ಮೊಬೈಲ್ ನಿಂದ ಪುಸ್ತಕದ ಕಡೆಗೆ ವಿದ್ಯಾರ್ಥಿಗಳು ಬದಲಾಗಬೇಕು- ಸಿ.ಆರ್.ದಿನೇಶ್
- TV10 Kannada Exclusive
- August 12, 2025
- No Comment
- 83
ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಾ. ಎಸ್ ಆರ್ ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಓದಿನ ಮಹತ್ವದ ಬಗ್ಗೆ ಅರಿವು ಮೂಡಿಸಿ ಮೊಬೈಲ್ ನಿಂದ ಪುಸ್ತಕದ ಕಡೆಗೆ ಒಲವು ಹೆಚ್ಚು ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸಿ ಆರ್ ದಿನೇಶ್ ಅವರು ಹೇಳಿದರು.ಗ್ರಂಥಪಾಲಕಿ ಎಂ ಎನ್ ಸುಲಕ್ಷಣ ರವರು ಮಾತನಾಡಿ ಯುವ ಮನಸ್ಸುಗಳನ್ನು ಅಧ್ಯಯನದ ಕಡೆಗೆ ಹೋಗುವ ಹಾಗೆ ಮಾಡಬೇಕು ಎಂದು ಹೇಳಿದರು .
ಉಪನ್ಯಾಸಕರಾದ ಲಿಂಗಣ್ಣಸ್ವಾಮಿ, ರಂಗಸ್ವಾಮಿ ನಾಗರಾಜು, ಪ್ರಕಾಶ್ ಸ್ವಾಮಿ ಗೌಡ ,ಮಾಲತಿ ,ಭವ್ಯ ,ಮೀನಾ ,ಆದಿಲ್ ,ಸುಮಾ ರೂಪ ,ಸುಮಿತ್ರ ,ಟಿ ಕೆ ರವಿ, ನಾಗರಾಜ್ ರೆಡ್ಡಿ, ರಾಮಾನುಜಾ, ದಿನೇಶ್, ಹರೀಶ್, ವತ್ಸಲ ,ಪದ್ಮಾವತಿ ,ಅಂಬಿಕಾ, ಶೃತಿ, ಬಿಂದು, ಬಸವಣ್ಣ, ನಟರಾಜ್, ನಾಗವೇಣಿ ,ಮಿಲ್ಟನ್ ,ಮಹದೇವಸ್ವಾಮಿ ನಿಂಗಯ್ಯ ,ದಿವ್ಯ ,ನಾಗಮ್ಮ ಇದ್ದರು.