ವ್ಯಕ್ತಿಯನ್ನ ಅಕ್ರಮವಾಗಿ ಬಂಧಿಸಿ ಹಣ ವಸೂಲಿಗೆ ಪ್ರಯತ್ನ…ಬಲವಂತವಾಗಿ ಚೆಕ್ ಪಡೆದು ಬೌನ್ಸ್ ಮಾಡಿದ ಉದ್ಯಮಿಗಳ ವಿರುದ್ದ FIR…

ವ್ಯಕ್ತಿಯನ್ನ ಅಕ್ರಮವಾಗಿ ಬಂಧಿಸಿ ಹಣ ವಸೂಲಿಗೆ ಪ್ರಯತ್ನ…ಬಲವಂತವಾಗಿ ಚೆಕ್ ಪಡೆದು ಬೌನ್ಸ್ ಮಾಡಿದ ಉದ್ಯಮಿಗಳ ವಿರುದ್ದ FIR…

  • Crime
  • June 20, 2025
  • No Comment
  • 217

ಮೈಸೂರು,ಜೂ20,Tv10 ಕನ್ನಡ

ವ್ಯಕ್ತಿಯೊಬ್ಬರನ್ನ ಅಕ್ರಮವಾಗಿ ಬಂಧಿಸಿ ಬಲವಂತವಾಗಿ ಚೆಕ್ ಗೆ ಸಹಿ ಮಾಡಿಸಿಕೊಂಡು ನಂತರ ಬೌನ್ಸ್ ಮಾಡಿದ ಆರೋಪದ ಹಿನ್ನಲೆ ಬೆಂಗಳೂರು ಮೂಲದ ನಾಲ್ವರು ಉದ್ಯಮಿಗಳ ವಿರುದ್ದ ಮೈಸೂರಿನ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೊಂದ ವ್ಯಕ್ತಿ ಕುಟುಂಬ ನ್ಯಾಯಾಲಯದ ಮೊರೆ ಹೋಗಿ ಪ್ರಕರಣ ದಾಖಲಿಸಿದ್ದಾರೆ.ಬೆಂಗಳೂರಿನ ಉದ್ಯಮಿಗಳಾದ ಗೋವಿಂದಬಾಬು ಪೂಜಾರಿ,ಸುರೇಶ್ ಎನ್ ಪೂಜಾರಿ ಹಾಗೂ ಇವರ ಸಹಚರರಾದ ಸುಖೇಶ್ ಶೆಟ್ಟಿ ,ಪ್ರಜ್ವಲ್ ಎಂಬುವರ ವಿರುದ್ದ ಎಫ್.ಐ.ಆರ್.ದಾಖಲಾಗಿದೆ.ಎನ್.ಆರ್.ಮೊಹಲ್ಲಾ ನಿವಾಸಿಗಳಾದ ಸುನಿಲ್ ಎಂಬುವರ ಪತ್ನಿ ಕವಿತಾ ರವರು ಪ್ರಕರಣ ದಾಖಲಿಸಿದ್ದಾರೆ.

ಸುನಿಲ್ ರವರು ಗೋವಿಂದ್ ಬಾಬು ಪೂಜಾರಿ ಹಾಗೂ ಸುರೇಶ್ ಎನ್ ಪೂಜಾರಿ ಒಡೆತನದ CHEFTAK FOOD & HOSPITALITY SERVICES ಉದ್ಯಮದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.ಇವರ ಮೇಲೆ ಹಣ ದುರುಪಯೋಗಪಡಿಸಿದ ಆರೋಪ ಮಾಡಿದ್ದ ಮುಖ್ಯಸ್ಥರು 2022 ರಲ್ಲಿ ಅಕ್ರಮವಾಗಿ ಬಂಧಿಸಿ ಬಲವಂತವಾಗಿ 5 ಚೆಕ್ ಗಳಿಗೆ ಸಹಿ ಮಾಡಿಸಿಕೊಂಡಿದ್ದರು.ಈ ಸಂಭಂಧ ಸುನಿಲ್ ಹಾಗೂ ಇವರ ಪತ್ನಿ ಕವಿತಾ ರವರು ಸಹಿ ಮಾಡಿದ ಚೆಕ್ ಗಳನ್ನ ವಾಪಸ್ ಕೊಡುವಂತೆ ದುಂಬಾಲು ಬಿದ್ದಿದ್ದಾರೆ.ಚೆಕ್ ಹಿಂದಿರುಗಿಸುವುದಾಗಿ ನಂಬಿಕೆ ಹುಟ್ಟಿಸುತ್ತಾ 5 ಚೆಕ್ ಗಳಿಂದ 21 ಲಕ್ಷ ರೂಗಳನ್ನ ನಮೂದಿಸಿ ಬೌನ್ಸ್ ಮಾಡಿಸಿ ವಾರೆಂಟ್ ತಂದಿದ್ದಾರೆ.ಈ ಬೆಳವಣಿಗೆಯಿಂದ ನೊಂದ ಸುನಿಲ್ ಹಾಗೂ ಪತ್ನಿ ಕವಿತಾ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಮೂರು ವರ್ಷ ವಾದ ಆಲಿಸಿದ ಮೈಸೂರು ನ್ಯಾಯಾಲಯ ಉದ್ಯಮಿಗಳ ವಿರುದ್ದ FIR ದಾಖಲಿಸುವಂತೆ ಆದೇಶ ನೀಡಿದೆ.ಇದೇ ವೇಳೆ ಕೇಸ್ ವಾಪಸ್ ಪಡೆಯುವಂತೆ ಧಂಕಿ ಹಾಕಿದ್ದಾರೆಂದು ಆರೋಪಿಸಲಾಗಿದೆ.ಸಧ್ಯ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಉದ್ಯಮಿಗಳ ವಿರುದ್ದ ಪ್ರಕರಣ ದಾಖಲಾಗಿದೆ…

Spread the love

Related post

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು…

ಬಿಸಿ ನೀರಿನ ಪಾತ್ರೆಯಲ್ಲಿ ಬಿದ್ದು ಮಗು ಸಾವು… ಹುಣಸೂರು,ಡಿ20,Tv10 ಕನ್ನಡ ಸುಡುತ್ತಿರುವ ಬಿಸಿನೀರಿನ ಪಾತ್ರೆಗೆ ಬಿದ್ದು ಹೆಣ್ಣುಮಗು ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕಿನ ವಿಜಯಗಿರಿ ಹಾಡಿಯಲ್ಲಿ ನಡೆದಿದೆ. ಆದಿವಾಸಿ…
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ… ಹುಣಸೂರು,ಡಿ19,Tv10 ಕನ್ನಡ ಕ್ಲುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ.ನಿಜಾಂ ಮೊಹಲ್ಲಾದ ನಿವಾಸಿ ಖಾಜಾಪೀರ್(44)ಕೊಲೆಯಾದ…
ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ…

ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಪುತ್ರನ ಗೂಂಡಾಗಿರಿ…ಆಸ್ತಿ ವಿಚಾರದಲ್ಲಿ ದರ್ಪ…ಮೊಬೈಲ್ ನಲ್ಲಿ ಸೆರೆಯಾದ ಬೆದರಿಕೆ… ಮಂಡ್ಯ,ಡಿ19,Tv10 ಕನ್ನಡ ಜಮೀನು ವಿಚಾರದಲ್ಲಿ ಮಾಜಿ ಶಾಸಕ ಹಾಗೂ ಪುತ್ರ ವ್ಯಕ್ತಿ ಮೇಲೆ…

Leave a Reply

Your email address will not be published. Required fields are marked *