
ಉಘೇ ಮಾದೇಗೌಡ್ರು ಪ್ರಚಾರ ವಾಹನಕ್ಕೆ ಚಾಲನೆ…ಮೈಸೂರು ಮಿತ್ರ ಪತ್ರಿಕೆ ಸಂಸ್ಥಾಪಕ ಕೆ.ಬಿ.ಗಣಪತಿ ರಿಂದ ಹಸಿರು ನಿಶಾನೆ…
- TV10 Kannada Exclusive
- April 8, 2025
- No Comment
- 45

ಮೈಸೂರು,ಏ8,Tv10 ಕನ್ನಡ



CITB ಮಾಜಿ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡರವರಿಗೆ ಹಮ್ಮಿಕೊಳ್ಳಲಾದ ಅಭಿನಂದನಾ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಮೈಸೂರು ಮಿತ್ರ ದಿನಪತ್ರಿಕೆ ಸಂಸ್ಥಾಪಕರಾದ ಕೆ.ಬಿ.ಗಣಪತಿ ರವರು ಚಾಲನೆ ನೀಡಿದರು.ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಶ್ರೀ ಭಾಷ್ಯಂ ಸ್ವಾಮೀಜಿ ರವರ ಸಾನಿಧ್ಯದಲ್ಲಿ ಹಸಿರು ನಿಶಾನೆ ತೋರಿದರು.ಡಿ.ಮಾದೇಗೌಡರ ಅಭಿನಂದನಾ ಸಮಿತಿಯು ಕಲಾಮಂದಿರದಲ್ಲಿ ಏಪ್ರಿಲ್ 13 ರಂದು ಕಾರ್ಯಕ್ರಮ ಹಮ್ಮಿಕೊಂಡಿದೆ.ಮೈಸೂರು ನಗರದ ಅಭಿವೃದ್ದಿಗಾಗಿ ಶ್ರಮಿಸಿದ ಮಾದೇಗೌಡರ ಕಾರ್ಯ ಪ್ರಶಂಸಿಸಿ ಉಘೇ ಮಾದೇಗೌಡ್ರು ಎಂಬ ಘೋಷ ವಾಕ್ಯದಡಿ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಅರ್ಹ ಫಲಾನುಭವಿಗಳಿಗೆ ಮನೆಗಳನ್ನ ಮಂಜೂರು ಮಾಡಿ ಸಾಕಷ್ಟು ಜನಮನ್ನಣೆ ಗಳಿಸಿದ ಹಿನ್ನಲೆ CITB ವತಿಯಿಂದ ನಿರ್ಮಾಣವಾದ ಆಶ್ರಯ ಮನೆಗಳ ಮಾದರಿಯಂತೆ ಪ್ರಚಾರ ವಾಹನವನ್ನ ವಿಶೇಷವಾಗಿ ಸಿದ್ದಪಡಿಸಲಾಗಿದೆ.
ನಂತರ ಮಾತನಾಡಿದ ಕೆಬಿಜ ರವರು ಡಿ.ಮಾದೇಗೌಡ್ರು ತಮ್ಮ ಆದರ್ಶ ಜೀವನದ ಮೂಲಕ ಮೈಸೂರಿನ ಆದರ್ಶ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರು ರಾಜಕಾರಣಿಗಳು ಮೌಲ್ಯ ಆಧಾರಿತ ರಾಜಕೀಯ ಮಾಡಬೇಕು ಎಂದು ಹೇಳಿದಂತೆ ಮಾದೇಗೌಡರು ಜೀವನ ಮಾಡುತ್ತಿದ್ದಾರೆ ಎಂದರು.
ಸಿಐಟಿಬಿಯ ಸದಸ್ಯರಾಗಿದ್ದ ಕೆಂಪೇಗೌಡರು ವಿಶ್ವಮಾನವ ಜೋಡಿ ರಸ್ತೆ ನಿರ್ಮಾಣ ಮಾಡಿದರೆ, ಬಿ.ಎನ್.ಕೆಂಗೇಗೌಡರು ದೇವರಾಜ ಅರಸು ರಸ್ತೆ, ಸರಸ್ವತಿಪುರಂ ನಿರ್ಮಾಣ ಮಾಡಿದ್ದಾರೆ. ಆದರೆ ಮಾದೇಗೌಡರು, ವಿಜಯನಗರ, ರಾಮಕೃಷ್ಣನಗರ, ವಿವೇಕಾನಂದ ನಗರ, ಹೆಬ್ಬಾಳ್ ಬಡಾವಣೆಯನ್ನು ನಿರ್ಮಾಣ ಮಾಡುವ ಮೂಲಕ ಎಲ್ಲರಿಗಿಂತಲೂ ಹೆಚ್ಚು ಕೆಲಸ ಮಾಡಿದ್ದಾರೆ. ಹಾಗೇ ರಾಮಕೃಷ್ಣನಗರದ ಪರಮಹಂಸ ವೃತ್ತ ನಿರ್ಮಾಣವಾಗಲು ಅವರೇ ಕಾರಣ ಎಂದು ತಿಳಿಸಿದರು.
ಇದೇ ವೇಳೆ ಮಾದೇಗೌಡರು ಮಾತನಾಡಿ, ಭರತ ಖಂಡದಲ್ಲಿ ಕಿಂಚಿತ್ತು ಉಪಕಾರ ಮಾಡಿದರೂ ಸ್ಮರಿಸುತ್ತಾರೆ. ಅದರಂತೆ ಜನರು ನಾನು ಮಾಡಿದ ಸಣ್ಣ ಸೇವೆಯನ್ನು ಇಂದಿಗೂ ಸ್ಮರಿಸುತ್ತಾರೆ. ಅದನ್ನು ಕಂಡಾಗ ಬಹಳ ಸಂತೋಷವಾಗುತ್ತದೆ ಎಂದರು. ಗಾಂಧೀಜಿ ಅವರು ಹೇಳಿದಂತೆ ವಸತಿ, ಊಟ, ಶಿಕ್ಷಣ ಮುಖ್ಯವಾಗಿ ದೇಶದ ಪ್ರತಿಯೊಬ್ಬ ನಾಗರೀಕರಿಗೂ ಒದಗಿಸಬೇಕು. ಅದರೆ ಇಂದು ವಸತಿ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ. ಅಂದು ರಾಮಕೃಷ್ಣ ಹೆಗ್ಗಡೆ ಅವರು ನೀಡಿದ ಪ್ರೇರಣೆಯಿಂದ ನಾನು ಅಷ್ಟು ಕೆಲಸ ಮಾಡಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ನಂತರ ಯೋಗನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಶ್ರೀನಿವಾಸ್ ಮಾತನಾಡಿ, ಇಂದು ಪ್ರಚಾರ ಮಾಡಲು ಸಾಕಷ್ಟು ಆಯಾಮಗಳಿ. ಆದರೂ ವಿಶೇಷ ವಾಹನ ಮೂಲಕ ಪ್ರಚಾರ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ. ಈ ವಾಹನ ಮೈಸೂರಿನ ಪ್ರತಿಯೊಂದು ಬಡಾವಣೆಗೆ ತಲುಪಬೇಕು. ಶಿಕ್ಷಕರು ವಿದ್ಯಾರ್ಥಿಗಳ ನಡುವೇ ಹೇಗೆ ಬಾಂದವ್ಯವಿದೆ ಹಾಗೇ ಆಶ್ರಯ ಮನೆಗಳ ಫಲಾನುಭಾವಿಗಳು ಕಾರ್ಯಕ್ರಮಕ್ಕೆ ಬಂದು ಕೃತಜ್ಞತೆ ಸಲ್ಲಿಸಿ ಎಂದರು
ಕಾರ್ಯಕ್ರಮದಲ್ಲಿ ಅಭಿನಂದನಾ ಸಮಿತಿ ಅಧ್ಯಕ್ಷ ಲಯನ್ ಎಂ.ವಿ.ದೇವಿಪ್ರಸಾದ್, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ವಿಜಯನಗರ ಮಂಜು, ಕುಮಾರ್ ಗೌಡ, ಕಾಂಗ್ರೆಸ್ ಮುಖಂಡ ಮಂಚೇಗೌಡನ ಕೊಪ್ಪಲು ರವಿ ಮತ್ತಿತರರು ಉಪಸ್ಥಿತರಿದ್ದರು…