
ನನ್ನ ಲವರ್ ತಂಟೆಗೆ ಬಂದ್ರೆ ಹುಷಾರ್…ಪ್ರಿಯತಮಳ ಜೊತೆ ಚಾಟ್ ಮಾಡಿದ ಯುವಕನಿಗೆ ಪ್ರಿಯತಮನಿಂದ ಹಲ್ಲೆ…ಇಬ್ಬರ ವಿರುದ್ದ FIR…
- Crime
- May 23, 2025
- No Comment
- 93
ಮೈಸೂರು,ಮೇ22,Tv10 ಕನ್ನಡ
ಪ್ರಿಯತಮಳ ಜೊತೆ ಮೊಬೈಲ್ ನಲ್ಲಿ ಮಾತನಾಡಿದ ಯುವಕನ ಮೇಲೆ ಲವರ್ ಹಲ್ಲೆ ನಡೆಸಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವೇಣುಗೋಪಾಲ್ (21) ಗಾಯಗೊಂಡ ಯುವಕ.ಲವರ್ ರಾಜು ಹಾಗೂ ಆತನ ಸ್ನೇಹಿತನ ಮೇಲೆ ವೇಣುಗೋಪಾಲ್ ಪ್ರಕರಣ ದಾಖಲಿಸಿದ್ದಾರೆ.
ಜನತಾ ನಗರ ನಿವಾಸಿ ವೇಣುಗೋಪಾಲ್ ರವರು ಪಕ್ಕದ ರಸ್ತೆ ಯುವತಿ ಜೊತೆ ಪರಿಚಯವಿದ್ದ ಕಾರಣ ಆಗಾಗ ಮೊಬೈಲ್ ಮೂಲಕ ಮಾತನಾಡಿ ಚಾಟ್ ಮಾಡಿರುತ್ತಾರೆ.ಇದನ್ನ ಸಹಿಸದ ಲವರ್ ರಾಜು ಹಲ್ಲೆ ನಡೆಸಿದ್ದಾನೆ.ನಿನ್ನನ್ನು ಮಾತನಾಡಬೇಕು ಬಾ ಎಂದು ಕರೆಸಿಕೊಂಡ ರಾಜು ಹಾಗೂ ಸ್ನೇಹಿತ ಬೈಕ್ ನಲ್ಲಿ ವಿಜಯನಗರ ಹೈಟೆನ್ಷನ್ ವೈರ್ ಬಳಿಯ ಪ್ರದೇಶಕ್ಕೆ ಕರೆದೊಯ್ದು ಅವಳು ನನ್ನ ಲವರ್ ಅಂತ ಗೊತ್ತಿದ್ರೂ ಮಾತಾಡ್ತೀಯ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಂಗ್ ನ ಹಿಂಬದಿಯಿಂದ ಹಲ್ಲೆ ನಡೆಸಿದ್ದಾನೆ.ಇಬ್ಬರಿಂದ ತಪ್ಪಿಸಿಕೊಂಡ ವೇಣುಗೋಪಾಲ್ ಪೊಲೀಸರ ನೆರವಿನಿಂದ ಬಚಾವ್ ಆಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಗಾಯಗೊಂಡ ವೇಣುಗೋಪಾಲ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ರಾಜು ಹಾಗೂ ಸ್ನೇಹಿತನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…