ಮೊದಲ ಪತ್ನಿ ಇದ್ದರೂ ಲೇಡೀಸ್ ಪಿಜಿ ಓನರ್ ನ ಬಲೆಗೆ ಬೀಳಿಸಿದ…ಗರ್ಭಿಣಿ ಮಾಡಿ 9 ಲಕ್ಷಕ್ಕೆ ಉಂಡನಾಮ…ಉಂಡೂ ಹೋದ ಕೊಂಡೂ ಹೋದ ಐನಾತಿ ವಿರುದ್ದ FIR ದಾಖಲು

ಮೊದಲ ಪತ್ನಿ ಇದ್ದರೂ ಲೇಡೀಸ್ ಪಿಜಿ ಓನರ್ ನ ಬಲೆಗೆ ಬೀಳಿಸಿದ…ಗರ್ಭಿಣಿ ಮಾಡಿ 9 ಲಕ್ಷಕ್ಕೆ ಉಂಡನಾಮ…ಉಂಡೂ ಹೋದ ಕೊಂಡೂ ಹೋದ ಐನಾತಿ ವಿರುದ್ದ FIR ದಾಖಲು

ಮೈಸೂರು,ನ19,Tv10 ಕನ್ನಡ

ಮೊದಲನೇ ಹೆಂಡತಿ ಜೊತೆ ಸಂಸಾರ ನಡೆಸುತ್ತಿದ್ದರೂ ಲೇಡೀಸ್ ಪಿಜಿ ಓನರ್ ಜೊತೆ ಪ್ರೀತಿಸುವ ನಾಟಕವಾಡಿ ಮದುವೆ ಮಾಡಿಕೊಂಡ ಭೂಪ ಆಕೆಯನ್ನ ಗರ್ಭಿಣಿ ಮಾಡಿ ಸುಮಾರು 9 ಲಕ್ಷ ಹಣಕ್ಕೆ ಉಂಡೆನಾಮ ಇಟ್ಟು ವಂಚಿಸಿದ ಪ್ರಕರಣವೊಂದು ಮೈಸೂರಿನ ವಿವಿ ಮೊಹಲ್ಲಾದಲ್ಲಿ ಬೆಳಕಿಗೆ ಬಂದಿದೆ.ಈ ಸಂಭಂಧ ವಂಚನೆಗೆ ಇಳಗಾದ ಗೃಹಿಣಿ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪತಿ,ಅತ್ತೆ,ಮಾವನ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು ನಿವಾಸಿ ಭರತ್ ಗೌಡ ಹಾಗೂ ಈತನ ತಂದೆ ಸುರೇಶ್ ತಾಯಿ ಅಂಕತಲತಾ ಎಂಬುವರ ವಿರುದ್ದ ವಂಚನೆಗೆ ಒಳಗಾದ ಗೃಹಿಣಿ ಪ್ರಕರಣ ದಾಖಲಿಸಿದ್ದಾರೆ.
ಗೋಕುಲಂ ನಲ್ಲಿ ಲೇಡೀಸ್ ಪಿಜಿ ನಡೆಸುತ್ತಿರುವ ಭಾಗ್ಯಲಕ್ಷ್ಮಿ (31) ವಂಚನೆಗೆ ಒಳಗಾದವರು.2022 ರಲ್ಲಿ ಭರತ್ ಗೌಡ(29) ಇನ್ಸ್ಟಾಗ್ರಾಂ ಮೂಲಕ ಭಾಗ್ಯಲಕ್ಷ್ಮಿಯನ್ನ ಪರಿಚಯ ಮಾಡಿಕೊಂಡಿದ್ದಾನೆ.ತನಗಿಂತ ಎರಡು ವರ್ಷ ದೊಡ್ಡವರಾದ ಭಾಗ್ಯಲಕ್ಷ್ಮಿ ಜೊತೆ ಪ್ರೀತಿಯ ನಾಟಕವಾಡಿ ಮದುವೆ ಆಗುವುದಾಗಿ ತಿಳಿಸಿದ್ದಾನೆ.ಈ ಹಿಂದೆ ಮೋನಿಕಾ ಎಂಬುವಳ ಜೊತೆ ಮದುವೆ ಆಗಿದ್ದೇನೆ ಕಾರಣಾಂತರದಿಂದ ಡೈವೋರ್ಸ್ ನೀಡಿದ್ದೇನೆ ಎಂದು ನಂಬಿಸಿದ್ದಾನೆ.ಈ ಬಗ್ಗೆ ನ್ಯಾಯಾಲಯದ ತೀರ್ಪಿನ ದಾಖಲೆ ಕೊಡುವುದಾಗಿ ನಂಬಿಸಿದ್ದಾನೆ.ಅಲ್ಲದೆ ಭರತ್ ಗೌಡ ತಂದೆ ಸುರೇಶ್,ತಾಯಿ ಅಂಕಿತ ಲತಾ ಸಹ ಸಾಥ್ ನೀಡಿ ಮೊದಲ ಪತ್ನಿಗೆ ಡೈವೋರ್ಸ್ ಆಗಿದೆ ಎಂದು ಸುಳ್ಳು ಹೇಳಿ ನಂಬಿಸಿದ್ದಾರೆ.ನಯವಂಚಕರ ಮಾತನ್ನ ನಂಬಿದ ಭಾಗ್ಯಲಕ್ಷ್ಮಿ ಮದುವೆಗೆ ಒಪ್ಪಿದ್ದಾರೆ.ಸ್ನೇಹಿತರು,ಸಂಭಂಧಿಕರು ಹಾಗೂ ಪೋಷಕರ ಸಮಕ್ಷಮದಲ್ಲಿ 2023 ರಲ್ಲಿ ಖಾಸಗಿ ಫಂಕ್ಷನ್ ಹಾಲ್ ನಲ್ಲಿ ಮದುವೆ ನಡೆದಿದೆ.ಈ ವೇಳೆ ಬುಸಿನೆಸ್ ಗಾಗಿ 10 ಲಕ್ಷ ಕ್ಯಾಶ್ ಹಾಗೂ 100 ಗ್ರಾಂ ಚಿನ್ನ ವರದಕ್ಷಿಣೆಗೆ ಡಿಮ್ಯಾಂಡ್ ಮಾಡಿದ್ದಾರೆ.ಮದುವೆ ನಂತರ ಕೊಡುವುದಾಗಿ ಭಾಗ್ಯಲಕ್ಷ್ಮಿ ಹೆತ್ತವರು ಒಪ್ಪಿದ್ದಾರೆ.ಮದುವೆ ಆದ ನಂತರ ಹಣಕ್ಕಾಗಿ ಭರತ್ ಗೌಡ ಪೀಡಿಸಿದ್ದಾನೆ.ತಂದೆ ತಾಯಿಯನ್ನ ಒಪ್ಪಿಸಿದ ಭಾಗ್ಯಲಕ್ಷ್ಮಿ 8 ಲಕ್ಷ ನೀಡಿ ಕಾರ್ ವಾಶಿಂಗ್ ಬುಸಿನೆಸ್ ಹಾಕಿಕೊಟ್ಟಿದ್ದಾರೆ.ಅಲ್ಲದೆ ಕ್ರೆಡಿಟ್ ಕಾರ್ಡ್ ನಿಂದ ಭರತ್ ಗೌಡ 1.25 ಲಕ್ಷ ಡ್ರಾ ಮಾಡಿಕೊಂಡಿದ್ದಾನೆ.ಈ ಮಧ್ಯೆ ಮೊದಲ ಪತ್ನಿ ಮೊನಿಕಾ ಮೆಸೇಜ್ ಮಾಡಿ ಭರತ್ ಗೌಡ ಮೋಸಗಾರ ಎಂದು ಎಚ್ಚರಿಕೆ ನೀಡಿದಾಗ ನಮ್ಮ ಸಂಸಾರ ಹಾಳು ಮಾಡುತ್ತಿದ್ದಾಳೆ ನಂಬಬೇಡ ಎಂದು ನಾಡಕವಾಡಿದ್ದಾನೆ.ನಂತರದ ದಿನಗಳಲ್ಲಿ ಭರತ್ ಗೌಡ ಬಣ್ಣ ಬಯಲಾಗಿದೆ.ಮೊನಿಕಾ ಜೊತೆ ನಂಟು ಉಳಿಸಿಕೊಂಡು ಡೈವೋರ್ಸ್ ನಾಟಕವಾಡಿ ತನ್ನನ್ನ ವಂಚಿಸಿರುವುದು ಭಾಗ್ಯಲಕ್ಷ್ಮಿ ಅವರಿಗೆ ಮನದಟ್ಟಾಗಿದೆ.ಈ ಬಗ್ಗೆ ಪ್ರಶ್ನಿಸಿದಾಗ ನಿನ್ನ ಜೊತೆ ದೈಹಿಕ ಸಂಭಂಧ ಬೆಳೆಸಿ ಆಸ್ತಿ ಲಪಟಾಯಿಸುವ ಉದ್ದೇಶದಿಂದ ಮಾಡಿರುವುದಾಗಿ ತಿಳಿಸಿದ್ದಾನೆ.ಅಲ್ಲದೆ ಕೊಲೆ ಮಾಡುವುದಾಗಿ ಹೆದರಿಸಿದ್ದಾನೆ.ನಯವಂಚಕನ ಮಾತಿಗೆ ಮರುಳಾದ ಭಾಗ್ಯಲಕ್ಷ್ಮಿ ಇದೀಗ ಗರ್ಭಿಣಿ.ಸುಳ್ಳು ಹೇಳಿ ವಂಚಿಸಿ ಗರ್ಭಿಣಿ ಮಾಡಿ ಹಣ ಲಪಟಾಯಿಸಿ ಮೋಸ ಮಾಡಿದ ಭರತ್ ಗೌಡ,ಸುರೇಶ್,ಅಂಕಿತಲತಾ ವಿರುದ್ದ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸುವಂತೆ ಭಾಗ್ಯಲಕ್ಷ್ಮಿ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…
ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ…

ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ…

ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ… ಮೈಸೂರು,ಸೆ15,Tv10 ಕನ್ನಡ ಸಾಹಸಸಿಂಹ, ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ 76ನೇ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 18ರಂದು…

Leave a Reply

Your email address will not be published. Required fields are marked *