ಕಾನೂನು ಬಾಹಿರ ತಂತ್ರಜ್ಞಾನ ಬಳಕೆ…ಪೊಲೀಸ್ ಕಮೀಷನರ್ ಮೊಬೈಲ್ ನಂಬರ್ ನಕಲಿ ಮಾಡಿದ ಭೂಪ…ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…
- TV10 Kannada Exclusive
- November 14, 2024
- No Comment
- 86
ಮೈಸೂರು,ನ14,Tv10 ಕನ್ನಡ
ಮೈಸೂರು ನಗರ ಪೊಲೀಸ್ ಆಯುಕ್ತರ ಮೊಬೈಲ್ ನಂಬರ್ ಅನ್ನು ಕಾನೂನು ಬಾಹಿರ ತಂತ್ರಜ್ಞಾನ ಬಳಸಿ ವ್ಯಕ್ತಿಯೊಬ್ಬರಿಗೆ ಕಾಲ್ ಮರ್ಜ್ ಮಾಡುವ ಮೂಲಕ ಧಂಕಿ ಹಾಕಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.ಪೊಲೀಸ್ ಕಮೀಷನರ್ ಮೊಬೈಲ್ ಸಂಖ್ಯೆ ಡಿಸ್ಲ್ಲೇ ಆಗುವಂತೆ ನಕಲಿ ಕರೆ ಮಾಡಿ ಧಂಕಿ ಹಾಕಿದ ಐನಾತಿ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಮಹಮದ್ ಸೈಫ್ ಎಂಬಾತನ ವಿರುದ್ದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.ಬನ್ನಿಮಂಟಪದ ನಿವಾಸಿ ಸಮೀರ್ ಹುಸೇನ್ ಎಂಬುವರು ಪ್ರಕರಣ ದಾಖಲಿಸಿದ್ದಾರೆ.
ಸಮೀರ್ ಹುಸೇನ್ ರವರು ಸೆಪ್ಟೆಂಬರ್ ನಲ್ಲಿ ಮಹಮದ್ ಸೈಫ್ ರಿಂದ ಆಡಿಕ್ಯೂ4 ಕಾರ್ ಅನ್ನು 8 ಲಕ್ಷಕ್ಕೆ ಖರೀದಿಸಿದ್ದರು. ಮುಂಗಡವಾಗಿ ಅಬ್ದುಲ್ ನಸೀರ್ ಎಂಬುವರ ಮೂಲಕ 5 ಲಕ್ಷ ಪಾವತಿಸಿದ್ದರು.ಒಪ್ಪಂದದಂತೆ ಮುಂಗಡ ಹಣ ಪಡೆದ ಮಹಮದ್ ಸೈಫ್ ಕಾರು ನೀಡಲಿಲ್ಲ.ಹಲವು ಬಾರಿ ಕಾರು ನೀಡುವಂತೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ.ಕಾರ್ ಕೊಡು ಅಥವಾ ಹಣ ಹಿಂದಿರುಗಿಸಬೇಕೆಂದು ಸಮೀರ್ ಹುಸೇನ್ ಒತ್ತಡ ಹೇರಿದಾಗ ನನಗೆ ಪೊಲೀಸ್ ಕಮೀಷನರ್ ಗೊತ್ತು ಅವರಿಂದ ಫೋನ್ ಮಾಡಿಸ್ತೀನಿ ಅಂತ ಧಂಕಿ ಹಾಕಿದ.ಇದರಂತೆ ನವೆಂಬರ್ 7 ರಂದು ಪೊಲೀಸ್ ಕಮೀಷನರ್ ರವರ ಮೊಬೈಲ್ ನಂಬರ್ 9480802201 ರಿಂದ ಸಮೀರ್ ಹುಸೇನ್ ರವರಿಗೆ ಕರೆಬಂದಿದೆ.ರಿಸೀವ್ ಮಾಡಿದಾಗ ಬಿಪ್ ಸೌಂಡ್ ಬಂದಿದೆ.ನಂತರ ಬೇರೆ ಕಾಲ್ ಜೊತೆ ಮರ್ಜ್ ಆಗಿದೆ.ಮೊಬೈಲ್ ನಲ್ಲಿ ಮೇಡಂ ಮಾತನಾಡಿದ್ದಾರೆ.ಹೇಳಿ ಮೇಡಂ ಎಂದು ಸಮೀರ್ ಹುಸೇನ್ ಹೇಳಿದ್ದಾರೆ.ನಾನು ಕಾಲ್ ಮಾಡಿಲ್ಲ ನೀವೇ ಮಾಡಿದ್ದು ಹೇಳಿ ಅಂತ ಮೇಡಂ ತಿಳಿಸಿದ್ದಾರೆ.ನಂತರ ಕಾಲ್ ಕಟ್ ಆಗಿದೆ.ಕಾನೂನು ಬಾಹಿರ ತಂತ್ರಜ್ಞಾನ ಬಳಸಿ ಪೊಲೀಸ್ ಕಮೀಷನರ್ ಮೊಬೈಲ್ ಸಂಖ್ಯೆ ಡಿಸ್ಪ್ಲೇ ಆಗುವಂತೆ ನಕಲಿ ಮಾಡಿ ಮಹಮದ್ ಸೈಫ್ ಬೆದರಿಕೆ ಹಾಕಿದ್ದಾನೆಂದು ಆರೋಪಿಸಿರುವ ಸಮೀರ್ ಹುಸೇನ್ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪೊಲೀಸ್ ಕಮೀಷನರ್ ಮೊಬೈಲ್ ಸಂಖ್ಯೆಯನ್ನ ನಕಲಿಯಾಗಿ ಬಳಸಿ ಬೆದರಿಕೆ ಹಾಕಿ ತನಗೆ ಕಾರು ನೀಡದೆ ಹಣ ಹಿಂದಿರುಗಿಸದೆ ವಂಚಿಸಿರುವ ಮಹಮದ್ ಸೈಫ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ…