ಪೊಲೀಸರಿಗೆ ಕಳಪೆ ಗುಣಮಟ್ಟ ಆಹಾರ ಪೂರೈಕೆ ಆರೋಪ…ಡಿಸಿಪಿ ಮುತ್ತುರಾಜ್ ಭೇಟಿ ಪರಿಶೀಲನೆ…
- TV10 Kannada Exclusive
- October 5, 2024
- No Comment
- 637
ಮೈಸೂರು,ಅ5,Tv10 ಕನ್ನಡ
ದಸರಾ ಕರ್ತವ್ಯಕ್ಕಾಗಿ ಮೈಸೂರಿಗೆ ಆಗಮಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಆಗುತ್ತಿದೆ ಎಂಬ ಆರೋಪ ಹಿನ್ನಲೆ ಇಂದು ಆಹಾರ ತಯಾರಿಸಲಾಗುತ್ತಿರುವ ಪೊಲೀಸ್ ಭವನಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದಸರಾ ಕರ್ತವ್ಯಕ್ಕಾಗಿ ಇತರೆಡೆಗಳಿಂದ ಸುಮಾರು 1700 ಪೊಲೀಸ್ ಸಿಬ್ಬಂದಿಗಳು ಆಗಮಿಸಿದ್ದಾರೆ.ಕರ್ತವ್ಯ ನಿರತ ಪೊಲೀಸರಿಗೆ ಇಲಾಖೆಯಿಂದ ಆಹಾರ ಸಮಯಕ್ಕೆ ಸರಿಯಾಗಿ ಸರಬರಾಜು ಮಾಡಲಾಗುತ್ತಿದೆ.ಸಧ್ಯ ನೀಡುತ್ತಿರುವ ಆಹಾರ ಕಳಪೆ ಗುಣಮಟ್ಟ ಎಂಬ ಆರೋಪ ಕೇಳಿ ಬಂದ ಹಿನ್ನಲೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸುಮಾರು 40 ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಆಹಾರ ತಯಾರಾಗುತ್ತಿದೆ.ಆಹಾರದ ಗುಣಮಟ್ಟವನ್ನ ಖುದ್ದಾಗಿ ಪರಿಶೀಲಿಸಿದ ಮುತ್ತುರಾಜ್ ಗುಣಮಟ್ಟವನ್ನ ಕಾಪಾಡುವಂತೆ ತಿಳಿಸಿದ್ದಾರೆ…