ಪೊಲೀಸ್ ಠಾಣೆ ಸಮೀಪದಲ್ಲೇ ಭೀಕರ ಹತ್ಯೆ…ಪುಡಿ ರೌಡಿಗಳ ಅಟ್ಟಹಾಸ…
- TV10 Kannada Exclusive
- December 12, 2024
- No Comment
- 87
ಮಂಡ್ಯ,ಡಿ12,Tv10 ಕನ್ನಡ
ಹಾಡುಹಗಲೇ ಪೊಲೀಸ್ ಠಾಣೆ ಸಮೀಪ ಪುಡಿರೌಡಿಗಳ ಅಟ್ಟಹಾಸಕ್ಕೆ ಓರ್ವನ ಬಲಿಯಾದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆ.ಆರ್.ಎಸ್ ನಲ್ಲಿ ನಡೆದಿದೆ.ಠಾಣೆಯ ಕೂಗಳತೆ ದೂರದಲ್ಲಿ ಬರ್ಭರ ಹತ್ಯೆ ನಡೆದಿದೆ.
ಪೊಲೀಸ್ ಠಾಣೆ ಸಮೀಪ ಇರುವ ಸಂತೆ ಮೈದಾನದ ಬೇಕರಿಯಲ್ಲಿ ಘಟನೆ ನಡೆದಿದೆ.
ಕೆಆರ್‌ನಗರ ತಾಲೂಕಿನ ಬಸವರಾಜಪುರ ಗ್ರಾಮದ ಚೇತನ್ (40) ಕೊಲೆಯಾದ ವ್ಯಕ್ತಿ.
ಸುಮಾರು 10ವರ್ಷಗಳ ಹಿಂದೆ ಬೋರೆಆನಂದೂರು ಗ್ರಾಮದ ಯುವತಿಯೊಂದಿಗೆ ವಿವಾಹವಾಗಿದ್ದ. 7 ರಿಂದ 8ವರ್ಷದ ಗಂಡು ಮಗು ಇದ್ದು, ಈತ ಹಲವು ವರ್ಷಗಳಿಂದ ಕೆಆರ್‌ಎಸ್‌ನಲ್ಲಿ ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ.ಪುಂಡರು ನಡೆಸಿದ ಹಲ್ಲೆಯಿಂದಾಗಿ
ರಕ್ತದ ಮಡುವಿನಲ್ಲಿ ಬಿದ್ದಿದ್ದ ಚೇತನ್ ಗೆ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಾಡುಹಗಲೇ ನಡೆದ ಘಟನೆಯಿಂದ ಜನರು ಬೆಚ್ಚಿಬಿದ್ದಿದ್ದಾರೆ.
ಕೆಆರ್‌ಎಸ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೌಡಿ ಹಾಗೂ ಪುಡಿರೌಡಿಗಳು ಹೆಚ್ಚಾಗಿದ್ದಾರೆ.ಇದನ್ನ ತಡೆಯುವಲ್ಲಿ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರೌಡಿಗಳನ್ನ ಹತೋಟಿಗೆ ತರುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ…