ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ…2.27 ಕೋಟಿ ಸಂಗ್ರಹ…ನಿಷೇಧಿತ 2000 ಮುಖಬೆಲೆಯ ನೋಟುಗಳು ಪತ್ತೆ…

ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ…2.27 ಕೋಟಿ ಸಂಗ್ರಹ…ನಿಷೇಧಿತ 2000 ಮುಖಬೆಲೆಯ ನೋಟುಗಳು ಪತ್ತೆ…

ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ…2.27 ಕೋಟಿ ಸಂಗ್ರಹ…ನಿಷೇಧಿತ 2000 ಮುಖಬೆಲೆಯ ನೋಟುಗಳು ಪತ್ತೆ…

ಹನೂರು,ಅ16,Tv10 ಕನ್ನಡ

ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ. 28 ದಿನಗಳ ಅವಧಿಯಲ್ಲಿ 2,27, 24,757 ರೂ ಗಳು ಸಂಗ್ರಹವಾಗಿದೆ.
ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಇಂದು ಬೆಳಿಗ್ಗೆ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿಗಳು, ಶ್ರೀ ಸಾಲೂರು ಬೃಹನ್ಮಠಾಧ್ಯಕ್ಷರು ರವರ ದಿವ್ಯಸಾನಿದ್ಯದಲ್ಲಿ ಶ್ರೀ ರಘು, ಎ. ಈ, ಕ.ಆ.ಸೇ, (ಹಿ.ಶ್ರೇಣಿ) ಮಾನ್ಯ ಕಾರ್ಯದರ್ಶಿಗಳು ರವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.ಭಾನುವಾರ, ರಜಾ ದಿನಗಳು, ಆಯುಧ ಪೂಜೆ ಹಾಗೂ ವಿಜಯದಶಮಿ ಇದ್ದಿದ್ದರಿಂದ 28 ದಿನಗಳಲ್ಲಿ ಹುಂಡಿ ಮತ್ತು ಒಟ್ಟು ಇ- ಹುಂಡಿ ಸೇರಿದಂತೆ 2,27, 24,757 ರೂ ಗಳು ಸಂಗ್ರಹವಾಗಿದೆ. ಚಿನ್ನ 46 ಗ್ರಾಂ, ಬೆಳ್ಳಿ 01 ಕೆ.ಜಿ 350 ಗ್ರಾಂ ಹುಂಡಿಯಲ್ಲಿ ದೊರೆತಿದೆ. 9 ವಿದೇಶಿ ನೋಟುಗಳು ಹಾಗೂ ನಿಷೇಧಿತ 2,000 ರೂ ಮುಖಬೆಲೆಯ 18 ನೋಟುಗಳು ಕಾಣಿಕೆಯಾಗಿ ಬಂದಿದೆ.

ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಶ್ರೀ ಮರಿಸ್ವಾಮಿ, ಕಾಗಲವಾಡಿ, ಶ್ರೀಮತಿ ಭಾಗ್ಯಮ್ಮ, ಕುಪ್ಯಾ, ಮಹದೇವಪ್ಪ, ಕೀಳನಪುರ, ಗಂಗನ ತಿಮ್ಮಯ್ಯ ಹಾರೋಹಳ್ಳಿ (ಮೆಲ್ಲಹಳ್ಳಿ), ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕ ಪತ್ರ ಸಲಹೆಗಾರರಾದ ಶ್ರೀ ಮಹದೇವು.ಸಿ, ಉಪ ಕಾರ್ಯದರ್ಶಿ ಶ್ರೀ ಚಂದ್ರಶೇಖರ.ಜಿ.ಎಲ್, ಲೆಕ್ಕಧೀಕ್ಷಕರಾದ ಶ್ರೀ ಗುರುಮಲ್ಲಯ್ಯ ಹಾಗೂ ಚಾಮರಾಜನಗರ ಜಿಲ್ಲಾಡಳಿತ ಕಛೇರಿಯ , ಕಲ್ಯಾಣಮ್ಮ, ದ್ವಿ.ದ.ಸ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಪ್ ಬರೋಡ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಜರಿದ್ದರು…

Spread the love

Related post

ಬೀದಿ ನಾಯಿಗಳ ದಾಳಿ…ನೂರಾರು ಕೋಳಿಗಳ ಮಾರಣಹೋಮ…

ಬೀದಿ ನಾಯಿಗಳ ದಾಳಿ…ನೂರಾರು ಕೋಳಿಗಳ ಮಾರಣಹೋಮ…

ಬೀದಿ ನಾಯಿಗಳ ದಾಳಿ…ನೂರಾರು ಕೋಳಿಗಳ ಮಾರಣಹೋಮ… ಮಂಡ್ಯ,ನ10,Tv10 ಬೀದಿ ನಾಯಿಗಳ ದಾಳಿಗೆ ನೂರಾರು ಕೋಳಿಗಳು ಬಲಿಯಾಗಿವೆ.ಸಾಗಾಣಿಕೆ ಘಟಕದಲ್ಲಿದ್ದ 400 ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ.ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನವಳಗೆರೆಹಳ್ಳಿ…
ಹುಲಿ ದಾಳಿಗೆ ಮೂವರು ರೈತರು ಬಲಿ ಹಿನ್ನಲೆ…ಬಂಡೀಪುರ ನಾಗರಹೊಳೆ ಸಫಾರಿ ಸಂಪೂರ್ಣ ಬಂದ್…

ಹುಲಿ ದಾಳಿಗೆ ಮೂವರು ರೈತರು ಬಲಿ ಹಿನ್ನಲೆ…ಬಂಡೀಪುರ ನಾಗರಹೊಳೆ ಸಫಾರಿ ಸಂಪೂರ್ಣ…

ಹುಲಿ ದಾಳಿಗೆ ಮೂವರು ರೈತರು ಬಲಿ ಹಿನ್ನಲೆ…ಬಂಡೀಪುರ ನಾಗರಹೊಳೆ ಸಫಾರಿ ಸಂಪೂರ್ಣ ಬಂದ್… ಬೆಂಗಳೂರು,ನ7,Tv10 ಕನ್ನಡ ಹುಲಿ ದಾಳಿ ಪ್ರಕರಣಗಳು ಸರ್ಕಾರದ ನಿದ್ದೆ ಕೆಡಿಸಿದೆ.ಮೂರು ಸಾವು ಜನಜಾನುವಾರುಗಳ ಮೇಲೆ…
KRSನಲ್ಲಿ ಮತ್ತೆ ಭದ್ರತಾ ಲೋಪ ಆರೋಪ…ನಿರ್ಬಂಧಿತ ಪ್ರದೇಶದಲ್ಲಿ ಪ್ರಭಾವಿಗಳ ಕಾರುಬಾರು…

KRSನಲ್ಲಿ ಮತ್ತೆ ಭದ್ರತಾ ಲೋಪ ಆರೋಪ…ನಿರ್ಬಂಧಿತ ಪ್ರದೇಶದಲ್ಲಿ ಪ್ರಭಾವಿಗಳ ಕಾರುಬಾರು…

KRSನಲ್ಲಿ ಮತ್ತೆ ಭದ್ರತಾ ಲೋಪ ಆರೋಪ…ನಿರ್ಬಂಧಿತ ಪ್ರದೇಶದಲ್ಲಿ ಪ್ರಭಾವಿಗಳ ಕಾರುಬಾರು… ಮಂಡ್ಯ,ನ4,Tv10 ಕನ್ನಡ ಕೆ.ಆರ್.ಎಸ್.ನಲ್ಲಿ ಮತ್ತೆ ಭದ್ರತಾ ಲೋಪದ ಕೂಗು ಕೇಳಿ ಬರುತ್ತಿದೆ.ಪದೇ ಪದೇ ಭದ್ರತಾ ಲೋಪವಾದರೂ ಸಂಬಧಪಟ್ಟವರು…

Leave a Reply

Your email address will not be published. Required fields are marked *