
ಬಲಮುರಿ ಎಡಮುರಿ ಫಾಲ್ಸ್ ಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಿಂಡಿ ಭೇಟಿ…ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ…
- TV10 Kannada Exclusive
- May 20, 2025
- No Comment
- 325

ಕೆ.ಆರ್.ಎಸ್,ಮೇ20,Tv10 ಕನ್ನಡ


ಬಲಮುರಿ ಹಾಗೂ ಎಡಮುರಿ ಫಾಲ್ಸ್ ಗಳಿಗೆ ಮಂಡ್ಯ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ರವರು ಭೇಟಿ ನೀಡಿ ಸುರಕ್ಷತಾ ಕ್ರಮದ ಬಗ್ಗೆ ಕೆಲವು ಸೂಚನೆಗಳನ್ನ ನೀಡಿದರು.ಶಾಲಾ ಕಾಲೇಜುಗಳಿಗೆ ರಜೆ ಹಿನ್ನಲೆ ಹಾಗೂ ಸರ್ಕಾರಿ ರಜೆಗಳ ಹಿನ್ನಲೆ ಎರಡೂ ಪಾಲ್ಸ್ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ನದಿಯಲ್ಲಿ ಈಜಲು ಇಳಿದು ಮೃತಪಡುತ್ತಿರುವ ಪ್ರಕರಣಗಳು ಆಗಾಗ ನಡೆಯುತ್ತಿವರ.ಈ ಹಿನ್ನಲೆ ತೆಗೆದುಕೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮ ಗಳ ಬಗ್ಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ತಾಲೂಕಿನ ಎಡಮುರಿ ಹಾಗೂ ಬಲಮುರಿ ಫಾಲ್ಸ್ ಗಳಿಗೆ ಬೇಟಿ ನೀಡಿ ನೀರಿಗಿಳಿ ಆಟವಾಡುತ್ತಾರೆ ಇದರಲ್ಲಿ ಹಲವರು ನೀರಿನ ಸುಳಿ ಗೊತ್ತಿಲ್ಲದೆ ಮುಳುಗಿ ಸತ್ತರೆ ಇನ್ನೂ ಹಲವಾರು ಜನ ಕುಡಿದು ಪಾರ್ಟಿ ಮಾಡಿ ಮೋಜು ಮಸ್ತಿ ಮಾಡಿ ನಂತರ ನೀರಿಗಿಳಿದು ಸಾವನಪ್ಪುತ್ತಾರೆ.ಈಗ ಸಾವನಪ್ಪುವ ಜನರಲ್ಲಿ ಎಲ್ಲರೂ ಕೂಡ ಯುವಕರೇ ಆಗಿರುವುದು ದುರಂತವೇ ಸರಿ. ಹಾಗಾಗಿ ಪೊಲೀಸ್ ಇಲಾಖೆ ಇನ್ನಾದರು ಎಚ್ಚೆತ್ತು ಪ್ರವಾಸಿಗರನ್ನು ನೀರಿಗಿಳಿಯುವುದನ್ನು ನಿಷೇದಿಸ ಬೇಕಿದೆ ಎಂಬುದು ಸ್ಥಳೀಯರು ಒತ್ತಾಯಿಸಿದ್ದಾರೆ…