
ಎನ್.ಆರ್.ಠಾಣೆ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ್ ಅಮಾನತು…ಪ್ರಭಾರ ನಿರೀಕ್ಷಕರಾಗಿ ಸಿಸಿಬಿ ಯ ಶಬ್ಬೀರ್ ಹುಸೇನ್ ನೇಮಕ…
- TV10 Kannada Exclusive
- July 27, 2025
- No Comment
- 13407
ಮೈಸೂರು,ಜು27,Tv10 ಕನ್ನಡ
ಮಹಾರಾಷ್ಟ್ರ ಪೊಲೀಸರುಮೈಸೂರಿನಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ 50 ಕ್ಕೂ ಹೆಚ್ಚು ಕೆಜಿ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಭಂಧಿಸಿದಂತೆ ಎನ್.ಆರ್.ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಲಕ್ಷ್ಮಿಕಾಂತ್ ತಳವಾರ್ ರವರನ್ನ ಅಮಾನತುಪಡಿಸಲಾಗಿದೆ.ಅಡಳಿತಾತ್ಮಕ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ.ನಗರಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಅಮಾನತುಗೊಳಿಸಲಾಗಿದೆ.ಸದರಿ ಸ್ಥಳಕ್ಕೆ ಸಿಸಿಬಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ನಿರೀಕ್ಷಕರಾದ ಶಬ್ಬೀರ್ ಹುಸೇನ್ ರವರನ್ನ ಪ್ರಭಾರ ಆಗಿ ನೇಮಕ ಮಾಡಲಾಗಿದೆ…