ನಿಮ್ಮ ಜಾತಿ ಇರೋದು ಒಂದೇ ಕುಟುಂಬ…ಗ್ರಾಮ ಬಿಟ್ಟು ತೊಲಗಿ…ಕುಟುಂಬವೊಂದಕ್ಕೆ ಟಾರ್ಚರ್…ಜಾಗದ ವಿಚಾರದಲ್ಲಿ ಬೆದರಿಕೆ…ಮೂವರ ವಿರುದ್ದ FIR ದಾಖಲು…

ಮೈಸೂರು,ಜ3,Tv10 ಕನ್ನಡ

ಜಾಗವೊಂದರ ವಿವಾದ ವಿಚಾರ ನ್ಯಾಯಾಲಯದಲ್ಲಿ ದಾವೆ ಇದ್ದರೂ ಜಾತಿ ಹಸರು ಪ್ರಸ್ತಾಪಿಸಿ ಗ್ರಾಮ ಖಾಲಿ ಮಾಡುವಂತೆ ಕುಟುಂಬವೊಂದಕ್ಕೆ ಬೆದರಿಕೆ ಹಾಕಿರುವ ಘಟನೆ ಸಿಎಂ ತವರು ಜಿಲ್ಲೆ ವರುಣಾ ಹೋಬಳಿಯ ಆಶ್ರಮ ಹಂಚೆ ಗುಡುಮಾದನಹಳ್ಳಿ ಗ್ರಾಮದಲ್ಲಿ ನಡೆದಿದೆ.ಮಂಗಳಗೌರಿ(49) ಎಂಬುವರ ಕುಟುಂಬಕ್ಕೆ ಇಂತಹ ಬೆದರಿಕೆ ಬಂದಿದೆ.ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಗಮ್ಮ,ಕೋಮಲ ಹಾಗೂ ರಾಘವೇಂದ್ರ ಎಂಬುವರ ವಿರುದ್ದ FIR ದಾಖಲಾಗಿದೆ.

ಜಾಗದ ವಿಚಾರದಲ್ಲಿ ಇಬ್ಬರ ನಡುವೆ ವ್ಯಾಜ್ಯವಿದ್ದು ನ್ಯಾಯಾಲಯದಲ್ಲಿ OS -120/2023 ಪ್ರಕರಣ ದಾಖಲಾಗಿ ಇನ್ನೂ ಇತ್ಯರ್ಥವಾಗಿರುವುದಿಲ್ಲ.ಇದೇ ವಿಚಾರದಲ್ಲಿ ನಾಗಮ್ಮ ಇವರ ಮಗಳು ಕೋಮಲ ಹಾಗೂ ಮೊಮ್ಮಗ ರಾಘವೇಂದ್ರ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ.ಪತಿ ಇಲ್ಲದಿರುವ ಸಮಯದಲ್ಲಿ ಬಂದು ಹಲ್ಲೆ ಮಾಡುವುದು,ಕೊಲೆ ಬೆದರಿಕೆ ಹಾಕುವುದು ನಡೆಯುತ್ತಿದೆ.31-12-2024 ರ ಸಂಜೆ ಏಕಾ ಏಕಿ ಮೂವರು ಆರೋಪಿಗಳು ಮನೆ ಬಳಿಗೆ ಬಂದು ಕ್ಯಾತೆ ತೆಗೆದಿದ್ದಾರೆ.ನಿಮ್ಮ ಜಾತಿಯವರು ಈ ಗ್ರಾಮದಲ್ಲಿ ಒಂದೇ ಕುಟುಂಬ ನೀವು ಕೀಳು ಜಾತಿ ಎಂದು ನೆಪವೊಡ್ಡಿ ಮಂಗಳಗೌರಿ ರವರ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನ ಹರಿದುಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ.ಗ್ರಾಮದಿಂದ ತೊಲಗುವಂತೆ ಧಂಕಿ ಹಾಕಿದ್ದಾರೆ.ಎಲ್ಲಾ ಬೆಳವಣಿಗೆಗಳನ್ನ ಮಂಗಳಗೌರಿ ರವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.ಗ್ರಾಮದಲ್ಲಿ ಒಂದೇ ಕುಟುಂಬ ಇರುವುದರಿಂದ ಯಾವುದೇ ಬೆಂಬಲವಿಲ್ಲ,ಭಯದಲ್ಲಿ ವಾಸವಿದ್ದೇವೆ ಆದ್ದರಿಂದ ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡಿ ಎಂದು ಮಂಗಳಗೌರಿ ರವರು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಜಾತ್ಯಾತೀತ ಹೆಸರಲ್ಲಿ ಅಧಿಕಾರಕ್ಕೆ ಬಂದು ಸಿಎಂ ಗದ್ದುಗೆ ಹಿಡಿದ ಸಿದ್ದರಾಮಯ್ಯ ರವರ ಸ್ವಕ್ಷೇತ್ರದಲ್ಲೇ ಜಾತಿ ವಿಚಾರದಲ್ಲಿ ಒಂದು ಕುಟುಂಬಕ್ಕೆ ತೊಂದರೆ ಕೊಡುತ್ತಿರುವುದು ವಿಪರ್ಯಾಸ.ಕೂಡಲೇ ಪೊಲೀಸರು ಈ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕಿದೆ…

Spread the love

Related post

ಸಿಡಿಯಮ್ಮನ ಜಾತ್ರಾ ಮಹೋತ್ಸವ ಸಂಭ್ರಮ…ಸಂಸದ ಯದುವೀರ್ ಭಾಗಿ…ವಿಶೇಷ ಪೂಜೆ…

ಸಿಡಿಯಮ್ಮನ ಜಾತ್ರಾ ಮಹೋತ್ಸವ ಸಂಭ್ರಮ…ಸಂಸದ ಯದುವೀರ್ ಭಾಗಿ…ವಿಶೇಷ ಪೂಜೆ…

ಹುಣಸೂರು,ಮೇ2,Tv10 ಕನ್ನಡ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಸಿಡಿಯಮ್ಮನ ಜಾತ್ರಾ ಮಹೋತ್ಸವ ಅದ್ದೂರಿಯಿಂದ ನೆರವೇರಿತು.ಹಲವಾರು ಐತಿಹ್ಯವುಳ್ಳ, ರಾಜ್ಯಾದ್ಯಂತ ಭಕ್ತರನ್ನು ಹೊಂದಿರುವ, ಪವಾಡದ ಜಾತ್ರೆಯೆಂದೇ ಪ್ರತಿಬಿಂಬಿತವಾಗಿರುವ ಗ್ರಾಮದೇವತೆ ಜಾತ್ರಾ ಮಹೋತ್ಸವದಲ್ಲಿ…
ಮರದ ಬಳಿ ಮಲಗಿದ್ದ ರೈತನ ಕಾಲುಗಳ ಮೇಲೆ ಹರಿದ ಟಿಪ್ಪರ್…ಎರಡು ಕಾಲುಗಳು ಮುರಿತ…

ಮರದ ಬಳಿ ಮಲಗಿದ್ದ ರೈತನ ಕಾಲುಗಳ ಮೇಲೆ ಹರಿದ ಟಿಪ್ಪರ್…ಎರಡು ಕಾಲುಗಳು…

ಮಂಡ್ಯ,ಏ30,Tv10 ಕನ್ನಡ ಅರಳಿ ಮರದ ಕೆಳಗೆ ವಿರಮಿಸುತ್ತಿದ್ದ ರೈತನ ಕಾಲುಗಳ ಮೇಲೆ ಟಿಪ್ಪರ್ ಹರಿದ ಮಂಡ್ಯ ಜಿಲ್ಲೆ ಕೆ.ಆರ್‌‌.ಪೇಟೆ ತಾಲೂಕಿನ ಆಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಪುಟ್ಟೇಗೌಡ ಎಂಬುವವರ ಮೇಲೆ ಹರಿದ…
ಮಳೆ ಎಫೆಕ್ಟ್…ಮನೆ ಮೇಲೆ ಉರುಳಿದ ಮರ,ವಿದ್ಯುತ್ ಕಂಬ…ತಪ್ಪಿದ ಅನಾಹುತ…ಸ್ಥಳಕ್ಕೆ ಬಾರದ ಅಧಿಕಾರಿಗಳು…

ಮಳೆ ಎಫೆಕ್ಟ್…ಮನೆ ಮೇಲೆ ಉರುಳಿದ ಮರ,ವಿದ್ಯುತ್ ಕಂಬ…ತಪ್ಪಿದ ಅನಾಹುತ…ಸ್ಥಳಕ್ಕೆ ಬಾರದ ಅಧಿಕಾರಿಗಳು…

ಮೈಸೂರು,ಏ30,Tv10 ಕನ್ನಡ ನಿನ್ನೆ ಸುರಿದ ಭಾರಿ ಮಳೆಗೆ ಮನೆಯೊಂದರ ಮೇಲೆ ವಿದ್ಯುತ್ ಕಂಬ ಹಾಗೂ ಮರ ಉರುಳಿಬಿದ್ದಿದೆ.ಮೈಸೂರಿನ ಬೃಂದಾವನ ಬಡಾವಣೆ 7 ನೇ ಕ್ರಾಸ್ ನ ಪ್ರಿಯದರ್ಶಿನಿ ಆಸ್ಪತ್ರೆ…

Leave a Reply

Your email address will not be published. Required fields are marked *