ಬಿಎಂಡಬ್ಲೂ ಕಂಪನಿ ಉದ್ಯೋಗಿ ಎಂದು ನಂಬಿಸಿ ಮದುವೆಯಾದ ಐನಾತಿ ಚಿನ್ನಾಭರಣ ಕದ್ದು ಸಿಕ್ಕಿಬಿದ್ದ…ವಂಚಕನ ವಿರುದ್ದ FIR ದಾಖಲು…
- TV10 Kannada Exclusive
- January 2, 2025
- No Comment
- 104
ಮೈಸೂರು,ಜ1,Tv10 ಕನ್ನಡ
ಬಿಎಂಡಬ್ಲೂ ಕಂಪನಿ ಉದ್ಯೋಗಿ ಎಂದು ನಂಬಿಸಿ ಮದುವೆಯಾದ ಭೂಪ ಅತ್ತೆ ಮನೆಯಲ್ಲಿ ಚಿನ್ನಾಭರಣ ಕದ್ದು ಸಿಕ್ಕಿಬಿದ್ದು ವಂಚನೆ ಪ್ರಕರಣ ಮೈಮೇಲೆ ಎಳೆದುಕೊಂಡ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವಂಚಕನ ವಿರುದ್ದ ನ್ಯಾಯಾಲಯ ಆದೇಶದ ಅನ್ವಯದಂತೆ FIR ದಾಖಲಾಗಿದೆ.ಬೆಳಗಾವಿ ಮೂಲದ ವಿಜಯಕುಮಾರ್ ಲಟ್ಟಿ(39) ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.ಶ್ರೀನಿವಾಸ್ ಎಂಬುವರು ತಮ್ಮ ಮಗಳನ್ನ ನಂಬಿಸಿ ಮದುವೆ ಆಗಿ ವಂಚಿಸಿದ್ದಾನೆಂದು ಪ್ರಕರಣ ದಾಖಲಿಸಿದ್ದಾರೆ.
2021 ರಲ್ಲಿ ಮೆಟ್ರಿಮೋನಿಯಲ್ ಮೂಲಕ ವಿಜಯ್ ಕುಮಾರ್ ಲಟ್ಟಿ ರವರು ಶ್ರೀನಿವಾಸ್ ರವರ ಮಗಳು ಸ್ವಾತಿ ರವರನ್ನ ಸಂಪರ್ಕಿಸಿದ್ದಾನೆ.ಹೈಟೆಕ್ ಪ್ರೊಫೈಲ್ ಹಾಕಿ ಸ್ವಾತಿ ಹಾಗೂ ತಂದೆ ಶ್ರೀನಿವಾಸ್ ರನ್ನ ಇಂಪ್ರೆಸ್ ಮಾಡಿದ್ದಾನೆ.ಪ್ಯಾರಿಸ್ ನಲ್ಲಿ ಬಿಎಂಡಬ್ಲೂ ಕಂಪನಿ ಉದ್ಯೋಗಿ ಎಂಬಂತೆ ಸರ್ಟಿಫಿಕೇಟ್ ಗಳನ್ನ ತೋರಿಸಿ ನಂಬಿಸಿದ್ದಾನೆ.ತಾನು ಪ್ಯಾರಿಸ್ ಗೆ ಹೋಗಬೇಕು ಮದುವೆ ಬೇಗ ಮಾಡಿಕೊಡುವಂತೆ ದುಂಬಾಲು ಬಿದ್ದಿದ್ದಾನೆ.ವಂಚಕನ ಮಾತನ್ನ ನಂಬಿದ ಶ್ರೀನಿವಾಸ್ ಮಗಳನ್ನ ಕೊಟ್ಟು 15-2-21 ರಂದು ಮದುವೆ ಮಾಡಿದ್ದಾರೆ.ಈ ವೇಳೆ ಕರೋನಾ ಭೀತಿ ಆವರಿಸಿದ್ದು ಪ್ಯಾರೀಸ್ ಗೆ ಹೋಗಲು ವಿಳಂಬವಾದಂತೆ ನಂಬಿಸಿ ಅತ್ತೆ ಮನೆಯಲ್ಲೇ ಠಿಕಾಣಿ ಹೂಡಿದ್ದಾನೆ.ಸುಮಾರು 8-9 ತಿಂಗಳು ಅವಧಿಯಲ್ಲಿ ಇನ್ನಿಲ್ಲದ ನಾಟಕವಾಡಿದ್ದಾನೆ.ಬೆಂಗಳೂರಿನ ರಾಜಾಜಿನಗರಕ್ಕೆ ಪತ್ನಿಯನ್ನ ಕರದೊಯ್ದು ಐಶಾರಾಮಿ ಮನೆಯನ್ನ ತೋರಿಸಿದ್ದಾನೆ.ಬಿಎಂಡಬ್ಲೂ ಕಾರಿನಲ್ಲಿ ಓಡಾಡಿದ್ದಾನೆ.ಕಂಪನಿಯಿಂದ ತನಗೆ ಬಂದಿರುವಂತೆ ಲೆಟರ್ ಗಳನ್ನ ತೋರಿಸಿದ್ದಾನೆ.ಇವೆಲ್ಲಾ ಬೆಳವಣಿಗೆ ಮಧ್ಯೆ ಮನೆಯಲ್ಲಿದ್ದ 20 ಲಕ್ಷ ಮೌಲ್ಯದ ಚಿನ್ನಾಭರಣ ಲಪಟಾಯಸಿದ್ದಲ್ಲದೆ ಶ್ರೀನಿವಾಸ್ ರವರ ಪತ್ನಿ ಸರಸ್ವತಿ ಹೆಸರಲ್ಲಿ ಮುತ್ತೂಟ್ ಫೈನಾನ್ಸ್ ನಲ್ಲಿ 20 ಲಕ್ಷ ಸಾಲ ಪಡೆದಿದ್ದಾನೆ.ಯಾವಾಗ ಮನೆಯಲ್ಲಿದ್ದ ಚಿನ್ನಾಭರಣ ಕಾಣೆಯಾಯ್ತೋ ಆಗ ಶ್ರೀನಿವಾಸ್ ರವರಿಗೆ ಅನುಮಾನ ಬಂದು ಟ್ರಾಪ್ ಮಾಡಿದಾಗ ವಿಜಯ್ ಕುಮಾರ್ ಲಟ್ಟಿ ತಾನು ಕದ್ದಿರುವುದಾಗಿ ಒಪ್ಪಕೊಂಡಿದ್ದಾನೆ.ತನ್ನ ತಂದೆ ಹಾಗೂ ಲಾಯರ್ ಮಧ್ಯಸ್ಥಿಕೆಯಲ್ಲಿ ಕದ್ದ ಚಿನ್ನಾಭರಣದ ಹಣ ಹಾಗೂ ಲೋನ್ ನಲ್ಲಿ ಪಡೆದ 20 ಲಕ್ಷ ಒಟ್ಟು 40 ಲಕ್ಷ ಹಿಂದಿರುಗಿಸಿದ್ದಾರೆ.ನಂತರ ತನಗೆ 40 ಲಕ್ಷ ವರದಕ್ಷಿಣೆ ಬೇಕು ಎಂದು ಪಟ್ಟುಹಿಡಿದಿದ್ದಾನೆ.ಈತನ ಕಿರುಕುಳಕ್ಕೆ ಬೇಸತ್ತ ಶ್ರೀನಿವಾಸ್ ಮಗಳ ಭವಿಷ್ಯದ ದೃಷ್ಟಿಯಿಂದ ವಿಚ್ಛೇದನ ಕೊಡಿಸಿದ್ದಾರೆ.ಮಗಳ ಬಾಳಿಗೆ ಬಂದು ಮೋಸ ಮಾಡುವ ಉದ್ದೇಶದದ ಮದುವೆ ಆಗಿ ಸಾಕಷ್ಟಯ ಯಾತನೆ ನೀಡಿದ ವಿಜಯ್ ಕುಮಾರ್ ಲಟ್ಟಿ ಹಾಗೂ ಈತನ ತಂದೆ ಸದಾಶಿವ ವಿರೂಪಾಕ್ಷ ಲಟ್ಟಿ ವಿರುದ್ದ ನ್ಯಾಯಾಲಯದ ಮೊರೆ ಹೋಗಿ ಆದೇಶ ತಂದು ವಿಜಯನಗರ ಪಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…