
ನಕಲಿ ಕಂಪನಿ ಹೆಸರಲ್ಲಿ ಧೋಖಾ…ಮಹಿಳೆಗೆ 30.78 ಲಕ್ಷಕ್ಕೆ ಉಂಡೆ ನಾಮ…
- TV10 Kannada Exclusive
- November 25, 2024
- No Comment
- 59
ಮೈಸೂರು,ನ25,Tv10 ಕನ್ನಡ
ಹೆಚ್ಚಿನ ಲಾಭಂಶ ತೋರಿಸಿ ನಕಲಿ ಕಂಪನಿ ಮೇಲೆ ಹಣ ಹೂಡಿಕೆ ಮಾಡಿಸಿ ಮಹಿಳೆಯೋರ್ವರಿಗೆ 30.78 ಲಕ್ಷ ಯಾಮಾರಿಸಿದ ಪ್ರಕರಣವೊಂದು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಹೆಚ್ಚಿನ ಲಾಭಾಂಶ ತೋರಿಸಿ ಹಂತಹಂತವಾಗಿ 30.78 ಲಕ್ಷ ಪಾವತಿಸಿಕೊಂಡು ವಂಚನೆ ಮಾಡಿದ್ದಾರೆ.ರಾಜೀವ್ ನಗರದ ನಿವಾಸಿ ಬಿಬಿ ಸಾರಾ(40) ಎಂಬುವರೇ ಹಣ ಕಳೆದುಕೊಂಡ ಮಹಿಳೆ.
ಇನ್ಸ್ಟಾಗ್ರಾಂ ಮೂಲಕ ಪ್ರಶಾಂತ್ ಎಂಬಾತ ಪರಿಚಯವಾಗಿದ್ದಾನೆ.www.finegold.PAMP.com ನಲ್ಲಿ ಹಣ ಇನ್ವೆಸ್ಟ್ ಮಾಡುವಂತೆ ಸಲಹೆ ನೀಡಿದ್ದಾನೆ.ಪ್ರಾರಂಭದಲ್ಲಿ 1.5 ಲಕ್ಷ ಹಣ ಹೂಡಿದಾಗ 3.30 ಲಕ್ಷ ಲಾಭಂಶ ತೋರಿಸಲಾಗಿದೆ.ಹಣ ವಿತ್ ಡ್ರಾ ಮಾಡಲು ಬಿಬಿ ಸಾರಾ ಮುಂದಾದಾಗ ಮತ್ತೆ 5.20 ಲಕ್ಷ ಪಾವತಿಸುವಂತೆ ತಿಳಿಸಿದ್ದಾರೆ.ಹಣ ಹೂಡಿದ ಬಳಿಕ ವ್ಯಾಲೆಟ್ ನಲ್ಲಿ 12.30 ಲಕ್ಷ ಲಾಭಂಶ ತೋರಿಸಿದೆ.ಈ ಹಣ ಡ್ರಾ ಮಾಡಲು ಮುಂದಾದಾಗ ಟ್ಯಾಕ್ಸ್ ಕಟ್ಟಬೇಕೆಂದು ನಂಬಿಸಿ ಹಂತ ಹಂತವಾಗಿ ಹಣ ಪಾವತಿಸಿಕೊಂಡಿದ್ದಾರೆ.ಒಟ್ಟು 30.78 ಲಕ್ಷ ಹೂಡಿದ ಬಿಬಿ ಸಾರಾ ಗೆ ತಾವು ವಂಚನೆಗೆ ಒಳಗಾಗಿರುವುದು ಮನವರಿಕೆಯಾಗಿದೆ.ನಂತರ ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…