
ಶ್ರೀ ವೈಷ್ಣವ ಸಮಾವೇಶದಲ್ಲಿ ವಿಕ್ರಂ ಅಯ್ಯಂಗಾರ್ ರವರಿಗೆ ಸನ್ಮಾನ…ಸಾಮಾಜಿಕ ಸೇವೆಗೆ ಸಂದ ಗೌರವ…
- TV10 Kannada Exclusive
- November 25, 2024
- No Comment
- 86

ಮೈಸೂರು,ನ25,Tv10 ಕನ್ನಡ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ಯದುಗಿರಿ ಯತಿರಾಜ ಮಠ ಹಾಗೂ ಅಖಿಲ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾದಿಂದ ಆಯೋಜಿಸಲಾಗಿದ್ದ ಶ್ರೀ ರಾಮಾನುಜ ವಿಶ್ವವಿಜಯ ಮಹೋತ್ಸವ ಹಾಗೂ ಬೃಹತ್ ಶ್ರೀ ವೈಷ್ಣವ ಸಮಾವೇಶದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು. ಮೈಸೂರು ನಗರದ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ರವರಿಗೆ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಯದುಗಿರಿ ಮಠದ ಶ್ರೀ ಶ್ರೀ ಯದುಗಿರಿ ಯತಿರಾಜ ರಾಮಾನುಜ ಜಿಯರ್ ಸ್ವಾಮಿಗಳು ಸನ್ಮಾನಿಸಿ ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಟಿ ಎಸ್
ಶ್ರೀವತ್ಸ ಶುಭಾಶಯ ಕೋರಿದರು.
ಇದೇ ಸಂದರ್ಭದಲ್ಲಿ ಯುವ ಮುಖಂಡರಾದ ಟಿ ಎಸ್ ಅರುಣ್ ಸೇರಿದಂತೆ ಇನ್ನಿತರರು ಹಾಜರಿದ್ದರು…