ಶೇರು ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವೃದ್ದ ದಂಪತಿಗೆ 69.27 ಲಕ್ಷ ವಂಚನೆ…
- Crime
- August 13, 2025
- No Comment
- 93
ಮೈಸೂರು,ಆ13,Tv10 ಕನ್ನಡ
ಶೇರು ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ ತೋರಿಸಿ ವೃದ್ದ ದಂಪತಿಗೆ 69.67 ಲಕ್ಷ ವಂಚಿಸಿದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಶ್ರೀರಾಂಪುರ ನಿವಾಸಿ ಮಹದೇವ್ ಸಿಂಗ್(63) ಹಾಗೂ ಇವರ ಪತ್ನಿ ಹಣ ಕಳೆದುಕೊಂಡವರು.ಫೇಸ್ ಬುಕ್ ನಲ್ಲಿ ಶೇರು ಟ್ರೇಡಿಂಗ್ ಬಗ್ಗೆ ಬಂದ ಲಿಂಕ್ ನಂಬಿದ ದಂಪತಿ ವಂಚಕರು ಸೂಚಿಸಿದಂತೆ ವಿವಿದ ಹಂತಗಳಲ್ಲಿ ಹಣ ಹೂಡಿದ್ದಾರೆ.ಮಹದೇವ್ ಸಿಂಗ್ ರವರು ತಮ್ಮ ಖಾತೆಯಿಂದ 52,27,331/- ರೂ ವರ್ಗಾಯಿಸಿದ್ದಾರೆ.ಇವರ ಪತ್ನಿ ಖಾತೆಯಿಂದ 17,40,000/- ಲಕ್ಷ ವರ್ಗಾಯಿಸಿದ್ದಾರೆ.ಲಾಭದ ಹಣ ಡ್ರಾ ಮಾಡಲು ಮುಂದಾದಾಗ ತೆರಿಗೆ ಹಾಗೂ ಮಾರ್ಜಿನ್ ಹಣ ಕಟ್ಟುವಂತೆ ಒತ್ತಾಯಿಸಿದ್ದಾರೆ.ಆಗ ವಂಚನೆಗೆ ಒಳಗಾಗಿರುವುದು ಖಚಿತವಾಗಿ ಮಹದೇವ್ ಸಿಂಗ್ ರವರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…