
ಪಬ್ ನಲ್ಲಿ ಕಿರಿಕ್ ಪ್ರಕರಣ…ಸಿಸಿಬಿ ಇನ್ಸ್ಪೆಕ್ಟರ್ ಮೋಹನ್ ಕುಮಾರ್ ಸಸ್ಪೆಂಡ್…ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಆದೇಶ…
- TV10 Kannada Exclusive
- August 18, 2025
- No Comment
- 357
ಪಬ್ ನಲ್ಲಿ ಕಿರಿಕ್ ಪ್ರಕರಣ…ಸಿಸಿಬಿ ಇನ್ಸ್ಪೆಕ್ಟರ್ ಮೋಹನ್ ಕುಮಾರ್ ಸಸ್ಪೆಂಡ್…ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಆದೇಶ…
ಮೈಸೂರು,ಆ18,Tv10 ಕನ್ನಡ
ಪಬ್ ನಲ್ಲಿ ಎಣ್ಣೆ ಹೊಡೆದು ಗಲಾಟೆ ಮಾಡಿದ ಸಿಸಿಬಿ ಇನ್ಸ್ಪೆಕ್ಟರ್ ಮೋಹನ್ ಕುಮಾರ್ ಸಸ್ಪೆಂಡ್ ಆಗಿದ್ದಾರೆ.ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.ಚಾಮುಂಡಿಬೆಟ್ಟದ ತಪ್ಪಲಿನ ಜೆಸಿ ನಗರದ ಪಬ್ ಒಂದಕ್ಕೆ ತೆರಳಿ ಕುಡಿದ ಮತ್ತಿನಲ್ಲಿ ಸಿಬ್ಬಂದಿಗಳ ಜೊತೆ ಜಗಳವಾಡಿದ್ದ ವಿಡಿಯೋ ವೈರಲ್ ಆಗಿತ್ತು.ಅವಾಚ್ಯ ಶಬ್ದಗಳನ್ನ ಬಳಸಿ ಆವಾಜ್ ಹಾಕಿದ್ದರು.ಈ ವಿಚಾರಕ್ಕೆ ಸಂಭಂಧಪಟ್ಟಂತೆ ಕಮೀಷನರ್ ಸೀಮಾ ಲಾಟ್ಕರ್ ರವರು ಶಿಸ್ತು ಕ್ರಮ ಕೈಗೊಂಡಿದ್ದಾರೆ.ಮೋಹನ್ ಕುಮಾರ್ ಗೆ ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ…