
5 ಮೈಕ್ರೋ ಫೈನಾನ್ಸ್ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲು…
- TV10 Kannada Exclusive
- January 27, 2025
- No Comment
- 217




ನಂಜನಗೂಡು,ಜ27,Tv10 ಕನ್ನಡ
ಕಿರುಕುಳ ನೀಡುತ್ತಿದ್ದ 5 ಮೈಕ್ರೋ ಫೈನಾನ್ಸ್ ಮೇಲೆ ಹುಲ್ಲಹಳ್ಳಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ಮಲ್ಕುಂಡಿ ಗ್ರಾಮದ ರೈತ ಕೃಷ್ಣಮೂರ್ತಿ ಪತ್ನಿ ಲತಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ಲಗಾಮು ಇಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದ ಮೈಕ್ರೋ ಫೈನಾನ್ಸ್ ಗಳ ಮೇಲೆ ನಿಯಂತ್ರಣ ಹೇರಲು ಪೊಲೀಸರು ಮುಂದಾಗಿದ್ದಾರೆ. ಇನ್ನಷ್ಟು ಸಂಘಗಳ ಮೇಲೆ ಎಫ್ ಐ ಆರ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸಾಲಗಾರರ ಜೊತೆ ಬಾಲ ಬಿಚ್ಚಿದರೆ ಜೈಲು ಕಂಬಿ ಗ್ಯಾರಂಟಿ ಎನ್ನುತ್ತಿದ್ದಾರೆ ನಂಜನಗೂಡಿನ ಪೊಲೀಸರು…