ವೃದ್ದ ಮಹಿಳೆ ಕೈಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿದ ಖದೀಮರು…ಅಪರಿಚಿತ ಯುವಕ,ಯುವತಿಯಿಂದ ಕೃತ್ಯ…ಹಾಡುಹಗಲೇ ಹಲ್ಲೆ ನಡೆಸಿ ದರೋಡೆ…

ವೃದ್ದ ಮಹಿಳೆ ಕೈಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿದ ಖದೀಮರು…ಅಪರಿಚಿತ ಯುವಕ,ಯುವತಿಯಿಂದ ಕೃತ್ಯ…ಹಾಡುಹಗಲೇ ಹಲ್ಲೆ ನಡೆಸಿ ದರೋಡೆ…

ಸಾಲಿಗ್ರಾಮ,ಏ16,Tv10 ಕನ್ನಡ

ಹಾಡುಹಗಲೇ ಅಪರಿಚಿತ ಯುವಕ ಹಾಗೂ ಯುವತಿ ಮನೆಗೆ ಪ್ರವೇಶಿಸಿ ಲಗ್ನಪತ್ರಿಕೆ ಕೊಡುವ ನೆಪದಲ್ಲಿ ವೃದ್ದೆಯ ಕೈಕಾಲು ಕಟ್ಟಿಹಾಕಿ ಹಲ್ಲೆ ನಡೆಸಿ 4 ಲಕ್ಷ ಮೌಲ್ಯದ 50 ಚಿನ್ನದ ಸರ ದರೋಡೆ ಮಾಡಿ ಪರಾರಿಯಾದ ಘಟನೆ ಕೆ.ಆರ್.ನಗರ ತಾಲೂಕು ಸಾಲಿಗ್ರಾಮದ ಹರದನಹಳ್ಳಿ ಗ್ರಾಮದಲ್ಲಿ ನಡೆದಿದೆ.ಶೈಲಾ(76) ಎಂಬ ವೃದ್ದ ಮಹಿಳೆಯನ್ನ ಕಟ್ಟಿಹಾಕಿ ಹಲ್ಲೆ ನಡೆಸಿ ಕೃತ್ಯವೆಸಗಲಾಗಿದೆ.ಅಪರಿಚಿತ ಯುವಕ ಹಾಗೂ ಯುವತಿ ವಿರುದ್ದ ವೃದ್ದ ಮಹಿಳೆಯ ಸಂಭಂಧಿಕರಾದ ಅನುರಾಗ್ ಅರಸ್ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಿನ್ನೆ ಮಧ್ಯಾಹ್ನ ಮನೆಯಲ್ಲಿ ಶೈಲಾ ರವರು ಒಬ್ಬಂಟಿಯಾಗಿದ್ದರು.ಈ ಸಮಯ ಬಳಸಿಕೊಂಡ ಖದೀಮ ಜೋಡಿ ಮದುವೆ ಲಗ್ನಪತ್ರಿಕೆ ಕೊಡುವ ನೆಪದಲ್ಲಿ ಪ್ರವೇಶಿಸಿದೆ.ನೀರು ಬೇಕು ಎಂದು ಖದೀಮರು ಕೇಳಿದ್ದಾರೆ.ಶೈಲಾ ರವರು ಟೀ ಮಾಡಲು ಒಳಗೆ ತೆರಳಿದ್ದಾರೆ.ಈ ವೇಳೆ ಖದೀಮ ಜೋಡಿ ಶೈಲಾ ರವರ ಮೇಲೆ ಹಲ್ಲೆ ನಡೆಸಿ ಕೈಕಾಲು ಕಟ್ಟಿಹಾಕಿ ಚಿನ್ನದ ಸರ ಕಿತ್ತಿದ್ದಾರೆ.ಅಲ್ಲದೆ ಬಕವಂತವಾಗಿ ಬೀರು ಬೀಗವನ್ನ ಪಡೆದು ಮತ್ತಷ್ಟು ಚಿನ್ನಾಭರಣಕ್ಕಾಗಿ ಹುಡುಕಾಡಿ ಪರಾರಿಯಾಗಿದ್ದಾರೆ.ಅನುರಾಗ್ ಅರಸ್ ರವರು ಮನೆಗೆ ಬಂದಾಗ ಗಾಯಗೊಂಡ ಶೈಲಾರಿಗೆ ಶುಶ್ರೂಷೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಈ ಸಂಭಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಖದೀಮ ಜೋಡಿ ವಿರುದ್ದ ದರೋಡೆ ಪ್ರಕರಣ ದಾಖಲಾಗಿದೆ.ಘಟನೆ ನಡೆದ ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್,ಅಡಿಷನಲ್ ಎಸ್ಪಿ ಮಲ್ಲಿಕ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸ್ಥಳಕ್ಕೆ ಬೆರಳು ಮುದ್ರಾ ಘಟಕ ಹಾಗೂ ಶ್ವಾನದಳ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದೆ…

Spread the love

Related post

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಆಸ್ತಿ ಮುಟ್ಟುಗೋಲು…ಬಣ್ಣ ಬಯಲು ಮಾಡಿದ ಇಡಿ…

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ…

ಮುಡಾ ಹಗರಣ ಪ್ರಕರಣ…ಸಿಎಂ ಸಿದ್ದರಾಮಯ್ಯ ಆಪ್ತ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಆಸ್ತಿ ಮುಟ್ಟುಗೋಲು…ಬಣ್ಣ ಬಯಲು ಮಾಡಿದ ಇಡಿ… ಬೆಂಗಳೂರು,ಜ22,Tv10 ಕನ್ನಡ ಮುಡಾ ಮಾಜಿ ಆಯುಕ್ತ GT ದಿನೇಶ್…
ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ…

ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ…

ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ… ಮೈಸೂರು,ಜ22,Tv10 ಕನ್ನಡ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯಾಗಿ ಎರಡು ವರ್ಷಗಳು ಪೂರೈಸಿದ ಐತಿಹಾಸಿಕ…
ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ. ಹನೂರು Tv10 ಕನ್ನಡ21/01/2026 ಹನೂರು :ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ…

Leave a Reply

Your email address will not be published. Required fields are marked *