ಜಂಬೂ ಸವಾರಿಗೆ ಕ್ಷಣಗಣನೆ…ಜಲ್ಲಾಡಳಿತ ಸಜ್ಜು…

ಜಂಬೂ ಸವಾರಿಗೆ ಕ್ಷಣಗಣನೆ…ಜಲ್ಲಾಡಳಿತ ಸಜ್ಜು…

ಮೈಸೂರು,ಅ12,Tv10 ಕನ್ನಡ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೀಯ ಜಂಬೂಸವಾರಿ ಮೆರವಣಿಗೆಗೆ ಇಂದು ವಿದ್ಯುಕ್ತ ಚಾಲನೆ ದೊರೆಯಲಿದೆ.
ಮೈಸೂರು ಅರಮನೆ ಆವರಣದಲ್ಲಿ ಚಿನ್ನದ ಅಂಬಾರಿಯಲ್ಲಿ ಸರ್ವಾಲಂಕಾರ ಭೂಷಿತೆ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಐತಿಹಾಸಿಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.
ಇಂದು ಸಂಜೆ 4 ರಿಂದ 4:30ರೊಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮೈಸೂರು ದಸರಾ ಮಹೋತ್ಸವದ ಜಂಬುಸವಾರಿ ಮೆರವಣಿಗೆಗೆ ಮೈಸೂರು ಅರಮನೆ ಬಲರಾಮ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮಧ್ಯಾಹ್ನ 1.41ರಿಂದ 2.10ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಐತಿಹಾಸಿಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡುವರು. ನಂತರ ಸಂಜೆ 4 ರಿಂದ 4.30 ಗಂಟೆ ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅರಮನೆಯ ಆವರಣದಲ್ಲಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿತ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡಲಿದ್ದಾರೆ.

ಈ ಬಾರಿಯ ದಸರಾ ಮೆರವಣಿಗೆಯಲ್ಲಿ 50ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಸಾಗಿ ಬರಲಿದೆ. ಇದರೊಂದಿಗೆ 60ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಸರ್ಕಾರದ ಸಾಧನೆ, ಗ್ಯಾರಂಟಿ ಯೋಜನೆ, ಸಂವಿಧಾನ ಪ್ರಜಾಪ್ರಭುತ್ವ, ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರ, ಬುಡಕಟ್ಟು ಪರಂಪರೆ ಯಂತಹ ವೈವಿಧ್ಯಮ ಸ್ಥಬ್ಧ ಚಿತ್ರಗಳು ವಿಜಯದಶಮಿ ಮೆರವಣಿಗೆಯಲ್ಲಿ ಸಾಗಿ ಬರಲಿವೆ.
ಕರ್ನಾಟಕ ಪೊಲೀಸ್ ವಾದ್ಯ ಅಶ್ವದಳ ಅಂಬಾರಿ ಹೊರುವ ಅಭಿಮನ್ಯು ಜೊತೆ ಲಕ್ಷ್ಮಿ ಮತ್ತು ಹಿರಣ್ಯ ಸಾತ್ ನೀಡಲಿದ್ದಾರೆ. ಇವರೊಂದಿಗೆ ಕೆಎಸ್ಆರ್ ಪಿ ತುಕಡಿಗಳು, ಅರಮನೆಯ ಲಾಂಛನಗಳು, ಡೊಳ್ಳು ಕುಣಿತ, ಪಟದ ಕುಣಿತ, ವೀರಗಾಸೆ, ಕರಡಿ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪ್ರೇಕ್ಷಕರ ಮನ ಸೆಳೆಯಲಿದೆ.
ಅರಮನೆಯಿಂದ ಹೊರಡಲಿರುವ ಜಂಬೂ ಸವಾರಿ ಮೆರವಣಿಗೆಯು ಉತ್ತರ ದ್ವಾರದ ಮೂಲಕ ತೆರಳಿ ಕೆಆರ್ ಸರ್ಕಲ್, ಸಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದ ಸರ್ಕಲ್, ಬಂಬೂ ಬಜಾರ್, ಹೈವೇ ಸರ್ಕಲ್ ಮೂಲಕ ಸಾಗಿ ಸಂಜೆ ವೇಳೆಗೆ ಬನ್ನಿಮಂಟಪ ಪಂಜಿನ ಕವಾಯತು ಮೈದಾನ ತಲುಪಲಿದೆ.ಸಂಜೆ ಬನ್ನಿಮಂಟಪ ಮೈದಾನದಲ್ಲಿ ಅತ್ಯಾಕರ್ಷಕ ಪಂಜಿನ ಕವಾಯತು ಪ್ರದರ್ಶನ ಸಹ ನಡೆಯಲಿದೆ.
ಜಂಬೂಸವಾರಿ ಮೆರವಣಿಗೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜವಂಶಸ್ಥರಾದ ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಸಚಿವರುಗಳಾದ ಶಿವರಾಜ್ ತಂಗಡಗಿ ಸೇರಿದಂತೆ ಸಂಪುಟದ ಇನ್ನಿತರ ಸಚಿವರು, ಶಾಸಕರು, ಸಂಸತ್ ಸದಸ್ಯರು ಭಾಗವಹಿಸ ಲಿದ್ದಾರೆ.ಇವರೊಂದಿಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಸೇರಿದಂತೆ ಹಲವು ಅಧಿಕಾರಿಗಳು, ಗಣ್ಯರು ಸಹ ಭಾಗವಹಿಸಲಿದ್ದಾರೆ.

ಸಂಜೆ ಮೈಸೂರಿನ ಬನ್ನಿಮಂಟಪ ಮೈದಾನದಲ್ಲಿ ನಡೆಯಲಿರುವ ಅತ್ಯಾಕರ್ಷಕ ಪಂಚಿನ ಕವಾಯತು ಕಾರ್ಯಕ್ರಮದಲ್ಲಿ ರಾಜ್ಯಪಾಲ ತ್ಯಾವರ್ ಚಂದ್ ಗೆಲೋಟ್ ಅವರು ಕವಾಯತು ವೀಕ್ಷಿಸಿ ಗೌರವ ವಂದನೆಯನ್ನು ಸ್ವೀಕರಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸಚಿವರಾದ ಹೆಚ್‍ಡಿ ಕುಮಾರಸ್ವಾಮಿ ನಿರ್ಮಲಾ ಸೀತಾರಾಮ ಪ್ರಹ್ಲಾದ್ ಜೋಶಿ ಶೋಭಾ ಕರಂದ್ಲಾಜೆ ವಿ ಸೋಮಣ್ಣ ಸೇರಿದಂತೆ ರಾಜ್ಯ ಸಚಿವರು ಸಂಸದರು ಶಾಸಕರುಗಳು ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.ಜಂಬೂ ಸವಾರಿ ಹಾಗೂ ಪಂಜಿನಕವಾಯತು ಕಾರ್ಯಕ್ರಮಗಳಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ…

Spread the love

Related post

ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ…2.27 ಕೋಟಿ ಸಂಗ್ರಹ…ನಿಷೇಧಿತ 2000 ಮುಖಬೆಲೆಯ ನೋಟುಗಳು ಪತ್ತೆ…

ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ…2.27 ಕೋಟಿ ಸಂಗ್ರಹ…ನಿಷೇಧಿತ…

ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ…2.27 ಕೋಟಿ ಸಂಗ್ರಹ…ನಿಷೇಧಿತ 2000 ಮುಖಬೆಲೆಯ ನೋಟುಗಳು ಪತ್ತೆ… ಹನೂರು,ಅ16,Tv10 ಕನ್ನಡ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಮಲೆ…
ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ…

ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ…

ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ… ಮೈಸೂರು,ಅ16,Tv10 ಕನ್ನಡ ಮಾಧ್ಯಮದ ಗೆಳೆಯರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ ಕ್ಲಿಕ್ಕಿಸಿದ್ದಾರೆ.ಚಾಮುಂಡಿ ಬೆಟ್ಟಕ್ಕೆ ಭೇಟಿ‌ ನೀಡಿದ ವೇಳೆತಾವೇ ಮೊಬೈಲ್ ಪಡೆದು ಸೆಲ್ಫಿ…
ಉಪ ಪ್ರಾಂಶುಪಾಲರಾಗಿ ನೇಮಕ ಮಾಡುವ ಆಮಿಷ…7.45 ಲಕ್ಷ ವಂಚನೆ…ಸಿಎಆರ್ ಮುಖ್ಯಪೇದೆ,ಪತ್ನಿ ಸೇರಿದಂತೆ 7 ಮಂದಿ ವಿರುದ್ದ FIR…

ಉಪ ಪ್ರಾಂಶುಪಾಲರಾಗಿ ನೇಮಕ ಮಾಡುವ ಆಮಿಷ…7.45 ಲಕ್ಷ ವಂಚನೆ…ಸಿಎಆರ್ ಮುಖ್ಯಪೇದೆ,ಪತ್ನಿ ಸೇರಿದಂತೆ…

ಮೈಸೂರು,ಅ16,Tv10 ಕನ್ನಡ ಪಿಯು ಕಾಲೇಜಿಗೆ ಉಪ ಪ್ರಾಂಶುಪಾಲರಾಗಿ ಹಾಗೂ ಟ್ರಸ್ಟ್ ಗೆ ಟ್ರಸ್ಟಿಯಾಗಿ ನೇಮಕ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಸಿಎಆರ್ ಮುಖ್ಯಪೇದೆ ಹಾಗೂ ಪತ್ನಿ 7.45 ಲಕ್ಷ ವಂಚಿಸಿದ…

Leave a Reply

Your email address will not be published. Required fields are marked *