ಸೌಲಭ್ಯ ಒದಗಿಸದಿದ್ದಲ್ಲಿ ಅನಿರ್ಧಿಷ್ಠಾವಧಿ ಮುಷ್ಕರ…ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ನಿರ್ಧಾರ…ಸೆ.26 ರಿಂದ ಸೇವೆ ಸ್ಥಗಿತ ಎಚ್ಚರಿಕೆ…
- TV10 Kannada Exclusive
- September 24, 2024
- No Comment
- 233
ಮೈಸೂರು,ಸೆ24,Tv10 ಕನ್ನಡ
ಕಂದಾಯ ಇಲಾಖೆಗೆ ಸರ್ಕಾರದಿಂದ ಒದಗಿಸಿರುವ ಮೊಬೈಲ್ ಆಪ್ ಹಾಗೂ ವೆಬ್ ಅಪ್ಲಿಕೇಷನ್ ಗಳಿಂದ ಉಂಟಾಗಿರುವ ಸಮಸ್ಯೆಗಳಿಂದ ಗ್ರಾಮ ಆಡಳಿತ ಅಧಿಕಾರಿಗಳು ಬೇಸತ್ತಿದ್ದಾರೆ.ಇದಕ್ಕೆ ಪೂರಕವಾಗಿ ಬೇಕಿರುವ ತಂತ್ರಾಂಶಗಳ ನಿರ್ವಹಣೆಗೆ ಬೇಕಿರುವ ಮೊಬೈಲ್ ಸಾಧನ,ಲ್ಯಾಪ್ ಟ್ಯಾಪ್,ಇಂಡರ್ ನೆಟ್ ಹಾಗೂ ಸ್ಕ್ಯಾನರ್ ಗಳನ್ನ ಒದಗಿಸದಿದ್ದಲ್ಲಿ ಸೇವೆಗಳನ್ನ ಸ್ಥಗಿತಗೊಳಿಸಿ ಅನಿರ್ಧಿಷ್ಠಾವಧಿ ಮುಷ್ಕರ ಹಮ್ಮಿಕೊಳ್ಳಲು ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಿಂದ ನಿರ್ಣಯ ಕೈಗೊಳ್ಳಲಾಗಿದೆ.ಈ ಕುರಿತಂತೆ ಸೆ.26 ರಿಂದ ಮುಷ್ಕರ ನಡೆಸುವುದಾಗಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಮೊಬೈಲ್ ಸಾಧನ,ಲ್ಯಾಪ್ ಟ್ಯಾಪ್,ಇಂಟರ್ ನೆಟ್,ಸ್ಕ್ಯಾನಿಂಗ್ ಸೌಲಭ್ಯ ನೀಡದೆ ಕರ್ತವ್ಯ ನಿರ್ವಹಿಸುವಂತೆ ನಿರಂತರವಾಗಿ ಒತ್ತಡ ಹೇರಲಾಗುತ್ತಿದೆ.ಅಲ್ಲದೆ ಇದರಿಂದ ಸಾವು ನೋವುಗಳಾಗುತ್ತಿದೆ.ಮಾರಣಾಂತಿಕ ಹಲ್ಲೆ ನಡೆದ ಪ್ರಕರಣಗಳಿವೆ.ಎಲ್ಲಾ ಮೊಬೈಲ್ ಆಪ್ ಗಳಲ್ಲಿ ಏಕ ಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರ ಒತ್ತಡ ಹೇರುತ್ತಿರುವುದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗುತ್ತಿದೆ.ಆದ್ದರಿಂದ ಮೇಲ್ಕಂಡ ಸೌಲಭ್ಯ ನೀಡುವವರೆಗೆ ಆಧಾರ್ ಸೀಡ್,ಲ್ಯಾಂಡ್ ಬೀಟ್,ಬಗೈರ್ ಹುಕುಂ,ಹಕ್ಕುಪತ್ರ,ನಮೂನೆ 1-5 ರ ವೆಬ್ ಅಪ್ಲಿಕೇಷನ್ ಹಾಗೂ ಪೌತಿ ಆಂದೋಲನ ಆಪ್ ಗಳ ಮೊಬೈಲ್ ತತ್ರಾಂಶಗಳ ಕೆಲಸ ಸ್ಥಗಿತಗೊಳಿಸಲು ತೀರ್ಮಾನಿಸಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇನ್ನುಳಿದಂತೆ ಸೇವಾ ವಿಷಯಗಳಿಗೆ ಸಂಭಂಧಿಸಿದಂತೆ ಪದೋನ್ನತಿ ನೀಡುವುದು,ಅಂತರ ಜಿಲ್ಲಾ ಪತಿ ಪತ್ನಿಯರ ವರ್ಗಾವಣೆ ಪ್ರಕರಣಗಳ ಆದೇಶ ನೀಡುವುದು,ಸರ್ಕಾರಿ ರಜೆ ದಿನಗಳಲ್ಲಿ ಸೇವಾ ಮೆಮೋ ನೀಡುವುದಕ್ಕೆ ಬ್ರೇಕ್ ಹಾಕುವುದು,ಮೊಬೈಲ್ ತತ್ರಾಂಶಗಳ ವಿಚಾರದಲ್ಲಿ ಇದುವರೆಗೆ ದಾಖಲಾಗಿರುವ ಅಮಾನತುಗಳನ್ನ ರದ್ದುಪಡಿಸಿ ಆದೇಶ ಹಿಂಪಡೆಯುವುದು,ಪ್ರಯಾಣ ಭತ್ಯೆಯನ್ನ 500 ರಿಂದ 3000 ರೂಗಳಿಗೆ ಹೆಚ್ಚಿಸುವುದು,ಕೆಲಸದ ಸಮಯದ ಮುನ್ನ ಹಾಗೂ ನಂತರ ನಡೆಯುವ ಎಲ್ಲಾ ವರ್ಚ್ಯುಯಲ್ ಸಭೆಗಳನ್ನ ನಿಷೇಧಿಸುವುದು, ರಾಜ್ಯದ ಗ್ರಾಮ ಸಹಾಯಕರಿಗೆ ಸೇವಾ ಭದ್ರತೆಯನ್ನ ಒದಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನ ಈಡೇರಿಸುವ ವರೆಗೂ ಎಲ್ಲಾ ಬಗೆಯ ಮೊಬೈಲ್ ಆಪ್ ಮತ್ತು ವೆಬ್ ಅಪ್ಲಿಕೇಷನ್ ಗಳನ್ನ ಲೇಖನಿಗಳನ್ನ ಸ್ಥಗಿತಗೊಳಿಸಿ ಅನಿರ್ಧಿಷ್ಠಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ…
ಜಿಲ್ಲಾಧ್ಯಕ್ಷರು ಆದ ನಾಗೇಶಕುಮಾರ್
ಪ್ರದಾನ ಕಾರ್ಯದರ್ಶಿ ಭಾರತೀಶ್ ಹಾಗೂ ಅಬ್ದುಲ್ ರಶೀದ್
ತಾಲೋಕು ಅಧ್ಯಕ್ಷರುಗಳು ಭಾಸ್ಕರ್, ನಾಗೇಶ್ ಯೋಗೇಶ್, ನಿಂಗಯ್ಯ, ನವೀನ್ ರಾವ್ , ಐಶ್ವರ್ಯ, ಸಂದೇಶ ಹಾಗೂ ಲೋಕೇಶ್ ,. ಪುನೀತ್, ಪ್ರದೀಪ್ ಸಿಂಗ್ ಮಹೇಶ್, ಗಂಗಾಧರ್, ಯೋಗಾನಂದ, ರಮೇಶ್, ವಿಷಲ್, ಮಧು, ಎನ್ನಿತರರು ಹಾಜರಿದ್ದರು