ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣ…ನಂಜನಗೂಡು ESI ಆಸ್ಪತ್ರೆ ಅಧಿಕಾರಿ ಗಣೇಶ್ ವರ್ಗಾವಣೆ…

ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣ…ನಂಜನಗೂಡು ESI ಆಸ್ಪತ್ರೆ ಅಧಿಕಾರಿ ಗಣೇಶ್ ವರ್ಗಾವಣೆ…

ನಂಜನಗೂಡು,ಅ22,Tv10 ಕನ್ನಡ

ಮಹಿಳಾ ನೌಕರರೊಂದಿಗೆ ಅಸಭ್ಯವಾಗಿ ಹಾಗೂ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಹೊತ್ತ ನಂಜನಗೂಡಿನ ESI ಆಸ್ಪತ್ರೆ ಹಿರಿಯ ಫಾರ್ಮೆಸಿ ಅಧಿಕಾರಿ ಗಣೇಶ್ ಗೆ ವರ್ಗಾವಣೆ ಮಾಡಲಾಗಿದೆ.ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿರುವ ಕೇಂದ್ರದಲ್ಲಿ OOD ಮೇಲೆ ಕರ್ತವ್ಯ ನಿರ್ವಹಿಸುವಂತೆ ವರ್ಗಾವಣೆ ಮಾಡಲಾಗಿದೆ.ಇಂದಿನಿಂದ 14 ದಿನಗಳ ಕಾಲ 22-10-2024 ರಿಂದ 4-11-2024 ರವರೆಗೆ ಕರ್ತವ್ಯ ನಿರ್ವಹಿಸುವಂತೆ ESI ಆಸ್ಪತ್ರೆಯ ಅಧೀಕ್ಷಕರು ಆದೇಶಿಸಿದ್ದಾರೆ.

ಹಲವು ಮಹಿಳಾ ನೌಕರರಿಗೆ ಕರ್ತವ್ಯ ನಿರ್ವಹಿಸುವ ವೇಳೆ ಅಶ್ಲೀಲ ಪದ ಪ್ರಯೋಗ ಮಾಡುವುದು,ಅಶ್ಲೀಲ ಮೊಬೈಲ್ ಸಂದೇಶ ಕಳುಹಿಸುವುದು,ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಆರೋಪಿಸಲಾಗಿತ್ತು.ಈ ಬಗ್ಗೆ ನಂಜನಗೂಡು ಕೇಂದ್ರ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.ಇದೀಗ ಗಣೇಶ್ ಗೆ ಮೈಸೂರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ…

Spread the love

Related post

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಮಂಡ್ಯ,ಜೂ30,Tv10 ಕನ್ನಡ ಕೆ.ಆರ್.ಎಸ್.ಡ್ಯಾಂ ಒಡಲನ್ನು ತುಂಬಿದ ಕಾವೇರಿ ಮಾತೆಗೆ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.ಈ ಹಿನ್ನೆಲೆ ಕೆ ಆರ್.ಎಸ್.ನವವಧುವಿನಂತೆ ಶೃಂಗಾರಗೊಂಡಿದೆ.ಕನ್ನಡ ಬಾವುಟದಿಂದ ಕಂಗೊಳಿಸುತ್ತಿದೆ.ಹಸಿರು ತೋರಣ, ಹೂಗಳ ಮೂಲಕ…
ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…

Leave a Reply

Your email address will not be published. Required fields are marked *