
ಮಹಿಳೆ ಬಗ್ಗೆ ಅಸಭ್ಯ ಮೆಸೇಜ್…ರೌಡಿಶೀಟರ್ ಅಂದರ್…
- CrimeTV10 Kannada Exclusive
- September 17, 2024
- 1 Comment
- 1026
ಮೈಸೂರು,ಸೆ17,Tv10 ಕನ್ನಡ
ಮಹಿಳೆ ಬಗ್ಗೆ ವಾಟ್ಸಾಪ್ ನಲ್ಲಿ ಅಸಭ್ಯ ಮೆಸೇಜ್ ಗಳನ್ನ ಹಾಕಿ ಗೌರವಕ್ಕೆ ಮಸಿ ಬಳಿದ ಆರೋಪದ ಮೇಲೆ ಕೃಷ್ಣರಾಜ ಠಾಣೆ ಪೊಲೀಸರು ರೌಡಿಶೀಟರ್ ಓರ್ವನನ್ನ ಬಂಧಿಸಿದ್ದಾರೆ.ರಮೇಶ್ ಕುಮಾರ್ ಮಾಲಿ ಅರೆಸ್ಟ್ ಆದ ರೌಡಿಶೀಟರ್.ವಿರಾಮ್ ರಾಮ್ ಮಾಲಿ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಕೃಷ್ಣರಾಜ ಠಾಣೆ ಪೊಲೀಸರು ರಮೇಶ್ ಕುಮಾರ್ ಮಾಲಿಯನ್ನ ಬಂಧಿಸಿದ್ದಾರೆ.
ಸಮುದಾಯದ ವಾಟ್ಸಾಪ್ ಗ್ರೂಪ್ ನಲ್ಲಿ ವಿರಾಮ್ ರಾಮ್ ಮಾಲಿ ಹಾಗೂ ಪತ್ನಿ ಸದಸ್ಯರಾಗಿದ್ದರು.ಕೆಲವು ದಿನಗಳ ನಂತರ ವಿರಾಮ್ ರಾಮ್ ಮಾಲಿ ಗ್ರೂಪ್ ನಿಂದ ಎಕ್ಸಿಟ್ ಆದರು.ಅಡ್ಮಿನ್ ಆಗಿರುವ ರಮೇಶ್ ಕುಮಾರ್ ಮಾಲಿ ಆಗಾಗ ವಿರಾಮ್ ರಾಮ್ ಮಾಲಿ ಪತ್ನಿಯ ಬಗ್ಗೆ ಕೆಟ್ಟದಾಗಿ ಮೆಸೇಜ್ ಹಾಕಿದ್ದಾನೆ.ಈ ವಿಚಾರ ಪರಿಚಯಸ್ಥರಿಂದ ತಿಳಿದುಬಂದಿದೆ.ಈ ಬಗ್ಗೆ ಪ್ರಶ್ನಿಸಿದಾಗ ರಮೇಶ್ ಕುಮಾರ್ ಮಾಲಿ ಮತ್ತೆ ಮಹಿಳೆಯ ಬಗ್ಗೆ ಅಸಭ್ಯವಾಗಿ ಮಾತನಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.ಈ ಕುರಿತಂತೆ ವಿರಾಮ್ ರಾಮ್ ಮಾಲಿ ಕೃಷ್ಣರಾಜಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಈ ಮೊದಲೇ ರೌಡಿ ಶೀಟರ್ ಆಗಿರುವ ರಮೇಶ್ ಕುಮಾರ್ ಮಾಲಿಯನ್ನ ಕೃಷ್ಣರಾಜ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ…
1 Comments
I have been exploring for a bit for any high quality articles or weblog posts in this kind of area . Exploring in Yahoo I finally stumbled upon this web site. Reading this information So i’m satisfied to convey that I’ve an incredibly good uncanny feeling I found out just what I needed. I so much definitely will make certain to do not disregard this website and provides it a glance regularly.