ಸಾಂಸ್ಕೃತಿಕ ನಗರಿಯಲ್ಲಿ ರೇವ್ ಪಾರ್ಟಿ…? ಯುವತಿಯರು ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ಪೊಲೀಸರ ವಶಕ್ಕೆ…
- TV10 Kannada Exclusive
- September 29, 2024
- No Comment
- 184
ಮೈಸೂರು,ಸೆ29,Tv10 ಕನ್ನಡ
ಮೈಸೂರಿನ ಹೊರವಲಯದಲ್ಲಿ ರೇವ್ ಪಾರ್ಟಿ ಆಯೋಜಿಸಿದ್ದ ಸ್ಥಳದ ಮೇಲೆ ಇಲವಾಲ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.ನಡೆಯುತ್ತಿದ್ದ ಪಾರ್ಟಿಗೆ ಬ್ರೇಕ್ ಹಾಕಿ ಯುವತಿಯರು ಸೇರಿದಂತೆ 50 ಕ್ಕೂ ಹೆಚ್ಚು ಮಂದಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.30 ಕ್ಕೂ ಹೆಚ್ಚು ಕಾರುಗಳನ್ನ ವಶಪಡಿಸಿಕೊಂಡಿದ್ದಾರೆ.ಕೆ.ಆರ್.ಎಸ್.ಬ್ಯಾಕ್ ವಾಟರ್ ಬಳಿ ಇರುವ ಖಾಸಗಿ ಜಮೀನಿನಲ್ಲಿ ರೇವ್ ಪಾರ್ಟಿ ಆಯೋಜಿಸಿತ್ತೆಂದು ಹೇಳಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಇದನ್ನ ವ್ಯಕ್ತಿಯೊಬ್ಬ ಪ್ರಚಾರ ಮಾಡಿದ್ದ ಹಿನ್ನಲೆ ಸುಮಾರು 25 ಕ್ಕೂ ಹೆಚ್ಚು ಜೋಡಿಗಳು ಪಾರ್ಟಿಗೆ ನೊಂದಾಯಿಸಿಕೊಂಡಿದ್ದರು.ನಿನ್ನೆ ತಡರಾತ್ರಿ ಪಾರ್ಟಿ ಆರಂಭವಾಗಿತ್ತು.ಡಿಜೆ ಮೂಲಕ ಅಬ್ಬರದ ಸಂಗೀತ ಏರ್ಪಡಿಸಲಾಗಿತ್ತೆಂದು ಹೇಳಲಾಗಿದೆ.ಮಾಹಿತಿ ಅರಿತ ಪೊಲೀಸರು ಎಸ್ಪಿ ವಿಷ್ಣುವರ್ಧನ್ ರವರ ನೇತೃತ್ವದಲ್ಲಿ ಅಡಿಷನಲ್ ಎಸ್ಪಿ ನಾಗೇಶ್ ಹಾಗೂ ಡಿವೈಎಸ್ಪಿ ಕರೀಂ ರಾವತರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.ವಶಪಡಿಸಿಕೊಳ್ಳಲಾದ ಯುವಕ ಯುವತಿಯರನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ.ಪಾರ್ಟಿಗಾಗಿ ಬಳಸಲಾದ ಸಂಗೀತ ಉಪಕರಣಗಳನ್ನೂ ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ…