ಸುಭ್ರಹ್ಮಣ್ಯ ಷಷ್ಠಿ…ಸಿದ್ದಿಲಿಂಗಪುರ ದೇವಾಲಯದಲ್ಲಿ ವಿಶೇಷ ಪೂಜೆ…ಹರಿದು ಬಂದ ಭಕ್ತಸಾಗರ…
- TV10 Kannada Exclusive
- December 7, 2024
- No Comment
- 14
ಮೈಸೂರು,ಡಿ7,Tv10 ಕನ್ನಡ
ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಸಿದ್ದಲಿಂಗಪುರದಲ್ಲಿನ ಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ಇಂದು ವಿಶೇಷ ಪೂಜಾ ಕೈಂಕರ್ಯಗಳನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಷಷ್ಠಿ ಪ್ರಯುಕ್ತ ಸುಬ್ರಮಣ್ಯೇಶ್ವರ ಸ್ವಾಮಿಗೆ ಇಂದು ಮುಂಜಾನೆ ಶುದ್ಧೋದಕ ಸ್ನಾನ, ಪಂಚಾಮೃತ ಅಭಿಷೇಕ, ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ ನೆರವೇರಿಸಿ ನಂತರ ಸುಬ್ರಮಣ್ಯೇಶ್ವರ ಸ್ವಾಮಿಗೆ ಮೈಸೂರು ಅರಸರು ನೀಡಿದ ನಾಗಾಭರಣವನ್ನು ಧಧಾರಣೆ ಮಾಡಲಾಯಿತು.
ಆನಂತರ ದೇವರಿಗೆ ಅಷ್ಟೋತ್ತರ, ಸಹಸ್ರನಾಮ, ಅಷ್ಟಾವಧಾನ ಸೇವೆಯನ್ನು ನೆರವೇರಿಸಿ ಮಹಾಮಂಗಳಾರತಿ ಮಾಡಿ ಭಕ್ತಾದಿಗಳಿಗೆ 3:30ರ ನಂತರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಇಂದು ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪೂಜೆ ನಂತರ ತೀರ್ಥ, ಪ್ರಸಾದವನ್ನು ನೀಡಲಾಯಿತು.
ಷಷ್ಠಿ ವಿಶೇಷ ಪೂಜೆ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ದೇವರ ದರ್ಶನಕ್ಕಾಗಿ ಭಕ್ತಾದಿಗಳಿಗೆ ದೇವಾಲಯದ ಸುತ್ತಲೂ ಬ್ಯಾರಿಕೇಡ್ ಹಾಕಿ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿತ್ತು.
ದೇವಾಲಯಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ದೇವರ ದರುಶನ ಪಡೆದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಹಿನ್ನೆಲೆ ಮೈಸೂರು-ಬೆಂಗಳೂರು ದೇವಾಲಯದ ಮುಂಭಾಗದಲ್ಲಿನ ಎಲ್ಲಾ ಸರ್ವಿಸ್ ರಸ್ತೆಗಳನ್ನು ಬಂದು ಮಾಡಲಾಗಿತ್ತು.
ದೇವಾಲಯದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು…