ಮೇಟಗಳ್ಳಿ ಠಾಣಾ ಪೊಲೀಸರ ಕಾರ್ಯಾಚರಣೆ…14 ಗೋವುಗಳ ರಕ್ಷಣೆ…ಓರ್ವನ ಬಂಧನ…
- TV10 Kannada Exclusive
- September 8, 2025
- No Comment
- 128
ಮೈಸೂರು,ಸೆ8,Tv10 ಕನ್ನಡ
ಕಸಾಯಿಖಾನೆಗೆ ಸಾಗಿಸುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿದ್ದ 14 ವಿವಿದ ತಳಿಯ ರಾಸುಗಳನ್ನ ರಕ್ಷಿಸುವಲ್ಲಿ ಮೇಟಗಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.ಈ ಸಂಬಂಧ ಫರೂಖ್ ಎಂಬಾತನ್ನ ಬಂಧಿಸಿದ್ದಾರೆ.ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಎಂಶ್ರೀ ನಗರದ ರೈಲ್ವೆ ಟ್ರಾಕ್ ಬಳಿ ಅಕ್ರಮವಾಗಿ ರಾಸುಗಳನ್ನ ಫರೂಕ್ ಎಂಬಾತ ಕಟ್ಟಿಹಾಕಿದ್ದ.ರಾತ್ರಿ ಗಸ್ತು ವೇಳೆ ಪೊಲೀಸರಿಗೆ ಮಾಹಿತಿ ದೊರೆತಿದೆ.ಕೂಡಲೇ ಕಾರ್ಯಾಚರಣೆ ನಡೆಸಿ ಗೋವುಗಳನ್ನ ರಕ್ಷಿಸಿದ್ದಾರೆ.ಫರೂಕ್ ನನ್ನು ಬಂಧಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ರಕ್ಷಿಸಲಾದ ಗೋವುಗಳನ್ನ ಪಿಂಜರಾಪೋಲ್ ವಶಕ್ಕೆ ನೀಡಲಾಗಿದೆ…