಸೆ6,Tv10 ಕನ್ನಡ
ಒಂದೆಡೆ ನಾಡಿನ ಜನತೆ ಗೌರಿಹಬ್ಬದ ಸಡಗರ ಸಂಭ್ರಮದಲ್ಲಿ ಮುಳುಗಿದ್ದಾರೆ.ಮತ್ತೊಂದೆಡೆ ನಾಗರೀಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳಾ ಪೌರಕಾರ್ಮಿಕರನ್ನ ಸ್ಮರಿಸಿದ ವಾರ್ಡ್ ನಂ 55 ರ ಮಾಜಿ ಕಾರ್ಪೊರೇಟರ್ ಮಾ.ವಿ.ರಾಮ್ ಪ್ರಸಾದ್ ಬಾಗಿನ ನೀಡಿ ಗೌರವಿಸಿದ್ದಾರೆ.ಮಹಿಳೆಯರಿಗೆ ವಿಶೇಷ ಹಬ್ಬವಾದ ಇಂದು ಚಾಮುಂಡಿಪುರಂ ವೃತ್ತದಲ್ಲಿರುವ ಉದ್ಯಾನವನದಲ್ಲಿ ಸರಳ ಕಾರ್ಯಕ್ರಮ ಹಮ್ಮಿಕೊಂಡ ಮಾಜಿ ಕಾರ್ಪೊರೇಟರ್ ಮಾ.ವಿ.ರಾಮಪ್ರಸಾದ್ ನಗರವನ್ನ ಸ್ವಚ್ಛಗೊಳಿಸುವ 15 ಕ್ಕೂ ಹೆಚ್ಚು ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ನೀಡಿದ್ದಾರೆ.ಇದೇ ವೇಳೆ ಪುರುಷ ಪೌರಕಾರ್ಮಿಕರಿಗೆ ಬಟ್ಟೆಗಳನ್ನ ನೀಡಿದ್ದಾರೆ