ಮೈಸೂರು ಸಿನಿಮಾ ಸೊಸೈಟಿಯ ಅಂತರಾಷ್ಟ್ರೀಯ ಚಿತ್ರೋತ್ಸವದ ಪರಿದೃಶ್ಯ ನಾಲ್ಕನೇ ಆವೃತ್ತಿಯ ಬ್ರೋಷರ್ ಬಿಡುಗಡೆ…ಕಿರುಚಿತ್ರ,ಸಾಕ್ಷ್ಯಚಿತ್ರಗಳಿಗೆ ಆಹ್ವಾನ…

ಮೈಸೂರು ಸಿನಿಮಾ ಸೊಸೈಟಿಯ ಅಂತರಾಷ್ಟ್ರೀಯ ಚಿತ್ರೋತ್ಸವದ ಪರಿದೃಶ್ಯ ನಾಲ್ಕನೇ ಆವೃತ್ತಿಯ ಬ್ರೋಷರ್ ಬಿಡುಗಡೆ…ಕಿರುಚಿತ್ರ,ಸಾಕ್ಷ್ಯಚಿತ್ರಗಳಿಗೆ ಆಹ್ವಾನ…

ಮೈಸೂರು,ಏ28,Tv10 ಕನ್ನಡ

ಮೈಸೂರು ಸಿನಿಮಾ ಸೊಸೈಟಿಯ ಪ್ರಮುಖ ಚಿತ್ರೋತ್ಸವವಾದ ಪರಿದೃಶ್ಯ ನಾಲ್ಕನೇ ಆವೃತ್ತಿಯ ಬ್ರೋಷರ್ ಬಿಡುಗಡೆ ಮಾಡಲಾಯಿತು. 6/02/2026 ರಿಂದ 8/02/2026 ವರೆಗೆ ನಡೆಯುವ ಚಿತ್ರೋತ್ಸವವನ್ನ ವಿದ್ಯಾರ್ಥಿ ಮತ್ತು ವೃತ್ತಿಪರ ವಿಭಾಗಗಳಿಗೆ ಆಯೋಜಿಸಲಾಗಿದೆ.
ಪರಿದೃಶ್ಯ ನಾಲ್ಕನೇ ಆವೃತ್ತಿಯ ಚಿತ್ರೋತ್ಸವಕ್ಕೆ ಕಿರುಚಿತ್ರ ಮತ್ತು ಸಾಕ್ಷ ಚಿತ್ರಗಳನ್ನು ಆಹ್ವಾನಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸೊಸೈಟಿ ಅಧ್ಯಕ್ಷ ಚೇತನ್ ಎಂ ತಿಳಿಸಿದರು‌.ಈ ಸ್ಪರ್ಧೆಯಲ್ಲಿ ಭಾಗವಹಿಸಲು ಚಿತ್ರಗಳು 1/01/2024ರ ನಂತರ ಚಿತ್ರೀಕರಣಗೊಂಡಿರಬೇಕು.ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಕಿರುಚಿತ್ರ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಛಾಯಾಚಿತ್ರ, ಅತ್ಯುತ್ತಮ ಚಿತ್ರಕಥೆ ಅತ್ಯುತ್ತಮ ಧ್ವನಿ ಸಂಯೋಜನೆ, ಹಾಗೂ ಇನ್ನೂ ಅನೇಕ ಪ್ರಶಸ್ತಿಗಳಿರುತ್ತದೆ ಎಂದು ವಿವರಿಸಿದರು.
ಚಿತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2025. ಕಿರುಚಿತ್ರಗಳ ಅವಧಿ 1- 40 ನಿಮಿಷಗಳು ಮತ್ತು ಸಾಕ್ಷ್ಯಚಿತ್ರಗಳ ಅವಧಿಗಳು 120 ನಿಮಿಷಗಳವರೆಗೆ ಇರತಕ್ಕದ್ದು.ಚಿತ್ರಗಳನ್ನು ಅಪ್ಲೋಡ್ ಮಾಡಲು ಈ ವೆಬ್ಸೈಟ್ ಬಳಸಬಹುದು. https://filmfreeway.com/paridrishya
ಹೆಚ್ಚಿನ ವಿವರಗಳಿಗೆ
www.mysurucinemasociety.com ಮತ್ತು ಮೊಬೈಲ್ -9980596824/9880435175 ನಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ
ಕಾರ್ಯದರ್ಶಿ ಪದ್ಮಾವತಿ ಎಸ್ ಭಟ್,ಸಂಯೋಜಕ ಚೇತನ್ ಜಿ ಆರ್.ಜೋಗಿಮಂಜು ಮತ್ತಿತರರು ಹಾಜರಿದ್ದರು..

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *