
ಪೋಕ್ಸೋ ಪ್ರಕರಣ ದಾಖಲಾಗಿದ್ದರೂ ಅಪ್ರಾಪ್ತೆ ಮನೆಗೆ ಅಕ್ರಮವಾಗಿ ಪ್ರವೇಶ…ಕೇಸ್ ದಿಕ್ಕುತಪ್ಪಿಸುವ ಹುನ್ನಾರ…ಆರೋಪಿ ವಿರುದ್ದ ಮೂರನೇ ಪ್ರಕರಣ ದಾಖಲು…
- Crime
- August 30, 2025
- No Comment
- 95
ಮೈಸೂರು,ಆ30,Tv10 ಕನ್ನಡ
ಪೋಕ್ಸೋ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದ್ದರೂ ಆರೋಪಿ ಅಪ್ರಾಪ್ತ ಬಾಲಕಿ ಮನೆಗೆ ನುಗ್ಗಿ ಕೇಸ್ ದಿಕ್ಕುತಪ್ಪಿಸಲು ಯತ್ನಿಸಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪ್ರಕರಣ ಬೆಳಕಿಗೆ ಬಂದಿದೆ.ಅಪ್ರಾಪ್ತಳ ಮನೆಗೆ ಅಕ್ರಮವಾಗಿ ನುಗ್ಗಿದ ಪೋಕ್ಸೋ ಆರೋಪಿ ವಿರುದ್ದ ಅಪ್ರಾಪ್ತಳ ತಾಯಿ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಮಂಡಿಮೊಹಲ್ಲಾ ಕೈಲಾಸಪುರಂ ನಿವಾಸಿ ರಾಜಣ್ಣ (40) ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಆರೋಪಿ.
ಅಪ್ರಾಪ್ತ ಬಾಲಕಿಯನ್ನ ರಾಜಣ್ಣ 2023 ರಲ್ಲಿ ಪುಸಲಾಯಿಸಿ ಕರೆದೊಯ್ದಿದ್ದ.ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿ ನ್ಯಾಯಾಲಯದ ಮೆಟ್ಟಿಲೇರಿದೆ.ಆರೋಪಿ ರಾಜಣ್ಣ ಜಾಮೀನು ಪಡೆದಿದ್ದ.ಇದಾದ ನಂತರ ಮತ್ತೊಮ್ಮೆ ಬಾಲಕಿಯನ್ನ ಪುಸಲಾಯಿಸಿ ಕರದೊಯ್ದು ಮತ್ತೊಂದು ಪೋಕ್ಸೋ ಪ್ರಕರಣ ಮೈಮೇಲೆ ಎಳೆದುಕೊಂಡಿದ್ದ.ಹೀಗಿದ್ದರೂ ಎರಡು ದಿನಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಕ್ರಮವಾಗಿ ಬಾಲಕಿ ಮನೆಗೆ ನುಗ್ಗಿದ್ದಾನೆ.ಪೋಕ್ಸೋ ಪ್ರಕರಣ ದಿಕ್ಕುತಪ್ಪಿಸಲು ಬಾಲಕಿಯ ಮನಸ್ಸನ್ನ ಪರಿವರ್ತಿಸಲು ಯತ್ನಿಸಿದ್ದಾನೆ.ಬಾಲಕಿಯ ಜೊತೆ ಇದ್ದಾಗಲೇ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.ಮನೆಗೆ ಅತಿಕ್ರಮವಾಗಿ ನುಗ್ಗಿದ್ದ ದೃಶ್ಯಗಳನ್ನ ಪೊಲೀಸರ ಸಮ್ಮುಖದಲ್ಲೇ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.ಪೋಕ್ಸೋ ಕೇಸ್ ದಿಕ್ಕುತಪ್ಪಿಸಲು ಯತ್ನಿಸುತ್ತಿರುವ ರಾಜಣ್ಣ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಬಾಲಕಿ ತಾಯಿ ವಿದ್ಯಾರಣ್ಯಪುರಂ ಠಾಣೆಯಲ್ಲಿ ಮೂರನೇ ಪ್ರಕರಣ ದಾಖಲಿಸಿದ್ದಾರೆ…